Mangaluru ಪಾರ್ಟ್‌ಟೈಂ ಉದ್ಯೋಗ: ವಂಚನೆ
Team Udayavani, Nov 1, 2023, 11:51 PM IST
ಮಂಗಳೂರು: ಪಾರ್ಟ್ ಟೈಂ ಉದ್ಯೋಗ ನೆಪದಲ್ಲಿ ವ್ಯಕ್ತಿಯೋರ್ವರಿಂದ 6.50 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಗೆ ಅ. 16ರಂದು ವ್ಯಕ್ತಿಯೋರ್ವ ಟೆಲಿಗ್ರಾಂ ಖಾತೆಯ ಮೂಲಕ ಪಾರ್ಟ್ ಟೈಂ ಉದ್ಯೋಗಕ್ಕೆ ಸಂಬಂಧಿಸಿ ಸಂದೇಶ ಕಳುಹಿಸಿದ್ದ. ಟ್ಯೂನ್ ಕಂಪೆನಿಯ ಉತ್ಪನ್ನಗಳಿಗೆ ರೇಟಿಂಗ್ಸ್ ನೀಡುವ ಕೆಲಸವನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ಕಮಿಷನ್ ಮತ್ತು ಬೋನ್ ನೀಡುವುದಾಗಿಯೂ ಕೆಲಸವನ್ನು ಆರಂಭಿಸಲು ಮೂಲದರವನ್ನು ನೀಡುವಂತೆಯೂ ತಿಳಿಸಿದ್ದ. ಇದನ್ನು ನಂಬಿದ ದೂರುದಾರರು ಆರಂಭದಲ್ಲಿ 10,077 ರೂ. ಪಾವತಿಸಿ ಕೆಲಸ ಆರಂಭಿಸಿದರು. ಅನಂತರ ಅವರಿಂದ ಲಕ್ಸುರಿ ಪ್ರಾಡಕ್ಟ್ ನೆಪದಲ್ಲಿ ಅ. 18ರಿಂದ 26ರ ವರೆಗೆ ಹಂತ ಹಂತವಾಗಿ 6.50 ಲ.ರೂ.ಗಳನ್ನು ವರ್ಗಾಯಿಸಿಕೊಂಡು ಯಾವುದೇ ಹಣ ಮರುಪಾವತಿ ಮಾಡದೆ ಮೋಸ ಮಾಡಿದ್ದಾಗಿ ದೂರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.