Daily Horoscope: ಉದ್ಯೋಗ ಸ್ಥಾನದಲ್ಲಿ ಕ್ರಿಯಾಶೀಲತೆಯನ್ನು ತೆರೆದಿಡಲು ವಿಪುಲ ಅವಕಾಶಗಳು
Team Udayavani, Nov 2, 2023, 7:12 AM IST
ಮೇಷ: ಸಂದಿಗ್ಧತೆಯ ದಿನವಾದರೂ ನಿಶ್ಚಿಂತರಾಗಿ ಕಾರ್ಯಪ್ರವೃತ್ತರಾಗುವಿರಿ. ಉದ್ಯೋಗ ಸ್ಥಾನದಲ್ಲಿ ನಿರಾತಂಕ. ಸ್ವಂತ ಉದ್ಯಮ ಉತ್ಪನ್ನಗಳ ಮಾರಾಟ ಜಾಲ ವಿಸ್ತರಣೆ. ಆಪ್ತರಿಂದ ಅಪೇಕ್ಷಿತ ನೆರವು ಸಕಾಲದಲ್ಲಿ ಲಭ್ಯ. ದೂರದೂರಿನಲ್ಲಿರುವ ನೆಂಟರ ಆಗಮನ.
ವೃಷಭ: ಮಂದಗತಿಯಲ್ಲಿ ದಿನಾರಂಭ. ಕಾರ್ಯದಲ್ಲಿ ನಿರುತ್ಸಾಹ. ಅರ್ಧ ದಿನ ಕಳೆದ ಬಳಿಕ ಹುರುಪು ತುಂಬುವುದು. ಒಂದೇ ಉದ್ಯಮದಲ್ಲಿ ಕೇಂದ್ರೀಕರಿಸಲು ಯತ್ನಿಸಿದರೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ.
ಮಿಥುನ: ಏನೋ ಕಸಿವಿಸಿಯೆಂದು ಕೈಕಟ್ಟಿ ಕೂರಬೇಡಿ. ಉದ್ಯೋಗ ಸ್ಥಾನದಲ್ಲಿ ಕ್ರಿಯಾಶೀಲತೆಯನ್ನು ತೆರೆದಿಡಲು ವಿಪುಲ ಅವಕಾಶಗಳು. ಕಾರ್ಯಸ್ಥಾನಕ್ಕೆ ಗಣ್ಯರ ಭೇಟಿ. ಹೊಸಬರ ಪರಿಚಯದಿಂದ ವ್ಯವಹಾರ ವಿಸ್ತರಣೆಗೆ ಲಾಭ.
ಕರ್ಕಾಟಕ: ಲವಲವಿಕೆಯಲ್ಲಿ ದಿನಾರಂಭ. ಸಹೋದ್ಯೋಗಿಗಳೊಂದಿಗೆ ಸೌಹಾರ್ದಪೂರ್ಣ ನಡವಳಿಕೆ. ಪ್ರತಿಭೆಗೆ ತಕ್ಕ ಗೌರವ. ಸ್ವಂತ ಉದ್ಯಮ ವಿಸ್ತರಣೆಗೆ ಯೋಜನೆ. ನೌಕರರ ಸಮಸ್ಯೆ ನಿವಾರಣೆ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ.
ಸಿಂಹ: ಮಿಶ್ರಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಭೂ ವ್ಯವಹಾರದಲ್ಲಿ ಲಾಭ. ಸರಕಾರಿ ಕಾರ್ಯಾಲಯದ ಕೆಲಸ ಸುಗಮ. ದೇವಾಲಯ ದರ್ಶನ.
ಕನ್ಯಾ: ಕೆಲವಾರು ಉದ್ಯೋಗಗಳ ಬಳಿಕ ಒಂದೆಡೆ ಸ್ಥಿರವಾಗುವ ಪ್ರಯತ್ನ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಹಕಾರ. ಸಾರ್ವಜನಿಕ ಸಂಪರ್ಕದಲ್ಲಿ ಒಳ್ಳೆಯ ಹೆಸರು. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ವೃತ್ತಿಪರರಿಗೆ ಎಂದಿನಂತೆ ಕೆಲಸದ ಒತ್ತಡ.
ತುಲಾ: ಪೂರ್ಣ ದೈವಾನುಗ್ರಹವಿರುವುದರಿಂದ ಆತಂಕ ಬೇಡ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ತಕ್ಕ ಗೌರವ. ಮೇಲಧಿಕಾರಿಗಳಿಂದ ಶ್ಲಾಘನೆ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ.
ವೃಶ್ಚಿಕ: ದೇವರ ಪ್ರಸಾದವಾಗಿ ಬಂದಿರುವುದನ್ನು ಸಂತೋಷದಿಂದ ಸ್ವೀಕರಿಸಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯೋಗದಲ್ಲಿ ಆನಂದ. ಉದ್ಯಮದಲ್ಲಿ ನೌಕರವರ್ಗದ ಸಹಕಾರ. ಹೊಸ ಪಾಲುದಾರರ ಸೇರ್ಪಡೆ ಬಗೆಗೆ ಸಮಾಲೋಚನೆ.
ಧನು: ಅಲ್ಪಾವಧಿ ಹೂಡಿಕೆಗಳ ಯೋಚನೆ ಬೇಡ. ಸಣ್ಣ ಉಳಿತಾಯ ಯೋಜನೆಯಲ್ಲಿ ಲಾಭ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಗೌರವ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಸರಿಯಾದ ಸ್ಪಂದನ. ಕೃಷಿಭೂಮಿಯಲ್ಲಿ ಹಣ ವಿನಿಯೋಗ.
ಮಕರ: ಅನಿರೀಕ್ಷಿತ ಧನಲಾಭ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳಿಗೆ ಅವಕಾಶ. ಪ್ರತಿಭೆಗೆ ಸೂಕ್ತ ಗೌರವ. ಹೊಸ ಉದ್ಯೋಗ ಅನ್ವೇಷಣೆ ಪ್ರಯತ್ನ ಮುಂದುವರಿಕೆ. ಹಿರಿಯರ ಆವಶ್ಯಕತೆಗಳನ್ನು ಗಮನಿಸಿ. ದೇವತಾರ್ಚನೆಯಲ್ಲಿ ಆಸಕ್ತಿ.
ಕುಂಭ: ಸಂತೃಪ್ತ ಮನೋಭಾವದಲ್ಲಿ ದಿನಾ ರಂಭ. ಉದ್ಯೋಗ ರಂಗದಲ್ಲಿ ಕಿರಿಯರಿಗೆ ಮಾರ್ಗ ದರ್ಶನ ಹಾಗೂ ಸಮವಯಸ್ಕರಿಗೆ ಪ್ರೋತ್ಸಾಹ. ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ, ಯಂತ್ರೋಪಕರಣಗಳು ಮೊದಲಾದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
ಮೀನ: ಶನಿಮಹಾತ್ಮನ ಅನುಗ್ರಹದಿಂದ ವ್ಯವಹಾರಗಳಲ್ಲಿ ನಿಧಾನವಾಗಿ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿಯ ಮನೋಭಾವ. ಆಪ್ತರಿಂದ ಸಕಾಲದಲ್ಲಿ ಸಹಾಯ. ಉದ್ಯಮದಲ್ಲಿ ಪರಿವರ್ತನೆಗೆ ದೀರ್ಘಾವಧಿ ಯೋಜನೆ. ಸರಕಾರಿ ಅಧಿಕಾರಿಗಳು ಮತ್ತು ನೌಕರರ ಅನುಕೂಲಕರ ಸ್ಪಂದನ. ಸೇವಾ ಮಾದರಿಯ ಉದ್ಯೋಗಸ್ಥರಿಗೆ ಅಧಿಕ ಯಶಸ್ಸು. ಸಂಗಾತಿ ಮತ್ತು ಮಕ್ಕಳ ಪೂರ್ಣ ಸಹಕಾರ. ಸಮಾಜದಲ್ಲಿ ಗೌರವ ವೃದ್ಧಿ ಮನೆಯಲ್ಲಿ ನೆಮ್ಮದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.