UV Fusion: ಎಡಕಲ್ಲು ಗುಡ್ಡದ ಮೇಲೆ ಪುಟ್ಟಣ್ಣ ಕಣಗಾಲ್
Team Udayavani, Nov 3, 2023, 7:45 AM IST
ಒಂದು ಶನಿವಾರದ ರಾತ್ರಿಯಂದು ಮನೆಯ ಜಗಲಿಯಲ್ಲಿ ಕುಳಿತಿದ್ದ ನನಗೆ ಎಷ್ಟೋ ದಿನಗಳಿಂದ ಅಮ್ಮನ ಬಳಿ ಕೇಳಬೇಕು ಎಂದುಕೊಂಡು ಮರೆತು ಹೋಗುವ ಪ್ರಶ್ನೆ ಏಕಾಯಕಿಯಾಗಿ ತಲೆಗೆ ಹೊಕಿತ್ತು. ಇನ್ನು ಸ್ವಲ್ಪ ಸಮಯ ಹೋದರೆ ಮತ್ತೆ ಮರೆತು ಹೊದೀತು ಏನೋ! ಎಂದು ಮನೆ ಒಳಗೆ ಹೋಗಿ ಅಮ್ಮನ ಬಳಿ ಕೇಳಿದೆ ಅಮ್ಮ ಪುಟ್ಟನ ಕಣಗಾಲ್ ಅವರ ಸಿನಿಮಾಗಳು ಎಲ್ಲಾ ಹೇಗಿದ್ದಾವು ಅಂತ ? ಅದಕ್ಕೆ ಅವರ ಉತ್ತರ, ನಾನು ನಿನಗೆ ಹೇಳುವುದಕ್ಕಿಂತ ನೀನೇ ಸ್ವತಃ ಅವರ ಚಲನಚಿತ್ರವನ್ನು ನೋಡು ಎಂದರು, ಅವರ ಚಲನಚಿತ್ರ ನಿನ್ನ ನಿರೀಕ್ಷೆಯನ್ನು ಎಂದಿಗೂ ಕೆಡಿಸುವುದಿಲ್ಲ.
ನಾ ನೋಡಿದಂತೆ,
ಸುಮಾರು ಅರವತ್ತು ; ಎಪ್ಪತ್ತರ ದಶಕ ಸಿನಿಮಾ ರಂಗದಲ್ಲಿ ಸಾಹಿತ್ಯಗಳ ಅಭಾವವಿದ್ದವು. ಕಥೆ ಇದ್ದಲಿ ವಾಸ್ತವಿಕತೆ ಇರುವುದಿಲ್ಲ, ವಾಸ್ತವತೆ ಇದ್ದಲ್ಲಿ ಚಾಕುರುಕದ ಕಥೆ ಇರುವುದೇ ಇಲ್ಲ. ಸಾಹಿತ್ಯಕ್ಕೆ ಅರ್ಥ ಎಂಬುದು ದೊರಕಿದ್ದೆ ಪುಟ್ಟನ ಕಣಗಲ್ ಅವರ ಆಗಮನದಲ್ಲಿ. ಇದೆಲ್ಲವೂ ಶುರುವಾಗಿದ್ದು 1969 ರಲ್ಲಿ ಬಿಡುಗಡೆಗೊಂಡ ಬೆಳ್ಳಿ ಮೋಡ ಎಂಬ ಚಲನಚಿತ್ರದ ಮೂಲಕ.
1969ರಲ್ಲಿ ಶುರುವಾದ ಕಣಗಾಲ್ ಅವರ ಜೀವನ ಅದೆಷ್ಟೋ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ದೊರಕುವ ತನಕ ಸಾಗಿತು. ಇವರ ಪಯಣ ಉದ್ದಕು ಸಮಾಜಕ್ಕೆ ಕ್ರಾಂತಿಕಾರಿ, ಅರ್ಥಮಯ ಹಾಗು ಜನಜಾಗೃತಿ ಸಿನಿಮಾಗಳನ್ನೆ ನೀಡುತ್ತಾ ಬಂದರು.
ಕಣಗಾಲ್ ರವರ ನಿರ್ದೇಶನದ ಕಲೆ ವರ್ತಮಾನದಲ್ಲಿ ಇರುವ ಯಾವ ನಿರ್ದೇಶಕರಲ್ಲೂ ಕಾಣ ಸಿಗದು. ಸಿನಿಮಾಗಳು ಸಹ ಸಿಂಪಲ್ ಕಥೆಗಳನ್ನು ಹೊಂದಿರುತ್ತದೆ. ಕಥೆ ಸಾಧಾರಣವಾಗಿದ್ದರು ಕಥೆಯಲ್ಲಿನ ಭಾವನತ್ಮಕ ಸನ್ನಿವೇಶ ಹಾಗು ಕಥೆಯನ್ನು ಮುಕ್ತಯಗೊಳಿಸುವ ಪರಿ ಪ್ರೇಕ್ಷಕರನ್ನು ಸಿನೆಮಾ ಟಾಕೀಸ್ ನಲ್ಲಿ ಸಿಳ್ಳೆ ಹೊಡೆಯಲು ಹುರಿದುಂಬಿಸುವುದರಲ್ಲಿ ಮತ್ತೂಂದು ಮಾತಿಲ್ಲ.
ಇವರ ಅನೇಕ ಚಿತ್ರಗಳು ಸ್ತ್ರೀ ಪ್ರಧಾನ ವಾಗಿದ್ದು ಈ ಸಾಲಿನಲ್ಲಿ ಬರುವ ಎಡಕಲ್ಲು ಗುಡ್ಡದ ಮೇಲೆ ಚಲನಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ದೊರಕಿದೆ ಇದು ಇವರ ಬದುಕಿನ ಮಹತ್ತರ ಸಾಧನೆಯು ಕೂಡ ಹೌದು. ಇಂತಹ ಚಿತ್ರವನ್ನು ಆ ಕಾಲದಲ್ಲಿ ಮಾಡಬೇಕಾದರೆ ತುಂಬಾ ಧೈರ್ಯ ಬೇಕು. ಮದುವೆಯಾದ ಗೃಹಿಣಿ ಇನ್ನೋರ್ವ ಯುವಕನೊಟ್ಟಿಗೆ ಸಂಬಂಧವನ್ನು ಬೆಳೆಸಿಕೊಳ್ಳುವ ಕಥೆ. ಅದನ್ನು ಎಷ್ಟು ಸೂಕ್ಷ್ಮವಾಗಿ ತೋರಿಸಿದ್ದಾರೆಂದರೆ ಎಲ್ಲಿಯೂ ಅಶ್ಲೀಲ ಎನ್ನಿಸುವುದಿಲ್ಲ. ಇಂತಹ ಕೈಚಳಕ ಅವರಿಗೆ ಮಾತ್ರ ಇತ್ತು.
ಇನ್ನು 1984 ಮಸಣದ ಹೂವು – ಚಿತ್ರ ಪೂರ್ಣ ವಾಗುವ ಮುನ್ನ ಪುಟ್ಟಣ್ಣ ತೀರಿಹೋದರು. ಮಿಕ್ಕ ಭಾಗವನ್ನು ಕೆ ಎಸ್ ಎಲ್ ಸ್ವಾಮಿ ನಿರ್ದೇಶಿಸಿದರು.
2006 ಸಾವಿರ ಮೆಟ್ಟಿಲು – ತುಂಬಾ ಹಿಂದೆ ಪುಟ್ಟಣ್ಣ ಅರ್ಧಕ್ಕೇ ನಿಲ್ಲಿಸಿದ್ದ ಚಿತ್ರ.
ಅವರ ಒಟ್ಟು 38 ಚಿತ್ರಗಳಲ್ಲಿ ನಾನು 21 ಚಿತ್ರಗಳನ್ನು ನೋಡಿದ್ದೇನೆ.
ಇವರ ಚಿತ್ರಗಳಲ್ಲಿ ಸಾಮಾನ್ಯವಾಗಿ ಸಂಗೀತ ಮತ್ತು ಹಾಡುಗಳು ಚೆನ್ನಾಗಿರುತ್ತವೆ. ಚಿತ್ರೀಕರಣ ಕರ್ನಾಟಕದ ಒಳ್ಳೊಳ್ಳೆಯ ನಿಸರ್ಗದ ಮಡಿಲುಗಳಲ್ಲಿ ನಡೆದಿರುತ್ತದೆ. ಫೋಟಾಗ್ರಫಿ ಅದ್ಭುತವಾಗಿರುತ್ತದೆ. ಕನ್ನಡ ಭಾಷೆಗೆ ಪ್ರಾಶಸ್ತ್ಯ ಇರುತ್ತದೆ. ಹೆಚ್ಚಿನ ಮಟ್ಟಿಗೆ ಕಾದಂಬರಿಗಳ ಆಧಾರದ ಮೇಲೆ ಚಿತ್ರ ರೂಪಿತವಾಗಿರುತ್ತದೆ, ಇವರ ಗರಡಿಯಲ್ಲಿ ಪಳಗಿದ ನಾಯಕ ನಾಯಕಿಯರು ಬಹುಕಾಲ ಪ್ರಸಿದ್ಧಿ ಪಡೆಯುತ್ತಾರೆ.
ಇವೆಲ್ಲವೂ ಪ್ಲಸ್ ಅಂಶಗಳಾದರೆ ಮುಖ್ಯವಾದ ಮೈನಸ್ ಅಂಶಗಳೆಂದರೆ – ಇವರ ಚಿತ್ರಗಳು ಅತಿ ಹೆಚ್ಚು ಸೆಂಟಿಮೆಂಟಲ್ ಆಗಿರುತ್ತವೆ, ಸ್ತ್ರೀ ಪ್ರಧಾನ ಪಾತ್ರಗಳು ಕೂಡ ಸಮಸ್ಯೆಗಳನ್ನು ಎದುರಿಸದೆ ದುರಂತದಲ್ಲಿ ಕೊನೆ ಕಾಣುತ್ತದೆ. ಸೋತ ನಾಯಕಿ ಅಥವಾ ನಾಯಕ ಸಿಡಿದೆದ್ದು ನಿಲ್ಲುವ ಬದಲು ಆತ್ಮಹತ್ಯೆಗೆ ಶರಣಾಗುವುದೇ ಜಾಸ್ತಿ! ಕನ್ನಡ ನಾಡಿನ ಪರಿಸರದ ಚೆಲುವನ್ನು ಚಲನ ಚಿತ್ರಗಳಲ್ಲಿ ಅಭಿವ್ಯಕ್ತಗೊಳಿಸಿ, ಸೊಬಗುಗೊಳಿಸಿ, ಇಮ್ಮಡಿಸಿವುರದಲ್ಲಿ ಪುಟ್ಟಣ್ಣನವರು ಎತ್ತಿದ ಕೈ.
ರಕ್ಷಿತ್ ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.