Belagavi ; ರಾಜ್ಯೋತ್ಸವದಂದು ಕರಾಳ ದಿನ: ಎಂಇಎಸ್ ವಿರುದ್ಧ ಎಫ್ ಐ ಆರ್
ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ...
Team Udayavani, Nov 2, 2023, 10:08 PM IST
ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ನಾಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ನಡೆದ ಕರಾಳ ದಿನಾಚರಣೆಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಆರೋಪದ ಮೇಲೆ ಎಂಇಎಸ್ ನ ಎಂಟು ಜನ ಮುಖಂಡರು ಸೇರಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.
ಪ್ರತಿ ವರ್ಷ ನಾಡ ದ್ರೋಹಿ ಚಟುವಟಿಕೆ ನಡೆಸುತ್ತಿರುವ ಎಂಎಸ್‌ಗೆ, ಈ ಸಲ ಪೊಲೀಸರು ಕರಾಳ ದಿನಾಚರಣೆ ನಡೆಸಲು ಅನುಮತಿ ನೀಡಿರಲಿಲ್ಲ. ಆದರೂ ಎಂಎಸ್ ಮುಖಂಡರು ಕರಾಳ ದಿನ ನಡೆಸಿ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂಇಎಸ್ ಮುಖಂಡರಾದ ಮಾಲೋಜಿರಾವ್ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಳೆ, ರಂಜಿತ್ ಚವಾಣ, ಅಮರ ಯಳ್ಳೂರಕರ, ಪಾಲಿಕೆ ಸದಸ್ಯ ರವಿ ಸಾಳುಂಕೆ, ವೈಶಾಲಿ ಭಾತಖಾಂಡೆ, ಗಜಾನನ ಪಾಟೀಲ, ಶಿವಾಜಿ ಸುಂಠಕರ, ಎಂ.ಜೆ. ಪಾಟೀಲ, ಆರ್.ಎಂ. ಚೌಗಲೆ, ನೇತಾಜಿ ಜಾಧವ, ಸರಿತಾ ಪಾಟೀಲ, ಸರಸ್ವತಿ ಪಾಟೀಲ, ವಿಕಾಸ ಕಲಘಟಗಿ ಸೇರಿದಂತೆ ಅನೇಕರ ವಿರುದ್ಧ ಮಾರ್ಕೆಟ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಅನೇಕರ ಹೆಸರು ಇದರಲ್ಲಿ ಸೇರ್ಪಡೆ ಆಗುವ ಸಾಧ್ಯತೆ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.