Television ಎಲ್ಲ ಸವಾಲುಗಳನ್ನು ಮೀರಿ ಬೆಳೆದಿದೆ ಕನ್ನಡ ಕಿರುತೆರೆ
Team Udayavani, Nov 3, 2023, 5:47 AM IST
ಕರ್ನಾಟಕಕ್ಕೆ ಐವತ್ತು ವರ್ಷ ತುಂಬಿರುವ ಸಂದರ್ಭದಲ್ಲಿ ಕರ್ನಾ ಟಕದ ಬೇರೆ ಬೇರೆ ಕ್ಷೇತ್ರಗಳಂತೆ ಕಿರುತೆರೆ ಕ್ಷೇತ್ರ ಕೂಡ ಸಾಕಷ್ಟು ಹಿರಿದಾಗಿ ಬೆಳೆದಿದೆ. ಒಮ್ಮೆ ಹಿಂದಿರುಗಿ ನೋಡಿದರೆ, ನಾವು ಇಷ್ಟು ಮುಂದೆ ಬಂದಿದ್ದೇವಾ? ಎಂದು ನಮಗೇ ಆಶ್ಚರ್ಯವಾಗುವಂತೆ ಕನ್ನಡ ಕಿರುತೆರೆ ವಿಸ್ತಾರವಾಗಿದೆ.
1987ರಲ್ಲಿ ನಾನು ಕನ್ನಡ ಕಿರುತೆರೆ ಪ್ರವೇಶಿಸಿ ದಾಗ ಇದ್ದಿದ್ದು ದೂರದರ್ಶನ(ಡಿಡಿ)ಮಾತ್ರ. ಇಲ್ಲಿ ದಿನಕ್ಕೆ ಕೆಲವೇ ಗಂಟೆಗಳಷ್ಟು ಹೊತ್ತು ಮಾತ್ರ ಕನ್ನಡದ ಕಾರ್ಯಕ್ರಮಗಳು ಪ್ರಸಾರ ವಾಗುತ್ತಿದ್ದವು. ವಾರಕ್ಕೆ ಒಂದು ಎಪಿಸೋಡ್‌ನಂತೆ 30 ನಿಮಿಷದ ಅವಧಿಯ ಒಂದೊಂದು ಧಾರಾವಾಹಿ ಮಾತ್ರ ಬರುತ್ತಿತ್ತು. ಆಗ ಧಾರಾ ವಾಹಿಯ ಒಂದು ಸಂಚಿಕೆ ಸಿದ್ಧಪಡಿಸುವುದೇ ನಿರ್ಮಾಪಕರು, ನಿರ್ದೇಶಕರು ಮತ್ತು ತಂಡಕ್ಕೆ ದೊಡ್ಡ ಸವಾಲಾಗಿತ್ತು.
ಆಗ ಇಂಥ ಧಾರಾವಾಹಿಗಳಿಗೆ ಪ್ರಾಯೋ ಜಕರು ಕೂಡ ಇರುತ್ತಿರಲಿಲ್ಲ. 2-3 ನಿಮಿಷದ ಜಾಹೀರಾತುಗಳನ್ನೂ ಧಾರಾವಾಹಿ ಮಾಡು ವವರೇ ಹುಡುಕಿಕೊಳ್ಳಬೇಕಿತ್ತು. ಸುಮಾರು 90ರ ದಶಕದ ಆರಂಭದವರೆಗೂ ಕನ್ನಡ ಕಿರುತೆರೆ ಅಂದರೆ ಹೀಗೇ ಇತ್ತು. ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದವರು, ಕಿರುತೆರೆಯನ್ನು ನಂಬಿ ಕೊಂಡಿದ್ದವರು, ಕಿರುತೆರೆಗೆ ಬರುತ್ತಿದ್ದವರ ಸಂಖ್ಯೆ ತುಂಬಾ ಕಡಿಮೆಯಿತ್ತು. ಆಗ ಸಿನೆಮಾದಲ್ಲಿ ಅಭಿನಯಿಸುತ್ತಿದ್ದ ಕಲಾವಿದರು, ತಂತ್ರಜ್ಞರು
ಟಿವಿ ಕಾರ್ಯಕ್ರಮಗಳು, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಹಿಂದೇಟು ಹಾಕುತ್ತಿದ್ದರು. ಕಿರುತೆರೆ ಬಗ್ಗೆ ಅನೇಕರಿಗೆ ಒಂಥರಾ ಕೀಳರಿಮೆಯ ಮನಃಸ್ಥಿತಿಯಿತ್ತು.
1992ರಲ್ಲಿ ಉದಯ ಟಿವಿ ಆರಂಭವಾದ ಮೇಲೆ ಧಾರಾವಾಹಿಗಳಿಗೆ ಒಂದು ದೊಡ್ಡ ವೇದಿಕೆ ಸೃಷ್ಟಿಯಾಯಿತು. ಅಲ್ಲಿಂದ ಕನ್ನಡ ಕಿರು ತೆರೆಯಲ್ಲಿ ಮೆಗಾ ಸೀರಿಯಲ್ ಜಮಾನ ಶುರು ವಾಯಿತು. “ಶಕ್ತಿ’ ಎಂಬ ಕನ್ನಡದ ಮೊದಲ ಮೆಗಾ ಸೀರಿಯಲ್ ನಿರ್ದೇಶನ ಮಾಡುವ ಅವ ಕಾಶ ನನ್ನದಾಯಿತು. ಅದಾದ ಕೆಲವೇ ವರ್ಷ ಗಳಲ್ಲಿ ಒಂದರ ಹಿಂದೊಂದರಂತೆ ಹಲವು ಖಾಸಗಿ ವಾಹಿನಿಗಳು ಕಿರುತೆರೆಗೆ ತೆರೆದುಕೊಂಡವು.
ಕೇವಲ 35 ವರ್ಷದ ಹಿಂದೆ ನೂರಾರು ಜನ ಕೆಲಸ ಮಾಡುತ್ತಿದ್ದ, ಕೆಲವು ಲಕ್ಷಗಳಷ್ಟೇ ವೀಕ್ಷಕರಿದ್ದ ಕಿರುತೆರೆಯಲ್ಲಿ, ಇಂದು ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆಯನ್ನು ನೋಡುವ ವೀಕ್ಷಕರ ಸಂಖ್ಯೆ ಈಗ 3-4 ಕೋಟಿ ದಾಟಿದೆ! ಕನ್ನಡ ಕಿರುತೆರೆಯಲ್ಲಿ ಈಗ ತಂತ್ರಜ್ಞಾನವೂ ಸ್ಮಾರ್ಟ್ ಆಗಿದೆ. ಕನ್ನಡ ಕಿರುತೆರೆಯ ಮೂಲಕ ಪ್ರತೀ ದಿನ ಹೊಸ ಹೊಸ ಕಲಾವಿದರು, ತಂತ್ರಜ್ಞರು, ಬರಹಗಾರರು ಕನ್ನಡಿಗರಿಗೆ ಪರಿ ಚಯವಾಗುತ್ತಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕನ್ನಡ ಕಿರುತೆರೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ಆಶ್ರಯಿಸಿದ್ದಾರೆ. ಕಲಾ ವಿದರು, ತಂತ್ರಜ್ಞರಿಗೂ ಒಳ್ಳೆಯ ಸಂಭಾವನೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.
ಇಂದು ಕನ್ನಡ ಕಿರುತೆರೆಯ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲೂ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ತೆಲುಗಿನಲ್ಲಿ ಕನ್ನಡದ 280ಕ್ಕೂ ಹೆಚ್ಚಿನ ಕಲಾವಿದರು ಅಭಿನಯಿ ಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು!
ರವಿಕಿರಣ್, ಕಿರುತೆರೆ ನಟ, ನಿರ್ಮಾಪಕ ಮತ್ತು ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.