Delhi ತುಲಾಭಾರದ ವೇಳೆ ಹಗ್ಗ ಕಳಚಿ ಪೇಜಾವರ ಶ್ರೀಗಳ ತಲೆಗೆ ಬಿದ್ದ ತಕ್ಕಡಿಯ ಸರಳು
Team Udayavani, Nov 3, 2023, 3:43 PM IST
ಹೊಸದಿಲ್ಲಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಷಷ್ಟ್ಯಬ್ದ ಪ್ರಯುಕ್ತ ದಿಲ್ಲಿಯಲ್ಲಿ ಅಭಿಮಾನಿಗಳು ಮತ್ತು ಶಿಷ್ಯರು ಸಂಯೋಜಿಸಿರುವ ಮೂರು ದಿನಗಳ ಪ್ರಸನ್ನಾಭಿವಂದನಮ್ ಅಭಿವಂದನ ಕಾರ್ಯಕ್ರಮದಲ್ಲಿ ತುಲಾಭಾರ ನಡೆಸುತ್ತಿದ್ದ ವೇಳೆ ತಕ್ಕಡಿಯ ಹಗ್ಗ ತುಂಡಾಗಿ ಶ್ರೀಗಳಿಗೆ ಸಣ್ಣ ಪ್ರಮಾಣದ ತರಚಿದ ಗಾಯವಾದ ಘಟನೆ ನಡೆದಿದೆ.
ತಲೆಗೆ ಸಣ್ಣ ಗಾಯವಾಗಿದ್ದು, ಶ್ರೀಗಳು ಅನಾಹುತದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಪೇಜಾವರ ಮಠದ ಮೂಲಗಳು, ಭಕ್ತರು ತಿಳಿಸಿದ್ದಾರೆ.
ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಮಠದ ವಿಪ್ರರು, ಭಕ್ತರು ಆತಂಕಗೊಂಡು ಓಡೋಡಿ ಬಂದರು, ಆದರೆ ನಗುಮುಖದಲ್ಲೇ ಕೈ ಸನ್ನೆ ಮಾಡಿ ಏನೂ ಆಗಲಿಲ್ಲ ಎಂದು ಶ್ರೀಗಳು ಸೂಚಿಸಿದರು.
ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ವಿಶ್ವಸ್ತರಾಗಿರುವ ಶ್ರೀಗಳ ಪ್ರಸನ್ನಾಭಿವಂದನಮ್ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಾಲನೆ ನೀಡಲಾಗಿತ್ತು. ಮೂರು ದಿನಗಳ ಕಾಲ ಭಗವದ್ಗೀತಾ ಜೀವನ್ಮಾರ್ಗದರ್ಶಿನಿ , ಅಭಿಷೇಕ , ವಿಶೇಷ ಪೂಜೆ ಗಳು, ಧಾರ್ಮಿಕ ಚಿಂತನೆಗಳು ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.