ಕೃಷಿ ಕ್ಷೇತ್ರಕ್ಕೆ ಬಹುಪಯೋಗಿ ಯಂತ್ರ ಪರಿಚಯ


Team Udayavani, Nov 4, 2023, 3:44 PM IST

ಕೃಷಿ ಕ್ಷೇತ್ರಕ್ಕೆ ಬಹುಪಯೋಗಿ ಯಂತ್ರ ಪರಿಚಯ

ಬಂಗಾರಪೇಟೆ: ಯಾವುದೇ ವಿಜ್ಞಾನಿಗಳ ಮಾರ್ಗ ದರ್ಶನವಿಲ್ಲ, ತಾಂತ್ರಿಕವಾಗಿ ಕಟುಂಬದಲ್ಲಿ ಯಾರೂ ಓದಿಲ್ಲ, ಬಡ ಕುಟುಂಬದಲ್ಲಿ ಹುಟ್ಟಿ ಜೀವನ ನಡೆಸುವ ಕಷ್ಟಕಾಲದಲ್ಲಿ 13ನೇ ವಯಸ್ಸಿನಲ್ಲಿಯೇ ವಿಜ್ಞಾನ ವಿಭಾಗದ ಶಿಕ್ಷಕರೊಬ್ಬರ ಮಾರ್ಗ ದರ್ಶನದಲ್ಲಿ ಬಡವರ ಪಾಲಿನ ಕೃಷಿ ಉಪಕರಣವನ್ನು ತಯಾರಿಸಿ ಪ್ರಸ್ತುತ ವಿಶ್ವಮಟ್ಟದಲ್ಲಿ ಹೆಸರುನ್ನು ಮುಂಚೂಣಿಯಲ್ಲಿ ತಂದಿದ್ದಾರೆ.

ರೈತ ಎಂದರೆ ಹಸಿರು, ಹಸಿರನ್ನೆ ಉಸಿರಾಗಿಸಿಕೊಂಡು ತನ್ನ ಜಮೀನಿನಲ್ಲಿ ಎತ್ತುಗಳ ಸಹಾಯದೊಂದಿಗೆ ಹಗಲು-ರಾತ್ರಿ ಎನ್ನದೆ ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದ ಅನ್ನದಾತನಿಗೆ ನೆರವಾಗಲು ಜಗತ್ತಾದ್ಯಂತ ಹಲವು ಕಂಪನಿ, ವಿಜ್ಞಾನಿಗಳು ಹೊಸ ಹೊಸ ಅವಿಷ್ಕಾರಗಳನ್ನು ಮಾಡುತ್ತಿರುವುದು ಸಹಜ ವಾಗಿ ದ್ದರೂ, ತಾಲೂಕಿನ ಬಾಲಕಿಯೊಬ್ಬಳು ಪರಿಸರ ಸ್ನೇಹಿ ಹಾಗೂ ಬಹುಪಯೋಗಿ ಕೃಷಿ ಉಪಕರ ಣವನ್ನು ಆವಿಷ್ಕಾರ ಮಾಡಿದ್ದು, ಇವರ ಸಾಧನೆ ಕಂಡು ಜಪಾನ್‌ ದೇಶದಲ್ಲಿ ನಡೆಯುವ ನ.5ರಿಂದ ನಡೆಯುವ ವಿಶ್ವಮಟ್ಟದ 7ದಿನಗಳ ಕಾರ್ಯಗಾರದಲ್ಲಿ ಭಾಗವಹಿಸಲು ಆಹ್ವಾನ ಬಂದಿರುವುದು ಇಡೀ ದೇಶವೇ ಮೆಚ್ಚುವಂತಾಗಿದೆ.

ಕಾಮಸಮುದ್ರ ಹೋಬಳಿ ತೊಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಬೊಂಪಲ್ಲಿ ಗ್ರಾಮದ ನಾಗರಾಜಪ್ಪ, ಗೌರಮ್ಮ ದಂಪತಿ ಪುತ್ರಿ ಎನ್‌.ಅನುಶ್ರೀ ರೈತರಿಗೆಂದೆ ಪರಿಸರಸ್ನೇಹಿ ಹಾಗೂ ಬಹು ಉಪಯೋಗಿ ಕೃಷಿ ಉಪಕರಣವನ್ನು ಅವಿಷ್ಕಾರ ಮಾಡಿ ಇನ್‌ಸ್ಪೈರ್‌ ಅವಾರ್ಡ್‌ ಪಡೆದುಕೊಂಡಿರುವ ಗ್ರಾಮೀ ಣ ಭಾಗದ ಯುವ ವಿಜ್ಞಾನಿ ಯಾಗಿದ್ದಾರೆ.

ವಿದ್ಯಾರ್ಥಿನಿ 13ನೇ ವಯಸ್ಸಿನಲ್ಲೇ ವಿಶ್ವಮಟ್ಟಕ್ಕೆ ಹೋಗಿದ್ದರೂ, ಯಾವುದೇ ಸರ್ಕಾ ರಗಳು ಪ್ರೋತ್ಸಾಹ ಮಾಡದೆ ಇದ್ದರೂ ವಿದೇಶಗಳಿಂದ ಹಾಗೂ ಖಾಸಗಿ ಕಂಪನಿಗಳು ಈ ಬಡ ವಿದ್ಯಾರ್ಥಿಯ ಸಾಧನೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ.

ಕೃಷಿ ಚಟುವಟಿಕೆ ಮಾಡಲು ಸಹಕಾರಿ: ಪ್ರಾಥಮಿಕ ಹಂತದಲ್ಲಿ ವಿಜ್ಞಾನದ ಬಗ್ಗೆ ಪಾಠ ಮಾಡುತ್ತಿರುವ ವೇಳೆ ಇನ್ಸ್‌ಪೆçರ್‌ ಆಗಿ ರೈತರು ಪಡುತ್ತಿರುವ ಕಷ್ಟಗಳನ್ನು ಚರ್ಚೆ ಮಾಡುತ್ತಿರುವ ವೇಳೆ ತಮ್ಮ ಸ್ವಂತ ಮನೆ ಯಲ್ಲಿ ತಂದೆಗೆ ಆನಾರೊಗ್ಯದಿಂದ ತಾಯಿ ಯೊಬ್ಬರೇ ತಮ್ಮ ಜಮೀನಿನಲ್ಲಿ ಯಂತ್ರಗಳ ಮೂಲಕ ಉಳುಮೆ ಮಾಡಲು ಹಣದ ಕೊರತೆ ಯಿಂದ ಕೆಲಸ ಮಾಡುತ್ತಿರುವುದನ್ನು ಕಂಡು ಬಡ ರೈತರು ಕೃಷಿಯಲ್ಲಿ ದುಬಾರಿ ಬೆಲೆಯ ಯಂತ್ರಗಳಿಂದ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗದ ಕಾರಣ ಈ ಯಂತ್ರ ಕಂಡು ಹಿಡಿಯಬೇಕೆಂದು ಶಪಥ ಮಾಡಿ ಪರಿಸರಸ್ನೇಹಿ ಹಾಗೂ ಬಹು ಉಪಯೋಗಿ ಕೃಷಿ ಉಪಕರಣ ಆವಿಷ್ಕಾರ ಮಾಡಿದ್ದಾರೆ.

ಶಿಕ್ಷಕಿ ಕವಿತಾರ ಮಾರ್ಗದರ್ಶನ: ಎನ್‌.ಅನುಶ್ರೀ ಪ್ರಸ್ತುತ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಜಪಾನ್‌ ದೇಶದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳವ ಅವಕಾಶ ಪಡೆದುಕೊಂಡಿದ್ದಾರೆ. ರಾಜ್ಯದಿಂದ ಭಾಗವಹಿಸು ತ್ತಿರುವ 6 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಎನ್‌. ಅನುಶ್ರೀ ಇಷ್ಟೆಲ್ಲಾ ವಿಶ್ವಮಟ್ಟದ ಸಾಧನೆ ಮಾಡಲು ಮುಖ್ಯವಾಗಿ ದೊಡ್ಡಬೊಂಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ವಿ.ಕವಿತಾ ಅವರೇ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಬಹು ಉಪಯೋಗಿ ಕೃಷಿ ಉಪಕರಣವನ್ನು ಆವಿಷ್ಕಾರಗೊಳಿಸಿದ್ದರು. ಇದಕ್ಕೆಲ್ಲಾ ಆರ್ಥಿಕ ವಾಗಿ ಯೂ ಕಷ್ಟದಲ್ಲಿರುವ ಈ ವಿದ್ಯಾರ್ಥಿಗೆ ಶಿಕ್ಷಕಿ ವಿ.ಕವಿತಾ ಅವರೇ ಆಗಿದ್ದು, ದೊಡ್ಡಬೊಂಪಲ್ಲಿ ಸರ್ಕಾರಿ ಶಾಲೆಯಿಂದ ಮಾಲೂರು ತಾಲೂಕಿಗೆ ಶಿಕ್ಷಕಿ ವಿ.ಕವಿತಾ ವರ್ಗಾವಣೆ ಆಗಿದ್ದರೂ, ಎನ್‌.ಅನುಶ್ರೀ ಅವರಿಗೆ ಈಗಲೂ ಸಹ ಪ್ರೇರಕರಾಗಿದ್ದಾರೆ.

ಜಿಲ್ಲೆಗೆ ಕೀರ್ತಿ ತಂದ ಪ್ರತಿಭೆ: ರಾಷ್ಟ್ರಮಟ್ಟದ ಇನ್ಸ್‌ಪೆçರ್‌ ಅವಾರ್ಡ್‌ನ್ನು ದೆಹಲಿಯ ಐಐಟಿಯಲ್ಲಿ ಪಡೆದುಕೊಂಡಿದ್ದರು. ಇದಾದ ಬಳಿಕ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಈಗಾಗಲೇ ಗುಜರಾತ್‌, ಫಿಲಿಪೈನ್ಸ್‌ನಲ್ಲಿ ನಡೆದಿದ್ದ 2ನೇ ಅಸ್ಕಾಂ ಇಂಡಿಯಾ ಗ್ರಾಸ್‌ರೂಟ್ಸ್‌ ಅಂಡ್‌ 2ನೇ ಇನೊ³àಟಿಕ್‌ ಸಬ್‌ಮಿಟ್‌ನಲ್ಲಿಯೂ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಪ್ರತಿಭೆಯಾಗಿದ್ದಾರೆ. ಪರಿಸರ ಸ್ನೇಹಿ ಬಹು ಉಪಯೋಗಿ ಕೃಷಿ ಉಪಕರಣವನ್ನು ಆವಿಷ್ಕಾರಗೊಳಿಸಿದ ನಂತರ ಖುದ್ದು ಶಾಲೆಗೆ ಭೇಟಿ ನೀಡಿದ ಬೆಂಗಳೂರಿನ ಎಂಎನ್‌ಸಿ ಕಂಪನಿಯವರು ಎನ್‌.ಅನುಶ್ರೀ ಸಾಧನೆಗೆ ಮೆಚ್ಚಿ ಸರ್ಕಾರಿ ಶಾಲೆಗೆ ಮುಖ್ಯವಾಗಿ ಅಗತ್ಯವಾಗಿರುವ ಕಂಪ್ಯೂಟರ್‌ ಸೇರಿದಂತೆ ಆಧುನಿಕ ತಾಂತ್ರಿಕತೆಯನ್ನು ಹೊಂದಿರುವ 6 ಲಕ್ಷ ರೂ. ವೆಚ್ಚದ ಸಲಕರಣಿಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ.

ಕೃಷಿ ಯಂತ್ರದ ಬೆಲೆ ಕೇವಲ 3 ಸಾವಿರ ರೂಪಾಯಿ: ವಾಯು ಮಾಲಿನ್ಯ ಇಲ್ಲದೆ ಪ್ರತಿಯೂಬ್ಬ ಬಡ ರೈತನಿಗೂ ಕೈಗೆಟುಕುವ ಬೆಲೆಯಲ್ಲೇ ಬಹು ಉಪಯೋಗಿ ಕೃಷಿ ಉಪಕರಣ ತಯಾರಿಸಲಾಗಿದ್ದು, ಬೀಜ ಬಿತ್ತನೆ ಉಳುಮೆ, ಕಳೆ ಕೀಳುವುದು ಸೇರಿದಂತೆ ಟ್ರ್ಯಾಕ್ಟರ್‌ ಮಾಡುವ ಎಲ್ಲಾ ಕೆಲಸವನ್ನು ಈ ಯಂತ್ರ ಮಾಡಿ ಸಮಯ ಮತ್ತು ಹಣವನ್ನು ಉಳಿಸಲಿದೆ. ಈ ಯಂತ್ರದ ಬೆಲೆ ಕೇವಲ 3 ಸಾವಿರ ರೂ. ಮಾತ್ರ ಆಗಿದೆ. ಈ ಯಂತ್ರವು ಮುಖ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚಾಗಿ ರೈತರ ಬಳಕೆಗೆ ಬರುತ್ತಿದೆ.

ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಹುಟ್ಟಿರುವ ಹೆಣ್ಣು ಮಗಳೊಂದು ವಿಶ್ವಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತಿರುವುದು ನಿಜಕ್ಕೂ ಸಂತಸವಾಗಿದೆ. ವಿದ್ಯಾರ್ಥಿನಿ ಸಾಧನೆಗೆ ಮುಖ್ಯಶಿಕ್ಷಕರಾಗಿದ್ದ ಕೇಶವರೆಡ್ಡಿ, ಶಿಕ್ಷಕಿ ವನಿತಾ, ಸುಮಾ ಸಹಕಾರ ನೀಡಿದ್ದಾರೆ. ರೈತರು ಈ ಉಪಕರಣವನ್ನು ಖರೀದಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಸರ್ಕಾರವು ಸಹ ಗುರುತಿಸುವ ಕೆಲಸ ಮಾಡಬೇಕಾಗಿದೆ. ●ವಿ.ಕವಿತಾ, ಶಿಕ್ಷಕಿ ಹಾಗೂ ಮಾರ್ಗದರ್ಶಕರು,

-ಎಂ. ಸಿ. ಮಂಜುನಾಥ್‌

ಟಾಪ್ ನ್ಯೂಸ್

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.