Sullia ಕಳ್ಳತನ ಆರೋಪ; ನಾಲ್ವರ ವಿರುದ್ಧ ದೂರು
Team Udayavani, Nov 4, 2023, 10:35 PM IST
ಸುಳ್ಯ: ಸೊತ್ತುಗಳನ್ನು ಕಳ್ಳತನ ನಡೆಸಿದ್ದಾರೆಂದು ವ್ಯಕ್ತಿಯೋರ್ವರು ನಾಲ್ವರ ವಿರುದ್ಧ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.
ಪೆರುವಾಜೆ ನಿವಾಸಿ ಅಮರನಾಥ ಶೆಟ್ಟಿ ದೂರು ನೀಡಿದವರು. ಪೆರುವಾಜೆ ಗ್ರಾಮದಲ್ಲಿರುವ ಅಮರನಾಥ ಶೆಟ್ಟಿ ಅವರ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಇತ್ಯಾದಿ ಎಲೆಕ್ಟ್ರಿಕ್ ಸೊತ್ತುಗಳು, ಕಟ್ಟಡದ ಒಳಗೆ 4 ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಹಾಗೂ ಪಾತ್ರೆ ಸಾಮಗ್ರಿಗಳನ್ನು, ನ. 1ರಿಂದ 3ರ ನಡುವೆ ಆರೋಪಿಗಳಾದ ಹರೀಶ್, ರೇಷ್ಮಾ, ಕಿರಣ, ಕಿಶೋರ್ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದವರು ದೂರು ನೀಡಿದ್ದಾರೆ. ಬೆಳ್ಳಾರೆ ರಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಪರಿಚಿತನಿಂದ ಕೋಳಿ ಮಾಂಸಕ್ಕೆ ಆರ್ಡರ್ ; ಹಣ ಪಡೆದು ವಂಚನೆ
ಸುಳ್ಯ: ತನಗೆ 20 ಕೆಜಿ ಕೋಳಿ ಮಾಂಸ ಬೇಕೆಂದು ಫೋನ್ ಮಾಡಿ ಹೇಳಿದ ಅನಾಮಿಕನೊಬ್ಬ ಮಾಂಸ ಕೊಂಡೊಯ್ಯದೆ, ಪುಸಲಾಯಿಸಿ ಅಂಗಡಿ ಮಾಲಕನ ಬ್ಯಾಂಕ್ ಖಾತೆಯಿಂದಲೇ 7200 ರೂ. ಪಡೆದಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ಬಾಳೆಮಕ್ಕಿಯಲ್ಲಿರುವ ಚಿಕನ್ ಸ್ಟಾಲ್ ಗೆ ಕರೆ ಮಾಡಿ ನಾಳೆ ಬೆಳಿಗ್ಗೆ 20 ಕೆಜಿ ಕೋಳಿ ಮಾಂಸ ಬೇಕು ಕಟ್ಟಿಡಿ, ನಾನು ಈಗ ಬರುತ್ತೇನೆ ಎಂದು ಹೇಳಿದ್ದು, ಅಂಗಡಿಯವರು ಮರುದಿನ ಬೆಳಿಗ್ಗೆ 20 ಕೆಜಿ ಕೋಳಿ ಮಾಂಸ ಸಿದ್ಧಗೊಳಿಸಿ ಹಿಂದಿನ ದಿನ ಕರೆ ಮಾಡಿದ ವ್ಯಕ್ತಿಗೆ ಕರೆ ಮಾಡಿ ಮಾಂಸದ ದರದ ವಿವರಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ. ಮಾಂಸಕ್ಕೆ ಆರ್ಡರ್‌ಕೊಟ್ಟ ಹಿಂದಿ ಮಾತನಾಡುವ ವ್ಯಕ್ತಿ ನಾನು ಗೂಗಲ್ ಪೇ ಮಾಡುತ್ತೇನೆ, ನೀವು ನನಗೆ 1 ರೂ. ಕಳುಹಿಸಿ ಎಂದು ಹೇಳಿದ್ದು, ಬಳಿಕ ಹೀಗೈ 5ರೂ, 10 ರೂ, 20 ರೂ. ಅತ್ತ ಇತ್ತ ಕಳುಹಿಸಿಕೊಂಡ ಮೇಲೆ, ನನಗೆ ಈಗ 7200 ರೂ. ಕಳುಹಿಸಿ ನಿಮಗೆ 14000 ರೂ. ಕಳುಹಿಸುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ.
ಅಂಗಡಿ ಕೆಲಸದಾತ ಮಾಲಕರ ಖಾತೆಯಿಂದ 7200 ರೂ.ಗಳನ್ನು ಕಳುಹಿಸಿದ್ದು ,ಹಣ ತಲುಪಿದ ನಂತರ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಮೋಸದ ಬಗ್ಗೆ ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.