Diwali bonus: ದೀಪಾವಳಿ ಬೋನಸ್; ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಕೊಟ್ಟ ಮಾಲೀಕ
Team Udayavani, Nov 5, 2023, 12:37 PM IST
ಚೆನ್ನೈ: ದೀಪಾವಳಿ ಹಬ್ಬ ಸಮೀಪದಲ್ಲಿದೆ. ಬೆಳಕಿನ ಹಬ್ಬಕ್ಕೆ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ಬೋನಸ್ ನೀಡುತ್ತವೆ. ಸ್ಟೀಟ್ ಬಾಕ್ಸ್, ಗಿಫ್ಟ್ ಬಾಕ್ಸ್ ನೊಂದಿಗೆ ವರ್ಷದ ಬೋನಸ್ ನ್ನು ಕೆಲ ಕಂಪೆನಿಗಳು ನೀಡುತ್ತದೆ. ಇಲ್ಲೊಂದು ಟೀ ಎಸ್ಟೇಟ್ ನ ಮಾಲೀಕರು ತನ್ನ ಉದ್ಯೋಗಿಗಳಿಗೆ ದುಬಾರಿ ಬೋನಸ್ ಗಿಫ್ಟ್ ನ್ನು ನೀಡಿದ್ದಾರೆ.
ತಮಿಳುನಾಡಿನ ಕೋಟಗಿರಿ ಪಟ್ಟಣದಲ್ಲಿರುವ 190 ಎಕರೆ ವಿಸ್ತೀರ್ಣದ ಟೀ ಎಸ್ಟೇಟ್ ನ ಮಾಲೀಕರಾಗಿರುವ ಪಿ ಶಿವಕುಮಾರ್ ಅವರು ತನ್ನ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ 2 ಲಕ್ಷ ರೂ.ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ನೀಡಿದ್ದಾರೆ.
ಪ್ರತಿವರ್ಷ ದೀಪಾವಳಿಯಂದು ಪಿ ಶಿವಕುಮಾರ್ ಅವರು ತನ್ನ ಉದ್ಯೋಗಿಗಳಿಗೆ ಗೃಹೋಪಯೋಗಿ ಉಪಕರಣಗಳು ಮತ್ತು ನಗದು ಬೋನಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಈ ವರ್ಷ ಪಿ ಶಿವಕುಮಾರ್ ಉದ್ಯೋಗಿಗಳಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಬೋನಸ್ ಆಗಿ ನೀಡಿದ್ದಾರೆ. ಇವರ ಟೀ ಎಸ್ಟೇಟ್ ನಲ್ಲಿ 627 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ತಮ್ಮ ಮ್ಯಾನೇಜರ್, ಮೇಲ್ವಿಚಾರಕರು, ಸ್ಟೋರ್‌ಕೀಪರ್, ಕ್ಯಾಷಿಯರ್,ಫೀಲ್ಡ್ ಸ್ಟಾಫ್ ಮತ್ತು ಚಾಲಕರು ಸೇರಿದಂತೆ 15 ಉದ್ಯೋಗಿಗಳಿಗೆ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
“ಇದು ಎಲ್ಲರಿಗೂ ಸಿಗಲ್ಲ. ಆದರೆ ನಾನು ಇದನ್ನು ಪಡೆದುಕೊಂಡಿದ್ದೇನೆ. ಅವರ ಕೆಲಸ ಮತ್ತು ತಂಡದ ಕೆಲಸದಿಂದ ನಾವು ಖುಷಿಯಾಗಿದ್ದೇವೆ. ಉದ್ಯೋಗಿಗಳಿಗೆ ಬೈಕ್ ಕೀ ಕೊಟ್ಟ ಬಳಿಕ ಮಾಲೀಕ ಶಿವಕುಮಾರ್ ಉದ್ಯೋಗಿಗಳೊಂದಿಗೆ ಬೈಕ್ ನಲ್ಲಿ ಸುತ್ತು ಹಾಕಿದ್ದಾರೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.