IAF: ರುದ್ರಾ ಹೆಲಿಕಾಪ್ಟರ್ ಪರೀಕ್ಷೆ ಯಶಸ್ವಿ
Team Udayavani, Nov 5, 2023, 8:45 PM IST
ನವದೆಹಲಿ: ಭಾರತೀಯ ಸೇನೆಯ ವೈಮಾನಿಕ ಘಟಕವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ರುದ್ರಾ ಹೆಲಿಕಾಪ್ಟರ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಈ ರುದ್ರಾ ಹೆಲಿಕಾಪ್ಟರ್ಗಳ ವಿನ್ಯಾಸ ಹಾಗೂ ಅಭಿವೃದ್ಧಿ ಮಾಡಿದೆ. ರುದ್ರಾ ಹೆಲಿಕಾಪ್ಟರ್ ಮೂಲಕ ಹೊಸ ಪೀಳಿಗೆಯ ರಾಕೆಟ್ ಹಾಗೂ ಟರ್ರೆಟ್ ಮತ್ತು ಮದ್ದು-ಗುಂಡುಗಳ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ನಿಖರ ಗುರಿಯ ಮೇಲೆ ಉಕ್ಕು ಮತ್ತು ಬೆಂಕಿಯ ಮಳೆಯನ್ನು “ರುದ್ರಾ” ಸುರಿಸಿದ್ದಾನೆ.
ಈಶಾನ್ಯ ಭಾರತದ ಬೆಟ್ಟವೊಂದರಲ್ಲಿ ರುದ್ರಾ ಹೆಲಿಕಾಪ್ಟರ್ ಪರೀಕ್ಷೆ ನಡೆಸಿದ ವಿಡಿಯೋವನ್ನು ಟ್ವಿಟರ್(ಎಕ್ಸ್)ನಲ್ಲಿ ಭಾರತೀಯ ಸೇನೆ ಹಂಚಿಕೊಂಡಿದೆ. ರಾಕೆಟ್ಗಳು ಹಾಗೂ ಮದ್ದು-ಗುಂಡುಗಳನ್ನು ಹೊತ್ತ ಮೂರು ರುದ್ರಾ ಹೆಲಿಕಾಪ್ಟರ್ಗಳು ಹಾರಾಟ ನಡೆಸಿದವು. ಇವು ಗುರಿಯ ಮೇಲೆ ನಿಖರ ದಾಳಿ ನಡೆಸಿದವು.
ರುದ್ರಾ ಹೆಲಿಕಾಪ್ಟರ್ 5.8 ಟನ್ ತೂಕವಿದೆ. ಟ್ಯಾಂಕ್ಗಳನ್ನು ನಾಶಪಡಿಸುವುದು, ಮುಂಚೂಣಿಯಲ್ಲಿದ್ದು ಪಡೆಗೆ ಬೆಂಬಲ ನೀಡುವುದು ಹಾಗೂ ಸಶಸ್ತ್ರ ವಿಚಕ್ಷಣ ಮತ್ತು ಕಣ್ಗಾವಲು ನಡೆಸುವುದು ಇದರ ಪ್ರಮುಖ ಪಾತ್ರವಾಗಿದೆ. 20 ಎಂಎಂ ಟರ್ರೆಟ್ ಗನ್,70 ಎಂಎಂ ರಾಕೆಟ್ ಹಾಗೂ ಆಕಾಶದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳನ್ನು ಹೊತ್ತೂಯುವ ಸಾಮರ್ಥ್ಯವನ್ನು ರುದ್ರಾ ಹೆಲಿಕಾಪ್ಟರ್ಗಳು ಹೊಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.