BSF: ಗಡಿರಕ್ಷಣೆಗೆ ಬಿಎಸ್‌ಎಫ್ ‘ಬೀ’
Team Udayavani, Nov 5, 2023, 10:44 PM IST
ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ, ಜಾನುವಾರುಗಳ ಕಳ್ಳತನ, ಮಾದಕವಸ್ತುಗಳ ಕಳ್ಳಸಾಗಣೆಗಳ ಕಡಿವಾಣಕ್ಕೆ ಭಾರತೀಯ ಗಡಿ ಭದ್ರತಾಪಡೆ (ಬಿಎಸ್‌ಎಫ್) ಹೊಸ ಯೋಜನೆ ರೂಪಿಸಿದ್ದು, ಗಡಿಬೇಲಿಗಳಲ್ಲಿ ಜೇನುಸಾಕಾಣಿಕೆಗೆ ಮುಂದಾಗಿದೆ. ಇತ್ತೀಚೆಗಷ್ಟೇ ನಾದಿಯಾ ಜಿಲ್ಲೆಯ ಗಡಿಭಾಗದಲ್ಲಿ ಈ ಪ್ರಯೋಗವನ್ನು ಬಿಎಸ್‌ಎಫ್ನ 32ನೇ ಬೆಟಾಲಿಯನ್ ಕೈಗೊಂಡಿತ್ತು. ಇದೀಗ ಪಶ್ಚಿಮ ಬಂಗಾಳದ ಜತೆಗೆ ಹಂಚಿಕೊಂಡಿರುವ ಸಂಪೂರ್ಣ 2,217 ಕಿ.ಮೀ.ಗಡಿ ಭಾಗದಲ್ಲೂ ಇದೇ ಕ್ರಮ ಅನುಸರಿಸಲು ಯೋಜಿಸಲಾಗಿದೆ.
ಕೇಂದ್ರಸರ್ಕಾರ ಆಯುಷ್ ಸಚಿವಾಲಯ ಈ ಸಂಬಂಧಿಸಿದಂತೆ ಬಿಎಸ್‌ಎಫ್ ಜೊತೆಗೆ ಕೈಜೋಡಿಸಿದ್ದು “ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್’ ಅನ್ವಯ ಔಷಧಿಗುಣವುಳ್ಳ ಗಿಡಗಳನ್ನು ಬಿಎಸ್‌ಎಫ್ಗೆ ನೀಡಿದೆ. ಅವುಗಳನ್ನು ಗಡಿ ಬೇಲಿಗಳ ಪಕ್ಕ ನೆಟ್ಟು, ಬೇಲಿಗಳಿಗೆ ಜೇನು ಪೆಟ್ಟಿಗಗಳನ್ನ ಅಳವಡಿಸಲಾಗುತ್ತದೆ. ಗಡಿ ಪ್ರದೇಶದ ಸ್ಥಳೀಯ ಜೇನು ಸಾಕಣೆಗಾರರಿಗೆ ಲಭ್ಯವಾಗುವಂತೆ ಬಿಎಸ್‌ಎಫ್ ನೋಡಿಕೊಳ್ಳಲಿದೆ. ಈ ಮೂಲಕ ಗಡಿ ಬೇಲಿಗಳಲ್ಲಿ ಜೇನು ಸಾಕಾಣಿಕೆಯೂ ಆಗುತ್ತದೆ. ಜತೆಗೆ ಗಡಿ ನುಸುಳುವಿಕೆಯಂಥ ಅಪರಾಧಗಳಿಗೂ ಕಡಿವಾಣ ಬೀಳಲಿದೆ ಎಂದು ಬಿಎಸ್‌ಎಫ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.