World Cup; ಮಲಿನ ದಿಲ್ಲಿಯಲ್ಲಿ ಲಂಕಾ-ಬಾಂಗ್ಲಾ ಪಂದ್ಯ: ರದ್ದಾಗುವ ಸಾಧ್ಯತೆ?

ವೈದ್ಯಕೀಯ ಸಮಿತಿ ಜತೆ ಸಂಪರ್ಕ

Team Udayavani, Nov 6, 2023, 6:09 AM IST

1-wewqewqe

ಹೊಸದಿಲ್ಲಿ: ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಸೋಮವಾರ ಶ್ರೀಲಂಕಾ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಅದರೆ ರಾಜಧಾನಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ ಇರುವ ಕಾರಣ ಈ ಪಂದ್ಯ ನಡೆಯುವುದು ಸಂಶಯವೆಂದು ಹೇಳಲಾಗಿದೆ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಈ ಪಂದ್ಯವನ್ನು ಆಯೋಜಿಸುವ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಪಂದ್ಯ ಆರುಭವಾಗುವ ಮೊದಲು ನಿರ್ಧಾರ ತೆಗೆದುಕೊಳ್ಳಲಿದೆ.

ವಿಷಕಾರಿ ಮಬ್ಬು ದಪ್ಪ ಪದರವು ರಾಜಧಾನಿಯನ್ನು ಮತ್ತೂಮ್ಮೆ ಆವರಿಸಿದೆ. ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ತೀವ್ರ ಮಟ್ಟದಲ್ಲಿ ಇರುವ ಕಾರಣ ಉಭಯ ತಂಡಗಳು ಹೋರಾಂಗಣದಲ್ಲಿ ತಮ್ಮ ತರಬೇತಿಯನ್ನು ಕಡಿತಗೊಳಿಸಿವೆ.

ಶ್ರೀಲಂಕಾ ತಂಡವು ಶನಿವಾರ ಒಳಾಂಗಣದಲ್ಲಿ ಉಳಿದುಕೊಳ್ಳಲು ಬಯಸಿದರೆ ಬಾಂಗ್ಲಾದೇಶ ಆಟಗಾರರು ಅಪಾಯಕಾರಿ ಪರಿಸ್ಥಿತಿಯಿದ್ದರೂ ಧೈರ್ಯ ಮಾಡಿ ಸಂಜೆ ತರಬೇತಿ ನಡೆಸಿತು. ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ಮಾಸ್ಕ್ ಧರಿಸಿ ಬಾಂಗ್ಲಾ ಆಟಗಾರರು ಅಭ್ಯಾಸ ನಡೆಸಿದರು. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಟೈಗರ್ ಪಡೆ ಶುಕ್ರವಾರದ ಅಭ್ಯಾಸವನ್ನು ರದ್ದುಗೊಳಿಸಿತ್ತು.

ಸೋಮವಾರ ಪಂದ್ಯದ ಅಂಪಾಯರ್‌ಗಳು ವಾಯುಮಾಲಿನ್ಯದ ಗುಣಮಟ್ಟವನ್ನು ನಿರ್ಣಯಿಸಿದ ಬಳಿಕ ಪಂದ್ಯ ನಡೆ ಯುವ ಕುರಿತು ನಿರ್ಧಾರ ತೆಗೆದುಕೊಳ್ಳ ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ತಿಳಿಸಿದೆ.

ಗೌರವಕ್ಕಾಗಿ ಹೋರಾಟ
ಬಾಂಗ್ಲಾದೇಶವು ಈಗಾಗಲೇ ಸೆಮಿ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದರೆ ಲೆಕ್ಕಾಚಾರ ಮತ್ತು ಅದೃಷ್ಟದಿಂದ ಶ್ರೀಲಂಕಾ ತಂಡ ಮುನ್ನಡೆಯುವ ಸಾಧ್ಯತೆಯಿದೆ. ಸದ್ಯ 9ನೇ ಸ್ಥಾನ ದಲ್ಲಿರುವ ಬಾಂಗ್ಲಾದೇಶವು ಗೌರವ ಕ್ಕಾಗಿ ಆಡಬೇಕಾಗಿದೆ.

ದಾಖಲೆ ಶ್ರೀಲಂಕಾ ಪರ
ವಿಶ್ವಕಪ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾವೇ ಗರಿಷ್ಠ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಉಭಯ ತಂಡಗಳು 52 ಏಕದಿನ ಪಂದ್ಯಗಳನ್ನಾಡಿದ್ದು ಶ್ರೀಲಂಕಾ 42ರಲ್ಲಿ ಜಯ ಸಾಧಿಸಿದ್ದರೆ ಬಾಂಗ್ಲಾದೇಶು 9ರಲ್ಲಿ ಗೆಲುವು ಒಲಿಸಿಕೊಂಡಿದೆ. ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಮುಖಾಮುಖೀಯಾಗಿದ್ದು ಮೂರು ಬಾರಿ ಶ್ರೀಲಂಕಾ ಜಯ ಸಾಧಿಸಿದೆ. ಆದರೆ ಬಾಂಗ್ಲಾ ಟೈಗರ್ ವಿಶ್ವಕಪ್‌ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ಉತ್ಸಾಹದಲ್ಲಿದೆ. ಅದೇ ಉತ್ಸಾಹದಲ್ಲಿ ಸೋಮವಾರವೂ ಹೋರಾಡುವ ಸಾಧ್ಯತೆಯಿದೆ.
ಭಾರತ ವಿರುದ್ಧ ಹೀನಾಯ ಬ್ಯಾಟಿಂಗ್‌ ಪ್ರದರ್ಶನದ ಬಳಿಕ ಶ್ರೀಲಂಕಾ ತಂಡ ಬಾಂಗ್ಲಾವನ್ನು ಎದುರಿಸಲು ಸಜ್ಜಾಗುತ್ತಿದೆ. ಭಾರತ ನೀಡಿದ ಕಠಿನ ಗುರಿಯೆದುರು ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ ಕೇವಲ 55 ರನ್ನಿಗೆ ಆಲೌಟಾದ ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧ ಯಾವ ರೀತಿ ಆಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಬಾಂಗ್ಲಾದ ಸ್ಪಿನ್‌ ಮತ್ತು ವೇಗದ ದಾಳಿ ಉತ್ತಮವಾಗಿದ್ದು ಶ್ರೀಲಂಕಾ ಆಟಗಾರರು ಹೇಗೆ ಎದುರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಉತ್ತಮ ಫಾರ್ಮ್ನಲ್ಲಿರುವ ಸದೀರ ಸಮರವಿಕ್ರಮ, ಪಥುಮ್‌ ನಿಸ್ಸಂಕ ಮತ್ತು ನಾಯಕ ಕುಸಲ್‌ ಮೆಂಡಿಸ್‌ ಅವರ ನಿರ್ವಹಣೆಯ ಮೇಲೆ ಶ್ರೀಲಂಕಾದ ಭವಿಷ್ಯ ನಿಂತಿದೆ.

ವೈದ್ಯಕೀಯ ಸಮಿತಿ ಜತೆ ಸಂಪರ್ಕ
ಬಾಂಗ್ಲಾದೇಶ ತಂಡದ ವಿರುದ್ಧ ನಡೆಯಲಿರುವ ವಿಶ್ವಕಪ್‌ ಪಂದ್ಯದ ಬಗೆಗಿನ ಅನಿಶಿjತತೆ ಮುಂದುವರಿದ ಕಾರಣ ಶ್ರೀಲಂಕಾ ಕ್ರಿಕೆಟ್‌ ತಂಡದ ವ್ಯವಸ್ಥಾಪಕ ಮಹಿಂದಾ ಹಲಂಗೋಡ ಅವರು ವೈದ್ಯಕೀಯ ಸಮಿತಿಯ ಜತೆ ನಿಕಟ ಸಂಪರ್ಕದಲ್ಲಿದ್ದು ಪಂದ್ಯ ಬಗ್ಗೆ ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿರುತ್ತೇವೆ ಎಂದುಹೇಳಿದ್ದಾರೆ. ಅಪಾಯಕಾರಿ ವಾಯುಮಾಲಿನ್ಯದಿಂದಾಗಿ ವಿಶ್ವಕಪ್‌ ಪಂದ್ಯದ ಸ್ಥಳವನ್ನು ಬದಲಾಯಿಸುವಂತೆ ಶ್ರೀಲಂಕಾ ಐಸಿಸಿಗೆ ಮನವಿ ಮಾಡಿಲ್ಲ ಎಂದು ಹಲಂಗೋಡ ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

1-sadsdas

World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು

1-qweqwwqe

ICC ವಿಶ್ವಕಪ್‌ ಸಾಧಕರ ತಂಡಕ್ಕೆ ರೋಹಿತ್‌ ನಾಯಕ; ತಂಡ ಹೀಗಿದೆ

1-ww-eqeqwe

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

1-saddasd

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.