Viral Video: ಕುಡಿದ ಮತ್ತಿನಲ್ಲಿ ಹಾವಿನ ಜತೆ ಹುಚ್ಚಾಟವಾಡಿ ಕೊನೆಯುಸಿರೆಳೆದ ಯುವಕ
Team Udayavani, Nov 6, 2023, 3:53 PM IST
ಲಕ್ನೋ: ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಹಾವನ್ನು ಹಿಡಿದುಕೊಂಡು ಬೇಕಾಬಿಟ್ಟಿಯಾಗಿ ವರ್ತಿಸಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಅಖಂಡ ಬಳ್ಳಾರಿ ಜಿಲ್ಲೆ, ವಿರೂಪಾಕ್ಷನ ದರ್ಶನ-ತುಂಗಭದ್ರಾ ತಟದಲ್ಲಿ ಜನಾರ್ದನರೆಡ್ಡಿ ಪ್ರಾರ್ಥನೆ
ಐರೌಲೀ ಗ್ರಾಮದ ರೋಹಿತ್ ಜೈಸ್ವಾಲ್ (22ವರ್ಷ) ಎಂಬ ಯುವಕ, ಕುಡಿದ ಮತ್ತಿನಲ್ಲಿ ಹಾವೊಂದನ್ನು ಹಿಡಿದುಕೊಂಡು, ನಾನು ಮಹಾಕಾಲ್(ಈಶ್ವರ) ನನಗೆ ಕಚ್ಚು ಎಂದು ಕೂಗಾಡುತ್ತಾ, ಹಾವನ್ನು ಚುಂಬಿಸುವುದು, ಕುತ್ತಿಗೆ ಸುತ್ತಿಕೊಳ್ಳುವುದು, ನಾಲಿಗೆಗೆ ಕಚ್ಚಿಸಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ.
ರೋಷಗೊಂಡ ಹಾವು ನಾಲ್ಕೈದು ಬಾರಿ ಜೈಸ್ವಾಲ್ ಗೆ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿದ್ದ. ಈತ ಚಿತ್ರೀಕರಣ ಮಾಡಿಕೊಂಡಿರುವ 4 ನಿಮಿಷ 38 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
देवरिया–शराब के नशे में जहरीले सांप के साथ स्टंट करते साप को गाली देते और अपने जीभ पर डंक मरवाते युवक का वीडियो वायरल
जहरीले सांप ने युवक को डसा युवक की मौत
पुलिस ने शव को पोस्टमार्टम के लिए भेजा
खुखुंदू थाना क्षेत्र अहिरौली गांव का मामला#deoriya pic.twitter.com/oIG905HOsO— ANB NEWS (@AnbNewstv) November 6, 2023
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈತ ಹಾವಿನ ಕಡಿತದಿಂದಾಗಿಯೇ ಸಾವನ್ನಪ್ಪಿರುವುದಾಗಿ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದು, ಈತನ ಪೋಷಕರು ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.