7 Years ಹಿಂದೆ ಕಾಣೆಯಾಗಿದ್ದ ಕುಣಿಗಲ್ ನ ವ್ಯಕ್ತಿ ತೆಲಂಗಾಣದಲ್ಲಿ ಪತ್ತೆ

ಕುಟುಂಬಸ್ಥರಿಗೆ ಒಪ್ಪಿಸಿದ ಕುಣಿಗಲ್ ಪೊಲೀಸರು

Team Udayavani, Nov 6, 2023, 7:30 PM IST

1-sdsadsad

ಕುಣಿಗಲ್: ಅಂದ್ರ ಪ್ರದೇಶದ ತಿರುಪತಿಗೆ ಕೆಲಸಕ್ಕೆ ಹೋಗಿ ಬರುವುದ್ದಾಗಿ ಹೇಳಿ ಕಳೆದ ಏಳು ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ಕುಣಿಗಲ್ ಪೊಲೀಸರು ಹುಡುಕಿ ಕುಟುಂಬಸ್ಥರಿಗೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ.

ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿ ಗ್ರಾಮದ ಕಾಣೆಯಾಗಿದ್ದ ಬಾಲಕೃಷ್ಣ (35) ನನ್ನು ಪೊಲೀಸರು ಪತ್ತೆ ಹಚ್ಚಿ ಕುಟುಬಸ್ಥರಿಗೆ ಒಪ್ಪಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ರಾಧ ಎಂಬುವರ ಜೊತೆ ಬಾಲಕೃಷ್ಣ ವಿವಾಹವಾಗಿದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಕಳೆದ ಏಳು ವರ್ಷದ ಹಿಂದೆ ಬಾಲಕೃಷ್ಣ ಟೂರ್ಸ್ ಅಂಡ್ ಟ್ರಾವಲ್ಸ್ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೊದವರು ಮತ್ತೆ ಮನೆಗೆ ವಾಪಸಾಗಿರಲಿಲ್ಲ.

ಕುಟುಬಸ್ಥರು ತಿರುಪತಿಯ ಟೂರ್ಸ್ ಅಂಡ್ ಟ್ರಾವಲ್ಸ್ ಕಂಪನಿ ಸೇರಿದಂತೆ ಹಲವೆಡೆ ಹುಡುಕಿದರೂ ಬಾಲಕೃಷ್ಣ ಸಿಗಲಿಲ್ಲ, ಬಾಲಕೃಷ್ಣ ಹಾಗೂ ಅವರ ತಾಯಿ ಮತ್ತು ಹೆಂಡತಿ ಮಕ್ಕಳಿರುವ ಪಡಿತರ ಚೀಟಿಯಲ್ಲಿ ಪಡಿತರ ಸಾಮಗ್ರಿ ಸ್ಥಗಿತಗೊಂಡಿತ್ತು. , ಈ ಸಂಬಂಧ ಬಾಲಕೃಷ್ಣನ ಹೆಂಡತಿ ರಾಧ ಕುಣಿಗಲ್ ಆಹಾರ ಇಲಾಖೆಯಲ್ಲಿ ವಿಚಾರಿಸಿದ್ದು, ಬಾಲಕೃಷ್ಣ ಅವರು ಐಟಿ ಫೈಲ್ ಮಾಡಿದ್ದಾರೆ ಹಾಗಾಗಿ ಪಡಿತರ ಚೀಟಿ ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನುಮಾನಗೊಂಡ ಬಾಲಕೃಷ್ಣನ ತಾಯಿ ಭಾಗ್ಯಮ್ಮ ಆ10 ರಂದು ಕುಣಿಗಲ್ ಪೊಲೀಸರಿಗೆ ದೂರು ನೀಡಿದರು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಡಿವೈಎಸ್‌ಪಿ ಲಕ್ಷ್ಮಿಕಾಂತ್, ಸಿಪಿಐ ನವೀನ್‌ಗೌಡ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಟಿಕ್ನಿಕಲ್ ಸೆಕ್ಷನ್ಸ್ ಸಿಬ್ಬಂದಿಯ ಸಹಾಯದಲ್ಲಿ ಪೊಲೀಸ್ ಸಿಬಂದಿಗಳಾದ ಹೇರೂರು ರವಿ, ಬೇಗೂರು ನಟರಾಜ್ ತೆಲಂಗಾಣ ರಾಜ್ಯದ ಮೆಡ್‌ಚೆಲ್ ಸಿಟಿಯಲ್ಲಿ ಬಾಲಕೃಷ್ಣನನ್ನು ಪತ್ತೆ ಮಾಡಿ ತಾಯಿ ಭಾಗ್ಯಮ್ಮ ಅವರ ವಶಕ್ಕೆ ನೀಡಿದ್ದಾರೆ.

ಆರ್ಥಿಕ ಸುಳಿಯಿಂದ ಪಾರಾಗಲು ಹೊರ ರಾಜ್ಯಕ್ಕೆ
ಬಾಲಕೃಷ್ಣ ಕಳೆದ ಏಳು ವರ್ಷಗಳ ಹಿಂದೆ ಅರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಅದರಿಂದ ಪಾರಾಗಲು ತೆಲಂಗಾಣ ರಾಜ್ಯದ ಮೆಡ್‌ಚೆಲ್ ಸಿಟಿಯಲ್ಲಿ ಅಂಗಡಿ ಬಾಡಿಗೆ ಪಡೆದು ಟೂರ್ಸ್ ಅಂಡ್ ಟ್ರಾವಲ್ಸ್ ಅಂಗಡಿಯನ್ನು ಇಟ್ಟುಕೊಂಡು ವವ್ಯಹಾರ ನಡೆಸುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಟಾಪ್ ನ್ಯೂಸ್

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

V.-Somanna

Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ

1-cantar

Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು

12-madhugiri

Tumkur:ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ

9-koratagere

Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

prashanth-Kishore

Prashant Kishore; ನಿವೃತ್ತ ಅಧಿಕಾರಿಗಳಿಂದ ನಿತೀಶ್‌ ಸರಕಾರ ನಿರ್ವಹಣೆ

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

ARMY (2)

Kashmir;ಕಥುವಾದಲ್ಲಿ ಎನ್‌ಕೌಂಟರ್‌: ಉಗ್ರನ ಹತ್ಯೆ

1-addasd

Congress ಪಕ್ಷ ಸಿದ್ಧಾಂತದಲ್ಲಿ ರಾಜಿ ಇಲ್ಲ: ಖರ್ಗೆಗೆ ವಿಕ್ರಮಾದಿತ್ಯ ಸಿಂಗ್‌

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.