ಎರಡು ರಾಜ್ಯಗಳಲ್ಲಿ ಇಂದು ಮತ ಹಬ್ಬ- ಛತ್ತೀಸ್‌ಗಢದಲ್ಲಿ 20, ಮಿಜೋರಾಂನಲ್ಲಿ ಎಲ್ಲ 40 ಕ್ಷೇತ್ರ

 ನಕ್ಸಲ್‌ಪೀಡಿತ ಜಿಲ್ಲೆಗಳಲ್ಲಿ ಬಿಗಿ ಭದ್ರತೆ

Team Udayavani, Nov 6, 2023, 11:03 PM IST

ELECTION 1

ಹೊಸದಿಲ್ಲಿ: ಭ್ರಷ್ಟಾಚಾರ, ಬೆಲೆಯೇರಿಕೆ, ಹಗರಣಗಳು, ರಾಜಕೀಯ ನಾಯಕರ ರ್ಯಾಲಿಗಳು, ವಾಗ್ಯುದ್ಧಗಳಿಗೆ ಸಾಕ್ಷಿಯಾಗಿದ್ದ ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದೆ. ನಕ್ಸಲ್‌ಪೀಡಿತ ಬಸ್ತಾರ್‌ ವಲಯ ಸೇರಿ ಒಟ್ಟು 20 ಕ್ಷೇತ್ರಗಳ 223 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಇದೇ ವೇಳೆ, ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮಂಗಳವಾರ ಮತದಾನ ನಡೆಯಲಿದೆ.

ಛತ್ತೀಸ್‌ಗಢದಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ 40 ಸಾವಿರ ಸಿಬಂದಿ ಸೇರಿ ಒಟ್ಟು 60 ಸಾವಿರ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ದೀಪಕ್‌ ಬೈಜ್‌, ಸಚಿವರಾದ ಅಕ್ಬರ್‌, ಛವೀಂದ್ರ, ಬಿಜೆಪಿ ಯಿಂದ ಮಾಜಿ ಸಿಎಂ ರಮಣ್‌ ಸಿಂಗ್‌ ಸೇರಿ ಹಲವರ ಹಣೆಬರಹವನ್ನು ಮೊದಲ ಹಂತದಲ್ಲಿ ಮತದಾರರು ಬರೆಯಲಿದ್ದಾರೆ. ಬಿಜೆಪಿಯು “ಮೋದಿ ಗ್ಯಾರಂಟಿ” ಹೆಸರಲ್ಲಿ ಪ್ರಚಾರ ನಡೆಸಿದರೆ, ಕಾಂಗ್ರೆಸ್‌ ಬಘೇಲ್‌ ಸರಕಾರ‌ ಕೈಗೊಂಡ ಯೋಜ ನೆಗಳ ಹೆಸರಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿದೆ. ಕೊನೇ ಕ್ಷಣದಲ್ಲಿ ಸಿಎಂ ಬಘೇಲ್‌ ವಿರುದ್ಧ ಕೇಳಿ ಬಂದ “ಮಹದೇವ ಆ್ಯಪ್‌ ಹಗರಣ’ದ ಕಳಂಕವು ಕಾಂಗ್ರೆಸ್‌ಗೆ ಬಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇನ್ನು, ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಶನಲ್‌ ಫ್ರಂಟ್‌, ವಿಪಕ್ಷ ಜೊರಾಂ ಪೀಪಲ್ಸ್‌ ಫ್ರಂಟ್‌ ಮತ್ತು ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 18 ಮಹಿಳೆಯರು ಸೇರಿ 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸ್ಫೋಟ: ಛತ್ತೀಸ್‌ಗಢದ ಕಾಂಕೇರ್‌ನಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಇಬ್ಬರು ಮತಗಟ್ಟೆ ಸಿಬಂದಿ ಮತ್ತು ಬಿಎಸ್‌ಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.

ತೆಲಂಗಾಣಕ್ಕೆ ಕರ್ನಾಟಕ ನಾಯಕರ ಲಗ್ಗೆ
ತೆಲಂಗಾಣದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಎಐಸಿಸಿ ಇದೇ ಮೊದಲ ಬಾರಿಗೆ “ಕ್ಲಸ್ಟರ್‌ ಉಸ್ತುವಾರಿಗಳು’ ಮತ್ತು “ಕ್ಷೇತ್ರ ವೀಕ್ಷಕರನ್ನು’ ನೇಮಕ ಮಾಡಿದೆ. ವಿಶೇಷವೆಂದರೆ ಇದಕ್ಕೆ ನೇಮಕವಾದ ಎಲ್ಲರೂ ಕರ್ನಾಟಕದವರೇ. ದಿನೇಶ್‌ ಗುಂಡೂರಾವ್‌, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಕ್ಲಸ್ಟರ್‌ ಉಸ್ತುವಾರಿ ಗಳಾಗಿ ನೇಮಕಗೊಂಡ ಎಲ್ಲ 10 ಮಂದಿಯೂ ಕರ್ನಾಟಕದ ಸಚಿವರಾಗಿದ್ದರೆ, 48 ಮಂದಿ ಕ್ಷೇತ್ರ ವೀಕ್ಷಕರ ಪೈಕಿ 34 ಮಂದಿ ಕರ್ನಾಟಕದ ಶಾಸಕರು, 12 ಮಂದಿ ಎಲ್‌ಎಲ್‌ಸಿಗಳಾಗಿದ್ದಾರೆ. ಒಬ್ಬರು ಮಾಜಿ ಎಂಎಲ್‌ಸಿ ಮತ್ತು ಪಕ್ಷದ ಕಾರ್ಯಾಧ್ಯಕ್ಷರೂ ಕ್ಷೇತ್ರ ವೀಕ್ಷಕರಾಗಿ ನೇಮಕಗೊಂಡಿದ್ದಾರೆ.

ಮೋದಿಗೂ ಮುನ್ನ ಇ.ಡಿ. ಬರುತ್ತೆ!
ಈಗ ಜಾರಿ ನಿರ್ದೇಶನಾಲಯ(ಇ.ಡಿ.), ಆದಾಯ ತೆರಿಗೆ ಇಲಾಖೆ(ಐಟಿ) ಮತ್ತು ಸಿಬಿಐಗಳು ನರೇಂದ್ರ ಮೋದಿಯವರ “ಜವಾನ’ರಾಗಿ ಕೆಲಸ ಮಾಡುತ್ತಿವೆ. ಮೋದಿಯವರು ತಾವು ಚುನಾವಣ ಪ್ರಚಾರಕ್ಕೆ ಬರುವ ಮುನ್ನ ಕೇಂದ್ರ ತನಿಖಾ ಸಂಸ್ಥೆಗಳನ್ನು ಆಯಾ ರಾಜ್ಯಗಳಿಗೆ ಕಳುಹಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜಸ್ಥಾನದ ಜೋಧ್‌ಪುರದಲ್ಲಿ ಸೋಮವಾರ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡ ಅವರು, “ಮೋದಿ ಯುಗದಲ್ಲಿ ಶ್ರೀಮಂತರೆಲ್ಲ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರೆಲ್ಲ ಮತ್ತಷ್ಟು ಬಡವರಾಗುತ್ತಿದ್ದಾರೆ. ಮೋದಿಯವರಿಗೆ ಚುನಾವಣೆ ಸಮಯದಲ್ಲಿ ಮಾತ್ರವೇ ಬಡವರ ನೆನಪಾಗುತ್ತದೆ. ಉಳಿದ ಸಮಯದಲ್ಲಿ ಅದಾನಿಯಂಥ ಕೈಗಾರಿಕೋದ್ಯಮಿ ಗೆಳೆಯರಷ್ಟೇ ನೆನಪಾಗುತ್ತಾರೆ’ ಎಂದೂ ಆರೋಪಿಸಿದ್ದಾರೆ.

ಮುಂದುವರಿದ ವಾಗ್ಯುದ್ಧ: ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ ಸಂಬಂಧ ಛತ್ತೀಸ್‌ಗಢದಲ್ಲಿ ಬಿಜೆಪಿ- ಕಾಂಗ್ರೆಸ್‌ ವಾಕ್ಸಮರ ಮುಂದುವರಿದಿದೆ. ಸಿಎಂ ಬಘೇಲ್‌ ವಿರುದ್ಧ ದುಬಾೖಯಲ್ಲಿ ಕುಳಿತು ಆರೋಪಿ ಶುಭಂ ಸೋನಿ ಮಾಡಿರುವ ಆರೋಪದ ವೀಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಘೇಲ್‌ರಿಗೆ ಸಿಎಂ ಹುದ್ದೆಯಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದೂ ಕಿಡಿಕಾರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಘೇಲ್‌, “ನ.17ರ ವರೆಗೆ ಬಿಜೆಪಿ ಎಂಜಾಯ್‌ ಮಾಡಿಕೊಂಡಿರಲಿ” ಎಂದು ವ್ಯಂಗ್ಯವಾಡಿದ್ದಾರೆ. ನ.17ರಂದು ಛತ್ತೀಸ್‌ಗಢದಲ್ಲಿ 2ನೇ ಹಂತದ ಮತದಾನ ನಡೆಯಲಿದೆ.

ಡಿಕೆಶಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ!
ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಎ.ರೇವಂತ ರೆಡ್ಡಿ ಅವರು ಸೋಮವಾರ ಕೋಡಂಗಲ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಮತದಾರರಿಗೆ ಮಾಡಿರುವ ಮನವಿ ಏನು ಗೊತ್ತಾ? “ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ” ಎಂದು! ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, “ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಕನಕಪುರ ಕ್ಷೇತ್ರದಲ್ಲಿ 1.22 ಲಕ್ಷ ಮತಗಳ ಅಂತರದಿಂದ ಅವರು ಗೆದ್ದಿದ್ದಾರೆ. ನೀವೆಲ್ಲರೂ ನನ್ನನ್ನು ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

Efforts to restore trust with China: Army chief Dwivedi

Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ

Dina Bhavishya

Daily Horoscope; ಹೆಚ್ಚಿನವರಿಗೆ ಮಿಶ್ರಫ‌ಲ ಕೊಡುವ ದಿನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Efforts to restore trust with China: Army chief Dwivedi

Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ

“Bulldozer’ justice: Supreme Court hits out at U.P. Yogi government

“Bulldozer’ justice: ಉ.ಪ್ರ.ಯೋಗಿ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Madhya Pradesh: Three tourists were bitten by a leopard

Madhya Pradesh: ಚಿರತೆ ಕೆಣಕಿ, ಕಚ್ಚಿಸಿಕೊಂಡ ಮೂವರು ಪ್ರವಾಸಿಗರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.