Mangaluru Airport: ರನ್ವೇಗೆ ಸೆಂಟರ್ ಲೈಟ್ಗಳ ಅಳವಡಿಕೆ
Team Udayavani, Nov 6, 2023, 11:13 PM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ರನ್ವೇಗೆ ಸೆಂಟರ್ ಲೈಟ್ಗಳ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದೆ. ಪೈಲೆಟ್ಗಳಿಗೆ ಆಕಾಶದಿಂದಲೇ ರನ್ವೇ ಗೋಚರಿಸುವ ಉದ್ದೇಶದಿಂದ 2,450 ಮೀ ಉದ್ದದ ರನ್ವೇಗೆ ಸೆಂಟರ್ ಲೈಟ್ ಅಳವಡಿಸಲಾಗುತ್ತಿದೆ.
ಇತ್ತೀಚೆಗೆ ನಡೆದ ರನ್ವೇ ರಿಕಾಪೆìಟಿಂಗ್ ಕಾಮಗಾರಿ ವೇಳೆ ಲೈಟ್ ಅಳವಡಿಕೆಗೆ ಸಂಬಂಧಿಸಿದಂತೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಕಾಮಗಾರಿ ಆರಂಭವಾಗಿದ್ದು, 2024ರ ಮಾರ್ಚ್ ವೇಳೆಗೆ ಕಾಮಗಾರಿ ಮುಗಿಯಲಿದೆ. ಒಟ್ಟು 160 ಸೆಂಟರ್ಲೈಟ್ಗಳು ಅಳವಡಿಕೆಯಾಗಲಿದೆ. ಇದೇ ವೇಳೆ ಮುಖ್ಯ ಮತ್ತು ಸ್ಟ್ಯಾಂಡ್ ಬೈ ಸರ್ಕಿಟ್ ಜತೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರನ್ವೇಯ ಎರಡೂ ಭಾಗದಲ್ಲಿ ಕೇಬಲ್ ಡಕ್ಟ್ ಗಳನ್ನು ನಿರ್ಮಿಸಲಾಗುತ್ತಿದೆ.
ಮಂಗಳೂರು ವಿಮಾನ ನಿಲ್ದಾಣ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಯೋಜನೆಯ ಅವಧಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ನೋಟಮ್ (ನೋಟಿಸ್ ಟು ಏರ್ವೆುನ್) ಪಡೆದಿದ್ದು, ದೈನಂದಿನ ವಿಮಾನಗಳ ಕಾರ್ಯಾಚರಣೆಗೆ ತೊಂದರೆ ಯಾಗದಂತೆ ನಿಗದಿತ ಅವಧಿ ಯಲ್ಲೇ ಕೆಲಸಗಳು ನಡೆಯಲಿವೆ ಎಂದು ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಏನಿದು ರನ್ವೇ ಸೆಂಟರ್ಲೈಟ್
ರನ್ವೇಯ ಎರಡೂ ಬದಿಯಲ್ಲಿ ಮತ್ತು ರನ್ವೇ ಒಟ್ಟು ವ್ಯಾಪ್ತಿಗೆ ಸಂಬಂಧಿಸಿದಂತೆ ಈಗಾಗಲೇ ಲೈಟ್ಗಳನ್ನು ಅಳವಡಿಸಲಾಗಿದ್ದು, ಅವುಗಳಿಗೆ ಪೂರಕವಾಗಿ ಮಧ್ಯದಲ್ಲಿ ಸೆಂಟರ್ ಲೈಟ್ಗಳನ್ನು ಅಳವಡಿಸಲಾಗುತ್ತಿದೆ. ಇವು ಹೆದ್ದಾರಿಗಳಲ್ಲಿ ಅಳವಡಿಸಲಾಗುವ ಕ್ಯಾಟ್ ಐ ಮಾದರಿಯದ್ದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.