Drought: ಬಿಜೆಪಿಯಿಂದ ಬರ ಅಧ್ಯಯನ ಪ್ರವಾಸ

ಹೊಲಗಳಲ್ಲಿ ಒಣಗಿ ನಿಂತ ಬೆಳೆಗಳ ವೀಕ್ಷಣೆ, ಮಳೆ ಕೊರತೆ, ಬೆಳೆ ಹಾನಿ, ನಷ್ಟದ ಕುರಿತು ರೈತರೊಂದಿಗೆ ಸಂವಾದ

Team Udayavani, Nov 6, 2023, 11:29 PM IST

DROUGHT 2

ತುಮಕೂರು/ ಚಾಮರಾಜನಗರ /ದಾವಣಗೆರೆ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿರುವ ಬಿಜೆಪಿ, ಸೋಮವಾರ ತುಮಕೂರು, ಚಾಮ ರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ರೈತರೊಂದಿಗೆ ಸಂವಾದ ನಡೆಸಿ, ಬೆಳೆಹಾನಿ ಬಗ್ಗೆ ಮಾಹಿತಿ ಪಡೆದುಕೊಂಡಿತು.

ತುಮಕೂರು, ಗುಬ್ಬಿ ಹಾಗೂ ಶಿರಾ ತಾಲೂಕುಗಳಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಚಿವ ನಾಗೇಶ್‌ ನೇತೃತ್ವದ ತಂಡ ಪ್ರವಾಸ ಕೈಗೊಂಡು, ಬರ ಪರಿಶೀಲಿಸಿತು. ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಬೆಳೆ ನಷ್ಟದ ಮಾಹಿತಿ ಪಡೆದುಕೊಂಡಿತು. ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೊಡಿ, ಹೊನ್ನಾಳಿ ತಾಲೂಕಿನ ಮಾದನಬಾವಿ ಇತರೆಡೆ ಬರ ಪರಿಸ್ಥಿತಿ ಅಧ್ಯಯನ ನಡೆಸಿತು.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎಪಿಎಂಸಿ ಆವರಣದಲ್ಲಿ ಯಡಿಯೂರಪ್ಪ ಅವರು ರೈತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಳೆ ಇಲ್ಲದೆ, ವಿದ್ಯುತ್‌ನ ಸಮಸ್ಯೆಯೂ ಹೆಚ್ಚಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್‌ ಸೌಲಭ್ಯ ನೀಡಿದ್ದರೆ ಕೊಳವೆ ಬಾವಿಯಲ್ಲಿರುವ ಅಲ್ಪಸ್ವಲ್ಪ ನೀರು ಬಿಟ್ಟುಕೊಂಡು ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ರಾಜ್ಯ ಸರಕಾರ ಇಂತಹ ಯಾವುದೇ ಜನಪರ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇದನ್ನು ಬಿಟ್ಟು ಪ್ರಧಾನಿ ಮೋದಿ ಅವರ ಮೇಲೆ ಟೀಕೆಗಳನ್ನು ಮಾಡುವುದರಲ್ಲೇ ಮಗ್ನವಾಗಿದೆ ಎಂದು ಆರೋಪಿಸಿದರು. ಅನಂತರ ಯಡಿಯೂರಪ್ಪ ನೇತೃತ್ವದ ತಂಡ ರೈತರ ಜಮೀನಿಗೆ ಭೇಟಿ ನೀಡಿ ರಾಗಿ ಬೆಳೆ ವೀಕ್ಷಿಸಿತು. ಮಂಗಳವಾರ ಕೊರಟಗೆರೆ, ಮಧುಗಿರಿಯಲ್ಲಿ ಯಡಿ ಯೂರಪ್ಪ ಹಾಗೂ ಇತರ ನಾಯಕರು ಬರ ಅಧ್ಯಯನ ನಡೆಸುವರು.

ಈ ನಡುವೆ ಯತ್ನಾಳ್‌ ನೇತೃತ್ವದ ತಂಡ ಗುಂಡ್ಲುಪೇಟೆ ಮತ್ತು ಚಾಮರಾಜನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ಬರ ಪರಿಸ್ಥಿತಿ ವೀಕ್ಷಿಸಿ ರೈತರಿಂದ ಮಾಹಿತಿ ಪಡೆದುಕೊಂಡಿತು. ಅಧ್ಯಯನ ತಂಡದಲ್ಲಿದ್ದ ಶಾಸಕ ಶ್ರೀವತ್ಸ, ಕೊಡಗು ಜಿಲ್ಲೆಯ ರೈತ ಮೋರ್ಚಾದ ಕಾರ್ಯದರ್ಶಿ ಡಾ| ನವೀನ್‌ಕುಮಾರ್‌, ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ಹಾಗೂ ಇತರರು ಕೀಳಲೀಪುರ, ಕುಲಗಾಣ, ಮೂಡ್ನಾಕೂಡು, ಶೀಗೇವಾಡಿ ಹಾಗೂ ಚಾಮರಾಜನಗರ ಕ್ಷೇತ್ರದ ಹೆಗ್ಗೊàಠಾರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು.

ಕಾಗೇರಿ ನೇತೃತ್ವದ ತಂಡ
ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬಿಜೆಪಿ ಮುಖಂಡರ ತಂಡ ಸೋಮವಾರ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೊಡಿ, ಹೊನ್ನಾಳಿ ತಾಲೂಕಿನ ಮಾದನಬಾವಿ ಇತರೆಡೆ ಬರ ಪರಿಸ್ಥಿತಿ ಅಧ್ಯಯನ ನಡೆಸಿತು.

ತಂಡದ ಸದಸ್ಯರು ಹರಿಹರ ತಾಲೂಕಿನ ಬೆಳ್ಳೊಡಿ ಗ್ರಾಮದ ಹಲವಾರು ಹೊಲಗಳಲ್ಲಿ ಒಣಗಿ ಹೋಗಿರುವ ಮೆಕ್ಕೆಜೋಳ, ಜೋಳ ಇತರ ಬೆಳೆಗಳನ್ನು ವೀಕ್ಷಿಸಿದರು. ರೈತರೊಂದಿಗೆ ಮಳೆಯ ಕೊರತೆ, ಬೆಳೆ ಹಾನಿ, ನಷ್ಟ, ದೊರೆಯಬೇಕಾದ ಪರಿಹಾರ, ಸರಕಾರದಿಂದ ಪರಿಹಾರ ಪಡೆಯುವ ನಿಟ್ಟಿನಲ್ಲಿ ಇರುವ ಸಾಧಕ-ಬಾಧಕ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಮಾಹಿತಿ ಪಡೆದರು.
ಬರ ಅಧ್ಯಯನ ಪ್ರವಾಸದ ಬಳಿಕ ಎಲ್ಲವನ್ನೂ ಕ್ರೋಡೀಕರಿಸಿ ಅಂತಿಮ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸ ಲಾಗುವುದು. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ರೈತರ ಪರ ಬಿಜೆಪಿ ಧ್ವನಿ ಎತ್ತಲಿದೆ ಎಂದರು.

ಹರಿಹರ ತಾಲೂಕಿನ ಬೆಳ್ಳೊಡಿ ನಂತರ ಹೊನ್ನಾಳಿ ತಾಲೂಕಿನ ಮಾದನಬಾವಿ ಸಹಿತ ಇತರ ಗ್ರಾಮಗಳಲ್ಲಿ ಅಧ್ಯಯನ ನಡೆಸಿತು. ಕುರಿಗಾಹಿಗಳೊಂದಿಗೆ ಸಂವಾದ ನಡೆಸಲಾಯಿತು. ರೈತರೊಂ ದಿಗೆ ಚರ್ಚಿಸಿ, ಹಲವಾರು ಮಾಹಿತಿ ಸಂಗ್ರಹಿಸಿದ ತಂಡ ಬರದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿತು. ಬಿರುಸಿನ ಮಳೆಯ ಕಾರಣ ಜಗಳೂರು ತಾಲೂಕಿನ ಪ್ರವಾಸ ರದ್ದುಗೊಳಿಸಲಾಯಿತು.

ರಾಜ್ಯದಲ್ಲಿ ಬರ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ತಂಡಕ್ಕೆ ನೈಜ ಸ್ಥಿತಿ ತೋರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಹಸಿರು ಜಾಗವನ್ನು ತೋರಿಸಿದರೆ ಪರಿಹಾರ ನಿರೀಕ್ಷಿಸಲು ಸಾಧ್ಯವೇ?ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು 18 ತಂಡಗಳನ್ನು ರಾಜ್ಯವನ್ನು ಸುತ್ತುತ್ತಿದ್ದು, ರೈತರ ಸಮಸ್ಯೆ, ಕುಡಿಯುವ ನೀರು, ಜಾನುವಾರುಗಳ ಮೇವು ಸಹಿತ ಸಮಗ್ರ ಅಂಶಗಳನ್ನು ಒಳಗೊಂಡಿರುವ ವರದಿಯನ್ನು ಆದಷ್ಟು ಬೇಗ ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತೇವೆ.
-ಗೋವಿಂದ ಕಾರಜೋಳ, ಮಾಜಿ ಸಚಿವ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.