Train ಸ್ಟೀಲ್ ಗರ್ಡರ್ ಅಳವಡಿಕೆ ಕಾಮಗಾರಿ: ರೈಲು ಸಂಚಾರದ ಸಮಯ ಬದಲಾವಣೆ
Team Udayavani, Nov 6, 2023, 11:47 PM IST
ಮಂಗಳೂರು: ಮಾಹೆ ರೈಲ್ವೇ ಸ್ಟೇಶನ್ ಯಾರ್ಡ್‌ನಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಸ್ಟೀಲ್ ಗರ್ಡರ್ ಅಳವಡಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಉಂಟಾಗುವ ಕಾರಣದಿಂದ ಕೆಲವು ರೈಲು ಸಂಚಾರದಲ್ಲಿ ಸಮಯ ಬದಲಾವಣೆಗಳನ್ನು ಮಾಡಲಾಗಿದೆ.
ನಂ. 22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನ. 8ರಂದು ರಾತ್ರಿ 11.45ಕ್ಕೆ ಮಂಗಳೂರಿನಿಂದ ಸಂಚಾರ ಆರಂಭಿಸುವ ಬದಲು ನ. 9ರಂದು ನಸುಕಿನ 2.35ಕ್ಕೆ ಸಂಚರಿಸಲಿದೆ. (2ಗಂ.50.ನಿಮಿಷ ತಡ). ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಚೆನ್ನೈ ಸೆಂಟ್ರಲ್‌ನಿಂದ ನ. 11ರಂದು ಮಧ್ಯಾಹ್ನ 1.35ರ ಬದಲು ಸಂಜೆ 4.25ಕ್ಕೆ ಹೊರಡಲಿದೆ. (3 ಗಂಟೆ ತಡ) ನಂ.16338 ಎರ್ನಾಕುಲಂ ಜಂಕ್ಷನ್- ಓಖಾ ಬೈ ವೀಕ್ಲಿ ಎಕ್ಸ್‌ಪ್ರೆಸ್ ನ. 8ರಂದು ಎರ್ನಾಕುಲಂನಿಂದ ರಾತ್ರಿ 8.25ರ ಬದಲಿಗೆ ನ. 9ರಂದು ರಾತ್ರಿ 12.15ಕ್ಕೆ ಹೊರಡಲಿದೆ (3 ಗಂ. 50 ನಿಮಿಷ ತಡ). ನಂ.12224 ಎರ್ನಾಕುಲಂ ಜಂಕ್ಷನ್ – ಲೋಕಮಾನ್ಯ ತಿಲಕ್ (ಟಿ) ಬೈ ವೀಕ್ಲಿ ತುರಂತೋ ಎಕ್ಸ್‌ಪ್ರೆಸ್ ರೈಲು ನ. 8ರಂದು ರಾತ್ರಿ 9.30ಕ್ಕೆ ಹೊರಡುವ ಬದಲು ನ. 9ರ ನಸುಕಿನ 1.10ಕ್ಕೆ ಹೊರಡಲಿದೆ (3ಗಂ.50 ನಿಮಿಷ ತಡ).
ನ. 7 ಮತ್ತು 9ರಂದು
ಸಂಚಾರಕ್ಕೆ ಕೆಲಕಾಲ ತಡೆ
ನ. 7 ಮತ್ತು 9ರಂದು ಈ ಕೆಳಗಿನ ರೈಲನ್ನು ಕೆಲವು ಗಂಟೆಗಳ ಕಾಲ ತಡೆ ಹಿಡಿಯಲಾಗುತ್ತದೆ. ನಂ. 12618 ಹಜರತ್ ನಿಜಾಮುದ್ದೀನ್- ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ 3 ಗಂ. 20 ನಿಮಿಷ ತಡೆಹಿಡಿಯಲಾಗುತ್ತದೆ. ನಂ.12685 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಗಳೂರು ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು 1ಗಂ.10 ನಿಮಿಷ, ನಂ.16604 ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲು 1 ಗಂಟೆ, ನಂ.12484 ಅಮೃತಸರ-ಕೊಚ್ಚುವೇಲಿ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ 2 ಗಂ.40 ನಿಮಿಷ ತಡೆ ಹಿಡಿಯಲಾಗುತ್ತದೆ.
ನ.10ರಂದು ನಂ.12618 ಹಜರತ್ ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು 20 ನಿಮಿಷ ತಡೆಹಿಡಿಯಲಾಗುತ್ತದೆ ಎಂದು ದಕ್ಷಿಣ ರೈಲ್ವೇಯ ಪಾಲಾ^ಟ್ ವಿಭಾಗದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.