Belthangady ಒಳಚರಂಡಿಗೆ ಬಿದ್ದ ಹಸು; ಸ್ಥಳೀಯರಿಂದ ರಕ್ಷಣೆ
Team Udayavani, Nov 7, 2023, 12:27 AM IST
ಬೆಳ್ತಂಗಡಿ: ತ್ಯಾಜ್ಯ ನೀರು ಸಾಗುವ ಒಳಚರಂಡಿ ಸ್ಲ್ಯಾಬ್ ತುಂಡಾದ ಪರಿಣಾಮ ಹಸುವೊಂದು ಅದರೊಳಗಡೆ ಸಿಲುಕಿಕೊಂಡ ಘಟನೆ ನ. 6ರಂದು ನಡೆದಿದೆ.
ಇಲ್ಲಿನ ಕೃಷಿ ಇಲಾಖೆಯ ಜಾಗದಲ್ಲಿ ಪ.ಪಂ. ವ್ಯಾಪ್ತಿಯ ತ್ಯಾಜ್ಯ ನೀರು ಸಾಗುವ ಒಳಚರಂಡಿ ವ್ಯವಸ್ಥೆಯಿದೆ. ಇದರ ಸ್ಲ್ಯಾಬ್ ಬಹಳಷ್ಟು ಹಳೆಯದಾಗಿದ್ದು, ಬಹುತೇಕ ತುಂಡಾಗಿತ್ತು. ಹಸುವೊಂದು ಹುಲ್ಲು ಮೇಯುತ್ತಾ ಈ ಚರಂಡಿಗೆ ಬಿದ್ದಿದೆ. ಮೇಲೇಳಲಾಗದೆ ಚರಂಡಿಯೊಳಗೆ ಸಾಗಿದ್ದರಿಂದ 10 ಮೀಟರ್ ಒಳಗೆ ಸಿಲುಕಿಕೊಂಡಿತ್ತು. ಸ್ಥಳೀಯರು ಪ.ಪಂ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸ್ಥಳೀಯರು ಪ್ರಯತ್ನಿಸಿದರಾದರೂ ಚರಂಡಿಯೊಳಕ್ಕೆ ನುಸುಳಲು ಸಾಧ್ಯ ವಾಗದೇ ಇರುವುದರಿಂದ ಹಸು ವನ್ನು ಮೇಲಕ್ಕೆತ್ತಲಾಗಲಿಲ್ಲ.
ಬಳಿಕ ಪಟ್ಟಣ ಪಂಚಾಯತ್ ಸಹಕಾರದಿಂದ ಜೆಸಿಬಿ ತರಿಸಿ ಹಸುವನ್ನು ಮೇಲಕ್ಕೆತ್ತಲಾಯಿತು. ಸುಮಾರು 2 ತಾಸು ಕಾರ್ಯಾಚರಣೆ ಬಳಿಕ ಹಸು ಮೇಲಕೆತ್ತಲಾಯಿತು. ಹಸು ಜೀವಹಾನಿ ಸಂಭವಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas, ವರ್ಷಾಂತ್ಯ ಸಂಭ್ರಮ; ಬೀಚ್ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.