ICC Player Of The Month Award; ಪಟ್ಟಿಯಲ್ಲಿ ಬುಮ್ರಾ, ಹೊಸ ಪ್ರತಿಭೆ ರಚಿನ್ ರವೀಂದ್ರ
Team Udayavani, Nov 7, 2023, 5:37 PM IST
ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಆಕ್ಷನ್-ಪ್ಯಾಕ್ಡ್ ಅಕ್ಟೋಬರ್ ತಿಂಗಳ ನಂತರ ಐಸಿಸಿ ‘ಪ್ಲೇಯರ್ ಆಫ್ ದಿ ಮಂತ್’ ಪ್ರಶಸ್ತಿಗೆ ಐಸಿಸಿ ಮಂಗಳವಾರ ಮೂರು ನಾಮಿನೇಶನ್ ಗಳನ್ನು ಬಿಡುಗಡೆ ಮಾಡಿದೆ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಕ್ಟೋಬರ್ ನಲ್ಲಿ ಗುಂಪು ಹಂತದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೂವರನ್ನು ಐಸಿಸಿ ಪಟ್ಟಿ ಮಾಡಿದೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಮತ್ತು ನ್ಯೂಜಿಲ್ಯಾಂಡ್ ತಂಡದ ಯುವ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮಹಿಳಾ ವಿಭಾಗದಲ್ಲಿ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್, ಬಾಂಗ್ಲಾದೇಶದ ಯುವ ಎಡಗೈ ಬೌಲರ್ ನಹಿದಾ ಅಖ್ತರ್ ಮತ್ತು ನ್ಯೂಜಿಲ್ಯಾಂಡ್ ನ ಬ್ಯಾಟರ್ ಅಮೆಲಿಯಾ ಕೆರ್ ಅವರು ಅಕ್ಟೋಬರ್ ತಿಂಗಳ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.
Two all-rounders and a young spinner 🌟
The ICC Women’s Player of the Month for October 2023 have been announced ⬇️https://t.co/BfLlN1eUH6
— ICC (@ICC) November 7, 2023
ಐಸಿಸಿಯ ಸ್ವತಂತ್ರ ವೋಟಿಂಗ್ ಅಕಾಡೆಮಿ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ವಿಜೇತರನ್ನು ನಿರ್ಧರಿಸಲು ತಮ್ಮ ಮತಗಳನ್ನು ಚಲಾಯಿಸಲು ಈಗ ಆಹ್ವಾನಿಸಲಾಗುತ್ತದೆ. ಫಲಿತಾಂಶಗಳನ್ನು ಮುಂದಿನ ವಾರ ಪ್ರಕಟಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.