Majali check post ಬಳಿ ಸಿಕ್ಕಿದ್ದು ಮದ್ಯಕ್ಕೆ ಬಳಸುವ ಸ್ಪಿರಿಟ್: ಅಬಕಾರಿ ಡಿಸಿ ರೂಪ.ಎಂ.


Team Udayavani, Nov 7, 2023, 6:12 PM IST

ಮಾಜಾಳಿ ಚೆಕ್ ಪೋಸ್ಟ್ ಬಳಿ ಸಿಕ್ಕಿದ್ದು ಮದ್ಯಕ್ಕೆ ಬಳಸುವ ಸ್ಪಿರಿಟ್: ಅಬಕಾರಿ ಡಿಸಿ ರೂಪ.ಎಂ.

ಕಾರವಾರ: ಮಾಜಾಳಿ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 30 ಸಾವಿರ ಲೀಟರ್ ಸ್ಪಿರಿಟ್ ವಶವಾಗಿದೆ. ಇದರ ಅಂದಾಜು ಮೊತ್ತ 18 ಲಕ್ಷ ರೂ. ಹಾಗೂ ಟ್ಯಾಂಕರ್ ಬೆಲೆ 35 ಲಕ್ಷದ್ದಾಗಿದ್ದು ವಶಕ್ಕೆ ಪಡೆಯಲಾಗಿದೆ. ಚಾಲಕ ಹಾಗೂ ಕ್ಲೀನರ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ರೂಪ.ಎಂ ತಿಳಿಸಿದರು.

ಅಬಕಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕೈಗಾರಿಕಾ ಉದ್ದೇಶದ ಹೆಸರಲ್ಲಿ ಮದ್ಯ ತಯಾರಿಕಾ ಸ್ಪಿರಿಟ್ ಸಾಗಾಟದ ಅಕ್ರಮದ ಬಗ್ಗೆ ವಿವರಿಸಿದರು.

ಬೀದರ್ ನ ರವೀಂದ್ರ ಡಿಸ್ಟಲರಿ ಹೆಸರಲ್ಲಿ ಗೋವಾದ ಗ್ಲೋಬಲ್ ಡಿಸ್ಟಲರಿ ಘಟಕಕ್ಕೆ ಸ್ಪಿರಿಟ್ ಸಾಗಾಟವಾಗುತ್ತಿತ್ತು. ತನಿಖೆಯಲ್ಲಿ ಗ್ಲೋಬಲ್ ಡಿಸ್ಟಲರಿ ಎಂಬ ಘಟಕ ಮುಚ್ಚಿರುವುದು ಬೆಳಕಿಗೆ ಬಂದಿದೆ. ಬೀದರನ ರವೀಂದ್ರ ಡಿಸ್ಟಲರಿ ವ್ಯವಸ್ಥಾಪಕ ನಿರ್ದೇಶಕರನ್ನು ಎಫ್ಐ‌ಆರ್ ನಲ್ಲಿ ಸೇರಿಸಲಾಗಿದೆ ಎಂದರು. ವಶಪಡಿಸಿಕೊಂಡ ಟ್ಯಾಂಕರ್ ಮಧ್ಯಪ್ರದೇಶದ್ದು, ಚಾಲಕ ಹಾಗೂ ಕ್ಲೀನರ್ ಸಹ ಮಧ್ಯಪ್ರದೇಶದವರು. ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.

ಇದನ್ನೂ ಓದಿ:ICC Player Of The Month Award; ಪಟ್ಟಿಯಲ್ಲಿ ಬುಮ್ರಾ, ಹೊಸ ಪ್ರತಿಭೆ ರಚಿನ್ ರವೀಂದ್ರ

ಅಕ್ರಮ ಸ್ಪಿರಿಟ್ ಬೆಲೆ 18 ಲಕ್ಷ ರೂ. ಟ್ಯಾಂಕರ್ ನಲ್ಲಿ 30,000 ಲೀಟರ್ ಸ್ಪಿರಿಟ್ ಇದೆ. ಇದರಿಂದ 10,000 ಬಾಕ್ಸ್ ಮದ್ಯ ತಯಾರಿಸಬಹುದು. ಅಂದಾಜು 3.66 ಕೋಟಿ ಬೆಲೆಯ ಮದ್ಯ ತಯಾರಿಸಿ ಮಾರುವ ಸಾಧ್ಯತೆ ಇತ್ತು. ಚೆಕ್ ಪೋಸ್ಟ್ ನಲ್ಲಿ ನಮಗೆ ಅಕ್ರಮ ಸ್ಪಿರಿಟ್ ಸಾಗಾಟದ ಮಾಹಿತಿಯಿತ್ತು. ಚಾಲಕ ತೋರಿಸಿದ ಕೈಗಾರಿಕಾ ಉದ್ದೇಶದ ಸ್ಪಿರಿಟ್ ಎಂಬ ಪತ್ರ ನಕಲಿ ಎಂದು ಅನುಮಾನ ಬಂದಾಗ, ಸ್ಪಿರಿಟನ್ನು ಪ್ರಯೋಗಾಲಯಕ್ಕೆ ಕಳಿಸಲಾಯಿತು.‌ ಧಾರವಾಡ, ಹಳಿಯಾಳ ಅಬಕಾರಿ ಪ್ರಯೋಗಾಲಯದಿಂದ ಬಂದ ವರದಿಗಳು ಮದ್ಯಕ್ಕೆ ಬಳಸುವ ಸ್ಪಿರಿಟ್ ಎಂದು ಖಚಿತಪಡಿಸಿವೆ. ಹಾಗಾಗಿ ತಕ್ಷಣ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ರೂಪ ವಿವರಿಸಿದರು.

ಮಾಜಾಳಿ ಮತ್ತು ಅನಮೂಡ ಚೆಕ್ ಪೋಸ್ಟ್ ನಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಅನೇಕ ರೈಡ್ ನಡದಿವೆ ಎಂದರು. ಅಬಕಾರಿ ಸಿಪಿಐ ಸದಾಶಿವ ಕೋರ್ತಿ, ಬಸವರಾಜ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಶಾಸಕರಿಗೆ ತಪ್ಪು ಮಾಹಿತಿಯಿದ್ದ ಕಾರಣ ಸ್ವಲ್ಪ ಮಾತಿನ ವ್ಯತ್ಯಾಸವಾಗಿದೆ.‌ ಇದನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.

ಅಬಕಾರಿ ಅಕ್ರಮ ತಡೆಗೆ ನೇವಿ ಪೋಲೀಸ್, ಕೋಸ್ಟ್ ಗಾರ್ಡ್, ‌ಕರಾವಳಿ ಕಾವಲು ಪಡೆ ಜೊತೆ ಸಭೆ ಮಾಡುವುದಾಗಿ ಹೇಳಿದರು.

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.