Deepfake 3 ವರ್ಷ ಜೈಲು: ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೇಂದ್ರ ಎಚ್ಚರಿಕೆ
Team Udayavani, Nov 8, 2023, 6:00 AM IST
ಹೊಸದಿಲ್ಲಿ: ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೇಂದ್ರ ಸರಕಾರ ಅದಕ್ಕೆ ಏನು ಶಿಕ್ಷೆ ಎನ್ನುವುದನ್ನು ಬಹಿರಂಗ ಪಡಿಸಿದೆ. 2000ನೇ ವರ್ಷದಲ್ಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಇಂತಹ ಪ್ರಕರಣಗಳಿಗೆ ಶಿಕ್ಷೆ ನಿರ್ಧರಿಸ ಲಾಗಿದೆ. ಇದನ್ನೀಗ ಸರಕಾರವು ಮತ್ತೂಮ್ಮೆ ನೆನಪಿಸುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಕಂಪ್ಯೂಟರ್ ಸಂಪನ್ಮೂಲ ಬಳಸಿಕೊಂಡು ಒಬ್ಬ ವ್ಯಕ್ತಿ ಯನ್ನು ಇನ್ನೊಬ್ಬ ವ್ಯಕ್ತಿಯೆಂಬಂತೆ ತೋರಿಸಿದರೆ, ಅದಕ್ಕೆ 3 ವರ್ಷ ಜೈಲುಶಿಕ್ಷೆ ಇರುತ್ತದೆ. 1 ಲಕ್ಷ ರೂ.ಗೂ ಅಧಿಕ ದಂಡ ವನ್ನೂ ಹಾಕಬಹುದು ಎಂದು ಕಾನೂನು ಹೇಳು ತ್ತದೆ. ಸದ್ಯದ ಪ್ರಶ್ನೆಯೆಂದರೆ, ರಶ್ಮಿಕಾರ ಫೋಟೋ ದುರ್ಬ ಳಕೆ ಮಾಡಿಕೊಂಡಿದ್ದು ಯಾರು ಎನ್ನುವುದು. ಬಹು ಶಃ ಸಂಬಂಧಪಟ್ಟ ವ್ಯಕ್ತಿ ಪತ್ತೆಯಾದರೆ ಆತನಿಗೆ ಶಿಕ್ಷೆ ಖಾತ್ರಿ.
ಇದೇ ವೇಳೆ ಘಟನೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಸಂಬಂಧ ಹೊಂದಿರುವ ಭಾರತ-ಬ್ರಿಟನ್ ಮಹಿಳೆ ಝರಾ ಪಟೇಲ್ ಆಘಾತ ವ್ಯಕ್ತಪಡಿಸಿದ್ದಾರೆ. ಈಕೆ ಲಿಫ್ಟ್ ಪ್ರವೇಶಿಸುತ್ತಿರುವ ವೀಡಿಯೋಕ್ಕೆ ರಶ್ಮಿಕಾ ಮುಖ ಜೋಡಿಸಲಾಗಿತ್ತು. “ಘಟನೆಯನ್ನು ಕೇಳಿ ತನಗೆ ಆಘಾತ ವಾಗಿದೆ, ಮಹಿಳೆಯರ ಸುರಕ್ಷೆ ಬಗ್ಗೆ ಆತಂಕ ವಾಗಿದೆ. ಸಾಮಾಜಿಕ ತಾಣದಲ್ಲಿ ತಮ್ಮ ಬಗ್ಗೆ ಏನನ್ನೇ ಆದರೂ ಹಾಕುವುದು ಅಪಾಯಕಾರಿ. ದಯ ವಿಟ್ಟು ಅಂತರ್ಜಾಲ ದಲ್ಲಿ ಏನೇ ಬಂದರೂ ಒಮ್ಮೆ ಸತ್ಯಾಸತ್ಯತೆ ಪರಿಶೀಲನೆ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ, ರಶ್ಮಿಕಾ ಫೋಟೋ ದುರ್ಬಳಕೆಯನ್ನು ತಾರೆ ಯ ರಾದ ನಾಗ ಚೈತನ್ಯ, ಮೃಣಾಲ್ ಠಾಕೂರ್, ಗಾಯಕಿ ಚಿನ್ಮಯಿ ಶ್ರೀಪಾದ ಸೇರಿ ಅನೇಕರು ಖಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.