World Cup; ನೆದರ್ಲೆಂಡ್ಸ್‌  ವಿರುದ್ಧವೂ ಇಂಗ್ಲೆಂಡ್‌ ಫೇವರಿಟ್‌ ಅಲ್ಲ!

ಅಂತಿಮ ಸ್ಥಾನದಿಂದ ಮೇಲೇರೀತೇ "ಮಾಜಿ' ಚಾಂಪಿಯನ್‌?

Team Udayavani, Nov 8, 2023, 6:30 AM IST

1-sadsad

ಪುಣೆ: ಕಳೆದ ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡದ ವಿಶ್ವಕಪ್‌ ಅಭಿಯಾನ ಅತ್ಯಂತ ಶೋಚನೀಯ ಹಾಗೂ ಆಘಾತಕಾರಿ ಯಾಗಿ ಮುಗಿದಿದೆ. ವಿಶ್ವಕಪ್‌ ಪಂದ್ಯಾ ವಳಿಯೊಂದರಲ್ಲೇ ಅತ್ಯಧಿಕ 6 ಸೋಲನುಭವಿಸಿದ ಕಹಿಯನ್ನು ಕ್ರಿಕೆಟ್‌ ಜನಕರೆಂಬ ಖ್ಯಾತಿಯ ಆಂಗ್ಲರು ಅರಗಿಸಿಕೊಳ್ಳುವುದು, ಮರೆಯುವುದು ಅಷ್ಟು ಸುಲಭವಲ್ಲ.
ಜಾಸ್‌ ಬಟ್ಲರ್‌ ನೇತೃತ್ವದ ಇಂಗ್ಲೆಂಡ್‌ ಕಟ್ಟಕಡೆಯ ಸ್ಥಾನಕ್ಕೆ ಕುಸಿದಿದೆ ಎಂಬು ದನ್ನು ಅಷ್ಟು ಸುಲಭದಲ್ಲಿ ನಂಬ ಲಾಗದು, ಒಪ್ಪಲಿಕ್ಕೂ ಆಗದು. ಆದರೆ ಇದು ವಾಸ್ತವ. ಇಂಥ ಸ್ಥಿತಿಯಲ್ಲಿ ಅದು ಮಂಗಳವಾರ ಪುಣೆಯಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ.

ಡಚ್ಚರ ಪಡೆ ಕೂಡ ಇಂಗ್ಲೆಂಡನ್ನು ಅಪ್ಪಚ್ಚಿ ಮಾಡಿದರೆ ಅಚ್ಚರಿ ಇಲ್ಲ.
ನೆದರ್ಲೆಂಡ್ಸ್‌ ಬಳಿಕ ಇಂಗ್ಲೆಂಡ್‌ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಇವೆ ರಡನ್ನೂ ಗೆದ್ದು ಈಗಾಗಲೇ ಉಲ್ಬಣಿಸಿರುವ ಗಾಯಕ್ಕೆ ಒಂದಿಷ್ಟು ಮುಲಾಮು ಹಚ್ಚಿಕೊಳ್ಳುವ ಪ್ರಯತ್ನ ವನ್ನು ಮಾಡಬೇಕಿದೆ. 10ರಿಂದ ಕನಿಷ್ಠ 7ನೇ ಸ್ಥಾನಕ್ಕಾದರೂ ಏರಿದರೆ ಇಂಗ್ಲೆಂಡ್‌ ಪ್ರತಿಷ್ಠೆ ಸ್ವಲ್ಪವಾದರೂ ಉಳಿದೀತು. ಏಕೆಂದರೆ, ಆಗ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಯಲ್ಲಿ ಆಡುವ ಅವಕಾಶವೊಂದು ಲಭಿಸಲಿದೆ. ಇಂಗ್ಲೆಂಡ್‌ ಪ್ರಯತ್ನವಿನ್ನು ಈ ನಿಟ್ಟಿನಲ್ಲಿ ಸಾಗಬೇಕಿದೆ.

ಬಲವಾಗಿ ಬಿತ್ತು ಆರಂಭಿಕ ಏಟು
ಉದ್ಘಾಟನ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್‌ ಕೈಯಲ್ಲಿ ಎದ್ದೇಳಲಾಗದ ಏಟು ತಿಂದ ಇಂಗ್ಲೆಂಡ್‌, ತನ್ನ 7ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಕ್ಕೆ 33 ರನ್ನುಗಳಿಂದ ಸೋತ ಬಳಿಕ ಸೆಮಿಫೈನಲ್‌ ಪ್ರವೇಶದ ಕ್ಷೀಣ ಆಸೆಯನ್ನೂ ಕಳೆದುಕೊಂಡಿತು.

ಇಂಗ್ಲೆಂಡ್‌ನ‌ ಈಗಿನ ಅವಸ್ಥೆ ಯನ್ನು ಕಂಡಾಗ ಅದು ನೆದರ್ಲೆಂಡ್ಸ್‌ ವಿರುದ್ಧವೂ ನೆಚ್ಚಿನ ತಂಡವಾಗಿ ಉಳಿದಿಲ್ಲ. ನೆದರ್ಲೆಂಡ್ಸ್‌ ಏಳರಲ್ಲಿ 2 ಪಂದ್ಯಗಳನ್ನು ಗೆದ್ದಿದೆ. ಮಳೆ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾವನ್ನು ಬುಡ ಮೇಲು ಮಾಡಿದ ಹೆಗ್ಗಳಿಕೆ ಸ್ಕಾಟ್‌ ಎಡ್ವರ್ಡ್ಸ್‌ ಪಡೆಯದ್ದು. ಬಳಿಕ ಬಾಂಗ್ಲಾದೇಶವನ್ನೂ ಮಣಿಸಿತು. ಇಂಗ್ಲೆಂಡ್‌ ಈವರೆಗೆ ಸೋಲಿಸಲು ಯಶಸ್ವಿಯಾದದ್ದು ಬಾಂಗ್ಲಾವನ್ನು ಮಾತ್ರ.

ಇಂಗ್ಲೆಂಡ್‌ ಎಲ್ಲ ವಿಭಾಗಗಳಲ್ಲೂ ಘೋರ ವೈಫ‌ಲ್ಯ ಅನುಭವಿಸಿದ ತಂಡ. ಆಂಗ್ಲರ ಬ್ಯಾಟಿಂಗ್‌ ಕೂಟದಲ್ಲೇ ಅತ್ಯಂತ ಬಲಿಷ್ಠ ಎಂಬುದು ಸುಳ್ಳಾಗುತ್ತಲೇ ಹೋಯಿತು. ಬೇರ್‌ಸ್ಟೊ, ಮಲಾನ್‌, ರೂಟ್‌, ಸ್ಟೋಕ್ಸ್‌, ಬ್ರೂಕ್‌, ಲಿವಿಂಗ್‌ಸ್ಟೋನ್‌, ಬಟ್ಲರ್‌, ಅಲಿ, ಕರನ್‌… ಹೀಗೆ ಎಲ್ಲರೂ ಇಲ್ಲಿ ಸ್ಟಾರ್‌ ಬ್ಯಾಟರ್‌ಗಳೇ. ಆದರೆ ಇವರ ತಾಕತ್ತು ಕಾಗದದಲ್ಲಿ ಮಾತ್ರ ಎಂಬುದು ಸಾಬೀತಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ಇಂಗ್ಲೆಂಡ್‌ ಬೌಲಿಂಗ್‌ ವಿಭಾಗದ ವೈಫ‌ಲ್ಯ ಇನ್ನಷ್ಟು ಘೋರ. ಇವರ ದಾಳಿಯನ್ನು ಎಲ್ಲರೂ ಕಣ್ಮುಚ್ಚಿಕೊಂಡೇ ಎದುರಿಸಿದರು. ರೀಸ್‌ ಟಾಪ್‌ಲೀ ಒಂದಿಷ್ಟು ಪರಿಣಾಮ ಬೀರತೊಡ ಗಿದರು ಎನ್ನುವಾಗಲೇ ಕೂಟದಿಂದ ಹೊರಬಿದ್ದರು.

ಇಂಗ್ಲೆಂಡ್‌ ವಿರುದ್ಧ ಗೆದ್ದಿಲ್ಲ

“ಆರೇಂಜ್‌ ಆರ್ಮಿ’ ನೆದರ್ಲೆಂಡ್ಸ್‌ಗೂ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಗೆ ಅರ್ಹತೆ ಸಂಪಾದಿಸುವ ಸುವರ್ಣಾವಕಾಶವೊಂದು ಇಲ್ಲಿ ಎದು ರಾಗಿದೆ. ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಈ ಅವಕಾಶ ಹತ್ತಿರವಾಗುವುದರ ಜತೆಗೆ ಇತಿಹಾಸವನ್ನೂ ನಿರ್ಮಿಸಿ ದಂತಾಗುತ್ತದೆ. ಅದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಈವರೆಗೆ ಗೆದ್ದಿಲ್ಲ. ಆಡಿದ ಮೂರರಲ್ಲೂ ಸೋತಿದೆ. ಕೊನೆಯ ಸಲ ಎದುರಾದದ್ದು 2011ರ ವಿಶ್ವಕಪ್‌ನಲ್ಲಿ. ಅಂದಹಾಗೆ, ನೆದರ್ಲೆಂಡ್ಸ್‌ ತಂಡದ ಕೊನೆಯ ಎದುರಾಳಿ ಆತಿಥೇಯ ಭಾರತ!

ನೆದರ್ಲೆಂಡ್ಸ್‌ ಆಲ್‌ರೌಂಡರ್‌ಗಳ ಪಡೆ. ಆದರೆ ಕೂಟದುದ್ದಕ್ಕೂ ಓಪನಿಂಗ್‌ ವೈಫ‌ಲ್ಯ ಎದುರಿಸುತ್ತ ಬಂದಿದೆ. ಆಗೆಲ್ಲ ಮಧ್ಯಮ ಕ್ರಮಾಂಕದ ಆಟಗಾರರು ತಂಡದ ರಕ್ಷಣೆಗೆ ನಿಂತಿದ್ದಾರೆ. ಬೌಲಿಂಗ್‌ ವಿಭಾಗ ಇನ್ನಷ್ಟು ಘಾತಕಗೊಳ್ಳಬೇಕಿದೆ. ಡಚ್ಚರ ಪಡೆ ಈ ಕೂಟದಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಒತ್ತಡವೂ ಇಲ್ಲ. ಹೀಗಾಗಿ ದಿಟ್ಟ ಪ್ರದರ್ಶನ ನೀಡಿ ಇಂಗ್ಲೆಂಡನ್ನು ಮಣಿಸಿದರೆ ಅದೊಂದು ಮಹಾನ್‌ ವಿಜಯವಾಗಿ ದಾಖಲಾಗಲಿದೆ.

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.