Madras High Court ಸನಾತನ ಧರ್ಮ ಬಗ್ಗೆ ನಿಮ್ಮ ತಿಳುವಳಿಕೆಯ ಆಧಾರವೇನು ?
ಸಚಿವ ಉದಯಾನಿಧಿ ಸ್ಟಾಲಿನ್‌ಗೆ ಮದ್ರಾಸ್ ಹೈ ತರಾಟೆ
Team Udayavani, Nov 8, 2023, 9:59 PM IST
ಚೆನ್ನೈ: ಸನಾತನ ಧರ್ಮ ನಾಶದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ಗೆ ಅದರ ಬಗ್ಗೆ ತಿಳಿವಳಿಕೆಯ ಆಧಾರವೇನು ಎಂದು ಪ್ರಶ್ನಿಸಿದೆ. ಜತೆಗೆ ಈ ನಿಟ್ಟಿನಲ್ಲಿ ಅವರು ನಡೆಸಿದ ಸಂಶೋಧನೆಗಳೇನು ಎಂದು ಮದ್ರಾಸ್ ಹೈಕೋರ್ಟ್ ಕೇಳಿದೆ.
ಉದಯನಿಧಿ ಸ್ಟಾಲಿನ್ ಹೇಳಿಕೆ ಪ್ರಶ್ನಿಸಿ ಸಂಘಟನೆಯೊಂದು ಪ್ರಶ್ನಿಸಿ ಸಲ್ಲಿಸಿದ್ದ 3 ರಿಟ್ ಅರ್ಜಿಗಳನ್ನು ನ್ಯಾ.ಅನಿತಾ ಸುಮಂತ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಸನಾತನ ಧರ್ಮದ ಕುರಿತಾದ ತಮ್ಮ ಭಾಷಣದಲ್ಲಿ ಉದಯಾನಿಧಿ ಅವರು ಏನೆಲ್ಲಾ ಮಾತನಾಡಿದ್ದರೋ ಅದರ ಟೈಪ್ ಮಾಡಿದ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿತು.
ಧರ್ಮವನ್ನು – ಸನಾತನ ಧರ್ಮದೊಂದಿಗೆ ಸಮೀಕರಿಸುವ ಹೇಳಿಕೆಗಳು ಬಂದದ್ದು ಹೇಗೆ, ಯಾವ ಅಧ್ಯಯನದ ಆಧಾರದ ಮೇಲೆ ಸನಾತನ ಧರ್ಮವನ್ನು ಸ್ಟಾಲಿನ್ ಅರ್ಥೈಸಿಕೊಂಡಿದ್ದಾರೆ ಎಂಬುದನ್ನೂ ತಿಳಿಸಬೇಕು ಎಂದು ನ್ಯಾಯಪೀಠ ಉದಯನಿಧಿಗೆ ತಾಕೀತು ಮಾಡಿದೆ.
ಸೆ.2ರಂದು ಉದಯಾನಿಧಿ ಡೆಂಗ್ಯೂ , ಸೊಳ್ಳೆ, ಮಲೇರಿಯಾ ಅಥವಾ ಕೊರೊನಾ ವೈರಸ್ ನಿರ್ಮೂಲನೆ ಮಾಡುವಂತೆಯೇ ನಾವು ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡಬೇಕಿದೆ ಹೇಳಿ ವಿವಾದ ಸೃಷ್ಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.