Karwar ವೈದ್ಯಕೀಯ ಕಾಲೇಜು ಅವ್ಯವಸ್ಥೆ ಸಚಿವರ ಎದುರು ಬಯಲಿಗೆ
ವೈದ್ಯರು ಹಾಗೂ ನಿರ್ದೇಶಕರ ನಡುವಿನ ವೈಮನಸ್ಸು ಬಹಿರಂಗ
Team Udayavani, Nov 9, 2023, 12:35 AM IST
ಕಾರವಾರ: ಕಾರವಾರ ವೈದ್ಯಕೀಯ ಕಾಲೇಜು ಅವ್ಯವಸ್ಥೆ ಬುಧುವಾರ ವೈದ್ಯಕೀಯ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಯಲಿಗೆ ಬಂದಿತು.
ವೈದ್ಯರು ಹಾಗೂ ನಿರ್ದೇಶಕರ ನಡುವಿನ ವೈಮನಸ್ಸು ಸಹ ಸಚಿವರ ಎದುರು ಬಹಿರಂಗವಾಯಿತು. ಪ್ರೊಫೆಸ್ಸರ್ ಹಾಗೂ ಕೆಲ ವೈದ್ಯರು ನಿರ್ದೇಶಕ ಮತ್ತು ಆಡಳಿತಾಧಿಕಾರಿ ನಿರ್ಲಕ್ಷ್ಯವನ್ನು ಸಚಿವರ ಎದುರು ತೋಡಿಕೊಂಡರು. ಜಿಲ್ಲಾಧಿಕಾರಿ ಗಂಗೂಬಾಯಿ ವೈದ್ಯರ ಆರೋಪಗಳನ್ನು ಪಟ್ಟಿ ಮಾಡಿಕೊಂಡರು. ಕಿರುಕುಳಕ್ಕೆ ತುತ್ತಾದ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಿರ್ದೇಶಕರು ಮೌನ ತಾಳಿದಾಗ , ನೀವು ಈ ಹುದ್ದೆಗೆ ಹೇಗೆ ಬಂದಿದ್ದೀರಿ, ಯಾಕೆ ಬಂದಿರಿ ಎಂದು ಗೊತ್ತು. ನಿಮಗೆ ಬೇಕಾದ ಹಾಗೆ ಬೈಲಾ ಮಾಡಿಕೊಂಡು ಅಂದಾಧುಂದಿ ನಡೆಸಿದ್ದೀರಿ.ಇದು ಬಹಳ ಕಾಲ ನಡೆಯುವುದಿಲ್ಲ. ದೇವರ ಕೊಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು. ವೈದ್ಯರು, ಜನರು ಹಾಗೂ ವಿದ್ಯಾರ್ಥಿಗಳಿಂದ ದೂರು ಬರಬಾರದು. ಎಸ್ ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದರೆ ಜೈಲಿಗೆ ಹೋಗುತ್ತೀರಿ ಎಂದು ಸಚಿವ ವೈದ್ಯ ಎಚ್ಚರಿಸಿದರು.
ವೈದ್ಯರಿಂದ ದೂರುಗಳ ಸುರಿಮಳೆ
ವೈದ್ಯರಿಗೆ ಕುಳಿತು ಕೊಳ್ಳಲು ಸರಿಯಾದ ಚೇರ್ ಸಹ ಇಲ್ಲ. ವಿಶ್ರಾಂತಿ ಕೊಠಡಿ ಇಲ್ಲ, ಕೆಲ ದಾಖಲೆ ಪ್ರಿಂಟ್ ತೆಗೆಯಲು ಪ್ರಿಂಟರ್ ಸಹ ಕೊಡಿಸಿಲ್ಲ ಎಂದು ಕೆಲ ಹಿರಿಯ ಪ್ರೊಫೆಸರ್ ಹೇಳಿದರೆ, ಕೆಲ ವೈದ್ಯರು ತಿಂಗಳ ಕೊನೆಗೆ ಬಂದು ಸಹಿ ಮಾಡಿ ,ವೇತನ ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಮೆಡಿಕಲ್ ಕಾಲೇಜಿನ ಆಸ್ಪತ್ರೆ ಅಗತ್ಯತೆಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದ ಸಚಿವ ವೈದ್ಯ, ಎಂಆರ್‌ಐ ಸ್ಕ್ಯಾನರ್‌ಗೆ ಈಗಾಗಲೇ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಕ್ರಿಮ್ಸ್ ಗೆ ಎಂ ಆರ್‌ಐ ಸ್ಕ್ಯಾನರ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಇಲ್ಲಿನ ವೈದ್ಯರು ನೂತನ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಒಂದೇ ಒಂದೇ ಪ್ರಸ್ತಾವ ಕಳುಸಹಿಲ್ಲ. ಆಸ್ಪತ್ರೆಯ ಕುರಿತು ನಿರ್ಲಕ್ಷ್ಯ ಸಲ್ಲ ಎಂದು ನಿರ್ದೇಶಕ ಗಜಾನನ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಆಸ್ಪತ್ರೆ ಆಡಳಿತದಲ್ಲಿ ಅವ್ಯವಸ್ಥೆಯಾಗಿದೆಯೆಂದು ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯ್ಕ ವಿರುದ್ಧ ಕೆಲವು ವೈದ್ಯರುಗಳು ಅಸಮಾಧಾನ ತೋರಿಕೊಂಡರು. ಹಿರಿಯ ವೈದ್ಯರಿಗೆ ಕಾರ್ಯನಿರ್ವಹಿಸಲು ಕಿರುಕುಳ ನೀಡುತ್ತಿದ್ದಾರೆ. ಜೂನಿಯರ್ ಗಳ ಎದುರು ಸೀನಿಯರ್ ಗಳಿಗೆ ಕಿಮ್ಮತ್ತಿಲ್ಲದಂತೆ ನೋಡಿಕೊಳ್ಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಕ್ರಮವಾಗಿ ಮೆಡಿಕಲ್ ಕಾಲೇಜಿಗೆ ಡಾ.ಗಜಾನನ ನಾಯಕ ನಿರ್ದೇಶಕರಾಗಿ ಬಂದಿದ್ದಾರೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವೈದ್ಯರನ್ನ ನಿರ್ಲಕ್ಷಿಸಿದ್ದಾರೆ ಎಂದು ಕ್ರಿಮ್ಸ್ ನಿರ್ದೇಶಕರ ವಿರುದ್ಧ ಹಿರಿಯ ವೈದ್ಯರುಗಳು ಆರೋಪ ಮಾಡಿದರು.
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ವೈದ್ಯ, ಕ್ರಿಮ್ಸ್ ಆಡಳಿತ ವ್ಯವಸ್ಥೆಯನ್ನ ಸರಿಪಡಿಸುವ ಕಾರ್ಯ ಆಗಲಿದೆ ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ, ಡಿಯುಡಿಸಿ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.