Venus; ಶುಕ್ರನಲ್ಲಿದೆ ಆಮ್ಲಜನಕ…: ಹೊಸ ಯೋಜನೆಗಳಿಗೆ ನಾಂದಿ ಹಾಡಿದ ವಿಜ್ಞಾನಿಗಳ ಆವಿಷ್ಕಾರ
Team Udayavani, Nov 9, 2023, 12:53 PM IST
ವಾಷಿಂಗ್ಟನ್: ಭೂಮಿಗೆ ಸಮೀಪವಿರುವ ಶುಕ್ರ ಗ್ರಹದ ಬಗ್ಗೆ ಸಂಶೋಧನೆ ನಡೆಸಲು ವಿಜ್ಞಾನಿಗಳು ಸದಾ ಕಾತರರಾಗಿರುತ್ತಾರೆ. ಭೂಮಿಯ ಅವಳಿಯಂತಿರುವ ನಿಗೂಢ ಅಂಶಗಳನ್ನು ತನ್ನ ಗರ್ಭದೊಳಗೆ ಇರಿಸಿರುವ ಶುಕ್ರನ ಬಗ್ಗೆ ಇದೀಗ ವಿಜ್ಞಾನಿಗಳು ಹೊಸ ಅಂಶವೊಂದನ್ನು ಪತ್ತೆ ಮಾಡಿದ್ದಾರೆ. ಅದು ಶುಕ್ರನಲ್ಲಿ ಆಮ್ಲಜನಕ ಇರುವಿಕೆಯ ಪತ್ತೆ.
ವಿಜ್ಞಾನಿಗಳು ಶುಕ್ರ ಗ್ರಹದಲ್ಲಿ ಪರಮಾಣು ಆಮ್ಲಜನಕ ಇರುವುದನ್ನು ಪತ್ತೆ ಮಾಡಿದ್ದಾರೆ. ಸೋಫಿಯಾ ವಾಯುಗಾಮಿ ವೀಕ್ಷಣಾಲಯದಲ್ಲಿ ಉಪಕರಣವನ್ನು ಬಳಸಿಕೊಂಡು ಆಮ್ಲಜನಕ ಪತ್ತೆಹಚ್ಚುವಿಕೆಯನ್ನು ಮಾಡಲಾಯಿತು.
ನಾಸಾ ಮತ್ತು ಜರ್ಮನ್ ಏರೋಸ್ಪೇಸ್ ಸೆಂಟರ್ ನ ಜಂಟಿ ಆವಿಷ್ಕಾರವು ಶುಕ್ರದ ವಾತಾವರಣದ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ಹೊಸ ಮಾರ್ಗಗಳನ್ನು ತೆರೆದಿದೆ.
ಇದನ್ನೂ ಓದಿ:Deepfake: ರಶ್ಮಿಕಾ ಡೀಪ್ ಫೇಕ್ ವಿಡಿಯೋ ಬಗ್ಗೆ ಆಪ್ತ ಗೆಳೆಯ ದೇವರಕೊಂಡ ಹೇಳಿದ್ದೇನು?
ಶುಕ್ರನಲ್ಲಿ ಭೂಮಿಯಲ್ಲಿ ಇರುವಂತೆ ಆಮ್ಲಜನಕದ ಪ್ರಮಾಣವಿಲ್ಲ. ಭೂಮಿಯಲ್ಲಿ ಶೇ.21ರಷ್ಟು ಆಮ್ಲಜನಕವಿದೆ. ಆದರೆ ಶುಕ್ರನ ದಟ್ಟವಾದ ಮತ್ತು ಹಾನಿಕಾರಕ ವಾತಾವರಣವು ಶೇ.96.5ರಷ್ಟು ಕಾರ್ಬನ್ ಡೈ ಆಕ್ಸೈಡ್ ನಿಂದ ತುಂಬಿ ಹೋಗಿದೆ. ಅಲ್ಲದೆ ಅಲ್ಪ ಪ್ರಮಾಣದ ನೈಟ್ರೋಜನ್ ಮತ್ತು ಇತರ ಅನಿಲಗಳಿವೆ. ಆಮ್ಲಜನಕವು ಅತ್ಯಲ್ಪ ಪ್ರಮಾಣದಲ್ಲಿದ್ದು, ಇಲ್ಲವೇ ಎನ್ನಬಹುದಾದ ಸ್ಥಿತಿಯಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಶುಕ್ರನಲ್ಲಿ ಪತ್ತೆಯಾದ ಪರಮಾಣು ಆಮ್ಲಜನಕವು ಒಂದೇ ಆಮ್ಲಜನಕ ಪರಮಾಣುವನ್ನು ಒಳಗೊಂಡಿರುತ್ತದೆ. ಇದು ಆಣ್ವಿಕ ಆಮ್ಲಜನಕದಿಂದ (molecular oxygen) ಭಿನ್ನವಾಗಿದೆ. ಆಣ್ವಿಕ ಆಮ್ಲಜನಕವು ಎರಡು ಆಮ್ಲಜನಕ ಪರಮಾಣುಗಳನ್ನು ಒಳಗೊಂಡಿರುತ್ತದೆ ಮತ್ತು ಉಸಿರಾಟ ಯೋಗ್ಯ.
ಸಂಶೋಧಕರು ಶುಕ್ರನ ಸೂರ್ಯನಿಗೆ ಮುಖಮಾಡುವ ಬದಿಯಲ್ಲಿ ಆಮ್ಲಜನಕವನ್ನು ಪತ್ತೆಹಚ್ಚಿದ್ದಾರೆ. ಸೂರ್ಯನಿಂದ ದೂರಕ್ಕೆ ಎದುರಾಗಿರುವ ಬದಿಯಲ್ಲಿ ಅದು ಉತ್ಪತ್ತಿಯಾಗುತ್ತದೆ ಎಂದು ತಿಳಿದುಬಂದಿದೆ.
“ಶುಕ್ರನ ವಾತಾವರಣವು ಅತ್ಯಂತ ದಟ್ಟವಾಗಿದೆ. ಅದರ ಸಂಯೋಜನೆಯೂ ಭೂಮಿಗಿಂತ ತುಂಬಾ ಭಿನ್ನವಾಗಿದೆ” ಎಂದು ಜರ್ಮನ್ ಏರೋಸ್ಪೇಸ್ ಸೆಂಟರ್ ಅಧ್ಯಯನದ ಪ್ರಮುಖ ಲೇಖಕ ಮತ್ತು ಭೌತಶಾಸ್ತ್ರಜ್ಞ ಹೈಂಜ್-ವಿಲ್ಹೆಲ್ಮ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.