Mission Gram Panchayat 500 ಯೋಜನೆ ರಾಜ್ಯಾದ್ಯಂತ ವಿಸ್ತರಣೆ : ಡಾ.ಜಿ.ಪರಮೇಶ್ವರ್
ಗುಳೆ ತಡೆಯಲು ಮಿಷನ್ ಗ್ರಾಪಂ ಸಹಕಾರಿ... ಯಡಿಯೂರಪ್ಪ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿದೆ
Team Udayavani, Nov 9, 2023, 9:21 PM IST
ಕೊರಟಗೆರೆ: ಬರಗಾಲದಿಂದ ರೈತಾಪಿವರ್ಗ ಮತ್ತು ಬಡಜನತೆ ಗುಳೆ ಹೋಗದಂತೆ ತಡೆಯಲು ತುಮಕೂರು ಜಿಲ್ಲೆಯಲ್ಲಿ ಮಿಷನ್ ಗ್ರಾಪಂ-500 ನರೇಗಾ ಆಸರೆ ಯೋಜನೆ ಜಾರಿಗೆ ತರಲು ರೂಪುರೇಷೆ ಸಿದ್ದವಾಗಿದೆ. ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲೂ ಗ್ರಾಪಂ-500 ಯೋಜನೆ ವಿಸ್ತರಣೆಗೆ ಸರಕಾರದ ಜತೆ ಮಾತುಕತೆ ನಡೆಸಲಾಗಿದೆ. ಗುಳೆ ತಡೆಯಲು ಈ ಯೋಜನೆ ರೈತರಿಗೆ ಸಹಕಾರಿ ಆಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಯಲದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಕೊರಟಗೆರೆ ತಾಲೂಕು ಆಡಳಿತದ ವತಿಯಿಂದ ಗೃಹಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಬರ ಪರಿಸ್ಥಿತಿ ಮತ್ತು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಪಂ-500 ಯೋಜನೆಯಡಿ ನರೇಗಾ ಮತ್ತು ಸರಕಾರ ಅನುಧಾನ ಲಭ್ಯ ಇರಲಿದೆ. ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರ ಕೌಪೌಂಡು, ಶೌಚಾಲಯ, ಕೊಠಡಿ, ಆಟದ ಮೈದಾನಕ್ಕೆ ಪ್ರಮುಖ ಪ್ರಾಮುಖ್ಯತೆ ನೀಡಲಾಗಿದೆ. ಉಳಿದಂತೆ ಇತರೇ ಕಾಮಗಾರಿಗಳಿಗೆ ಆಧ್ಯತೆ ನೀಡಲು ಸೂಚಿಸಿದ್ದೇನೆ. ರೈತಾಪಿವರ್ಗ ತಮ್ಮ ಊರನ್ನು ಬಿಟ್ಟು ಗುಳೆ ಹೋಗಬಾದ್ರು. ನರೇಗಾ ಯೋಜನೆ ಮತ್ತು ಸರಕಾರದ ಸೌಲಭ್ಯ ನೀಡಲು ಸರಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.
ಬರಗಾಲದಿಂದ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 37 ಸಾವಿರ ಕೋಟಿಗೂ ಅಧಿಕ ಬೆಳೆನಷ್ಟ ಆಗಿದೆ. ಕೇಂದ್ರ ಸರಕಾರಕ್ಕೆ17 ಸಾವಿರ ಕೋಟಿ ನೀಡುವಂತೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರಕಾರಕ್ಕೆ ಇಲ್ಲಿಯವರ್ಗೆ ನಯಪೈಸೆಯು ಬಿಡುಗಡೆ ಮಾಡಿಲ್ಲ. ಪ್ರಧಾನಿ ಮೋದಿಯವ್ರು ತತ್ ಕ್ಷಣ ಬರಗಾಲದ ಅನುಧಾನ ಬಿಡುಗಡೆ ಮಾಡಿ ರೈತರ ಪರವಾಗಿ ನಿಲ್ಲಬೇಕಿದೆ. ನಮ್ಮ ರಾಜ್ಯದ ವಿರೋದ ಪಕ್ಷದ ನಾಯಕರು ಸುಮ್ಮನೆ ಟೀಕೆ ಮಾಡುವುದನ್ನ ಬಿಟ್ಟು ಪ್ರಧಾನಿಯವ್ರ ಮೇಲೆ ಒತ್ತಡ ಹಾಕಬೇಕಿದೆ ಎಂದು ಆಗ್ರಹ ಮಾಡಿದರು.
2022 ರಲ್ಲಿ ಅತಿವೃಷ್ಟಿಯಿಂದ ಬೆಳೆವಿಮೆ ಹಣ ಸಮಯಕ್ಕೆ ಬರದಿರುವ ಪರಿಣಾಮ ೨೦೨೩ರಲ್ಲಿ ಬೆಳೆವಿಮೆ ಕಟ್ಟಲು ರೈತರು ಹಿಂದೇಟು ಹಾಕಿದ್ದಾರೆ. ತುಮಕುರು ಜಿಲ್ಲಾಡಳಿತ ಜೊತೆ ಸಭೆ ಕರೆದು ಬೆಳೆವಿಮೆ ಅಧಿಕಾರಿಗಳಿಗೆ ತಾಕೀತು ಮಾಡ್ತೀನಿ. ಕುಡಿಯುವ ನೀರಿನ ನಿರ್ವಹಣೆ ಮತ್ತು ಮೇವಿನ ಪೂರೈಕೆಯ ಬಗ್ಗೆ ತುರ್ತುಕ್ರಮಕ್ಕೆ ಈಗಾಗಲೇ 15 ಕೋಟಿ ಅನುಧಾನ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಜಂಪೇನಹಳ್ಳಿ ಕೆರೆಯ ಒತ್ತುದಾರರಿಗೆ ನೊಟೀಸ್ ಜಾರಿಯಾಗಿದೆ. ತುಮಕೂರು ಜಿಲ್ಲೆಯ ಕೆರೆಗಳ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿಗೆ ಸೂಚಿಸಲಾಗಿದೆ ಎಂದರು.
ರಾಜ್ಯ ಸರಕಾರ ತುಮಕೂರು ಜಿಲ್ಲೆಯ 10 ತಾಲೂಕನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಿವೆ. ಬರಗಾಲದ ತುರ್ತು ಕೆಲಸ ಮತ್ತು ನಿರ್ವಹಣೆಯ ಬಗ್ಗೆ ತುಮಕೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನತೆಯೇ ಬಿಜೆಪಿ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ ಅಲ್ಲವೇ. ಕಿಯೋನಿಕ್ಸ್ ವಿಚಾರ ಸೇರಿದಂತೆ ಎಲ್ಲಾ ತನಿಖೆಯನ್ನ ನಮ್ಮ ಸರಕಾರ ಮಾಡಿಸುತ್ತದೆ ಎಂದು ಹೇಳಿದರು.
ಜನಪರ ಆಡಳಿತ ನೀಡುವುದೇ ನಮ್ಮ ಸರಕಾರದ ಮುಖ್ಯ ಉದ್ದೇಶ. 5 ಗ್ಯಾರಂಟಿ ಜನಪರ ಕಾರ್ಯಕ್ರಮ ಅನುಷ್ಟಾನ ಆಗುತ್ತೀವೆ. ನಮ್ಮ ಜನರಿಂದ ಸರಕಾರಕ್ಕೆ ಯಾವುದೇ ದೂರು ಬಂದಿಲ್ಲ. ವಿರೋಧ ಪಕ್ಷದ ನಾಯಕರಿಂದ ಮಾತ್ರ ಟೀಕೆಗಳು ಬರ್ತಿವೆ ಅಷ್ಟೆ. ನಾವು ಜನರ ಪರವಾಗಿ ಇದ್ದೇವೆ ಜನರಿಗಾಗಿ ಕೆಲಸ ಮಾಡ್ತೇವೆ. ಪ್ರಣಾಳಿಕೆಯಲ್ಲಿ ನಾವು ಜನರಿಗೆ ನೀಡಿದ ೫೦೦ಭರವಸೆಯಲ್ಲಿ ಈಗಾಗಲೇ 100 ಕ್ಕೂ ಅಧಿಕ ಅನುಷ್ಠಾನ ಆಗಿವೆ. 5 ವರ್ಷದೊಳಗೆ 500 ಭರವಸೆ ಈಡೇರಿಕೆ ಮಾಡುತ್ತೇವೆ ಎಂದರು.
ಮಾಜಿ ಸಿಎಂಗೆ ಗೃಹಸಚಿವ ತಿರುಗೇಟು
ಅಕ್ಕಿರಾಂಪುರ ಗ್ರಾಪಂಯಲ್ಲಿ ಪಲಾನುಭವಿಗೆ ನೀಡಿದ ಚೆಕ್‌ಬೌನ್ಸ್ ಆಗಿಲ್ಲ. ಗ್ರಾಪಂ ಅಧಿಕಾರಿಯ ನಿರ್ಲಕ್ಷದಿಂದ ಹಣ ನೀಡುವುದು ವಿಳಂಬ ಆಗಿದೆ ಅಷ್ಟೆ. ಮಾಜಿ ಸಿಎಂ ಯಡಿಯೂರಪ್ಪ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಒಂದು ಪ್ರಕರಣಕ್ಕೆ ದೊಡ್ಡದಾಗಿ ಬಿಂಬಿಸಿ ಹೇಳಿದ್ದಾರೆ ಅಷ್ಟೆ. ಗ್ರಾಪಂಯ ಹಳೆಯ ಚೆಕ್ ವಿಚಾರಕ್ಕೆ ರಾಜ್ಯ ಸರಕಾರ ಹಣ ನೀಡುತ್ತಿಲ್ಲ ಎಂಬ ಆರೋಪ ಎಷ್ಟು ಸತ್ಯ ಹೇಳಿ ನೊಡೋಣ ಎಂದು ಮಾಜಿ ಸಿಎಂ ಯಡಿಯೂರಪ್ಪಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಿರುಗೇಟು ನೀಡಿದರು.
ಸಭೆಯಲ್ಲಿ ತುಮಕೂರು ಜಿಲ್ಲಾಧೀಕಾರಿ ಶ್ರೀನಿವಾಸ್, ಜಿಪಂ ಸಿಇಓ ಪ್ರಭು, ಪೊಲೀಸ್ ವರೀಷ್ಟಾಧಿಕಾರಿ ಅಶೋಕ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ, ತಾಪಂ ಇಓ ದೊಡ್ಡಸಿದ್ದಯ್ಯ, ಪಪಂ ಮುಖ್ಯಾಧಿಕಾರಿ ಭಾಗ್ಯಮ್ಮ, ಕೃಷಿ ಇಲಾಖೆಯ ನಾಗರಾಜು, ಜಿಪಂ ಎಇಇ ರವಿಕುಮಾರ್, ತೋಟಗಾರಿಕೆ ನಾಗರಾಜು, ಅರಣ್ಯ ಇಲಾಖೆಯ ರವಿಕುಮಾರ್, ಸಾಮಾಜಿಕ ವಲಯ ಶಿಲ್ಪಾ, ಸಿಡಿಪಿಓ ಅಂಬಿಕಾ, ಸಿಪಿಐ ಅನಿಲ್, ಪಿಎಸೈ ಚೇತನ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Tabla Maestro; ಉಸ್ತಾದ್ ಜಾಕೀರ್ ಹುಸೇನ್ ದೈವೀ ಪುರುಷ
Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ
Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್ ಜೋಶಿ
Theft Case: ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ 50 ಲಕ್ಷ ಮೌಲ್ಯದ ಚಿನ್ನ ಕಳವು
Bengaluru: ಮದ್ಯಪಾನ, ಅತಿ ವೇಗದ ಚಾಲನೆ: 689 ಕೇಸ್, 1.33 ಲಕ್ಷ ರೂ. ದಂಡ
Bengaluru: ಪತ್ನಿ ಮೇಲಿನ ಕೋಪಕ್ಕೆ 4.5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ
Crime: ರೌಡಿಶೀಟರ್ ಕೊಲೆ ಯತ್ನ; ಆರೋಪಿಗೆ ಗುಂಡೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.