Lok Sabha: ಜಾತ್ಯತೀತ ಶಕ್ತಿ ಮತ್ತೆ ಅಧಿಕಾರಕ್ಕೇರಬೇಕಿದೆ- ಸಿಎಂ ಸಿದ್ದರಾಮಯ್ಯ
ವಿಧಾನಸಭೆ ಮಾದರಿಯಲ್ಲಿ ಲೋಕಸಭೆ ಚುನಾವಣೆಗೂ ಹೋರಾಟ ಅಗತ್ಯ
Team Udayavani, Nov 9, 2023, 11:57 PM IST
ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ನಡೆಸಿದ ಹೋರಾಟದ ಮಾದರಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಸುವ ಅಗತ್ಯ ಇದೆ. ಆ ಮೂಲಕ ದೇಶದಲ್ಲಿ ಜಾತ್ಯತೀತ ಶಕ್ತಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಸೇವಾದಳ ದಂತಹ ಸಂಘಟನೆಗಳ ಪಾತ್ರ ದೊಡ್ಡದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಶತಮಾನೋ ತ್ಸವ ಮತ್ತು ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದ್ವೇಷದ ಬೀಜ ಬಿತ್ತುವ ಕಡೆಗಳಲ್ಲಿ ಕಾಂಗ್ರೆಸ್, ಪ್ರೀತಿಯ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ ಫಲವಾಗಿ ಇಂದು ಜಾತ್ಯತೀತ ಶಕ್ತಿ ಯಾದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಹೋರಾಟ ಬರುವ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಬೇಕು. ಆ ಮೂಲಕ ದೇಶಾದ್ಯಂತ ಜಾತ್ಯತೀತ ಬೀಜ ಬಿತ್ತಬೇಕು. ಕೋಮುಶಕ್ತಿಗಳಿಗೆ ಸಿಂಹಸ್ವಪ್ನ ಆಗಬೇಕು ಎಂದು ಹೇಳಿದರು.
ಅಧಿಕಾರಕ್ಕೆ ಬಂದ ಅಲ್ಪಾವಧಿ ಯಲ್ಲೇ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಡೇರಿಸಿದ್ದೇವೆ. ಬಡವರ ಕೈಯಲ್ಲಿ ಹಣ ಹರಿಯುವಂತೆ ಮಾಡಿದ್ದೇವೆ. 87 ಕೋಟಿ ಮಹಿಳೆಯರು ಶಕ್ತಿ ಯೋಜನೆ ಅಡಿ ಲಾಭ ಪಡೆದಿದ್ದಾರೆ. 1.07 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರೂ. ನೀಡಲಾಗುತ್ತಿದೆ. 2024ರ ಜನವರಿಗೆ ಉಳಿದ ಯುವನಿಧಿ ಕೂಡ ಜಾರಿಗೆ ಬರಲಿದೆ. ಜನರಿಗೆ ಇದನ್ನು ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಪರಿಣಾಮ ಕಾರಿಯಾಗಿ ಮಾಡಬೇಕು ಎಂದರು.
ಸೇವಾದಳವು ಕಾಂಗ್ರೆಸ್‌ನ ಆಧಾರ
ಸ್ತಂಭ ಎಂದು ಬಣ್ಣಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಹರ್ಡೀಕರ್ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ನಲ್ಲಿ ಅನೇಕರ ಬಲಿದಾನ ಗಳಾಗಿವೆ. ಬಿಜೆಪಿಯು ಸ್ವಾತಂತ್ರ್ಯಕ್ಕಾಗಿ ಹೋರಾಡಲೇ ಇಲ್ಲ. ಆದರೂ ಇಂದು ದೇಶ ಆಳುತ್ತಿದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ವಿವಿಧತೆಯಲ್ಲಿ ಏಕತೆಯನ್ನು ಕಾಣುವವರು. ಸಂವಿಧಾನದ ಮೂಲ ಆಶಯವೂ ಇದೇ ಆಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಜಾತ್ಯತೀತ ಶಕ್ತಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಬಿ.ಎನ್. ಚಂದ್ರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಲಾಲ್‌ಜಿ ದೇಸಾಯಿ, ರಾಜ್ಯ ಘಟಕದ ಅಧ್ಯಕ್ಷ ಎಂ. ರಾಮಚಂದ್ರ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.
ತಪ್ಪುಗಳಿದ್ದರೆ ಹೇಳಿ, ತಿದ್ದಿಕೊಳ್ಳುತ್ತೇವೆ: ಡಿಕೆಶಿ
ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಸೇವಾದಳ ಸೇರಿ ಪಕ್ಷದ ಪ್ರತಿ ಕಾರ್ಯಕರ್ತನ ಶ್ರಮವಿದೆ. ಆಡಳಿತದಲ್ಲಿ ನಮ್ಮದೇ ಯಾವುದಾದರೂ ಲೋಪದೋಷಗಳು, ತಪ್ಪುಗಳು ಕಂಡುಬಂದರೂ ತಾವು (ಸೇವಾದಳದ ಕಾರ್ಯಕರ್ತರು) ನಮಗೆ ಸಲಹೆ ನೀಡಬಹುದು. ಮುಕ್ತವಾಗಿ ಸ್ವೀಕರಿಸಲಾಗುವುದು. ಅಷ್ಟೊಂದು ಅಧಿಕಾರ ಸೇವಾದಳಕ್ಕೆ ನೀಡಲಾಗಿದೆ ಎಂದರು. ಜನರ ಬದುಕಿನಲ್ಲಿ ಬದಲಾವಣೆ ತರಲು ಪಣತೊಟ್ಟು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸುತ್ತಿ ದ್ದೇವೆ. ಹತಾಶೆಗೊಂಡ ಕೆಲವರು ಇದನ್ನು ಕೆಡಿಸಲು ಏನೇನೋ ಮಾಡು ತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದೇನೇ ಇರಲಿ, ಉತ್ತಮ ಆಡಳಿತ ನೀಡುವುದು ನಮ್ಮ ಗುರಿ ಆಗಿರಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.