150 “ಮತ್ಸ್ಯವಾಹಿನಿ” ವಿತರಣೆ- ಅರ್ಹ ಫಲಾನುಭವಿಗಳಿಗೆ ಮತ್ಸ್ಯವಾಹಿನಿ ವಿತರಣೆ
ನ.21ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶ್ವ ಮೀನುಗಾರರ ದಿನಾಚರಣೆ
Team Udayavani, Nov 10, 2023, 12:06 AM IST
ಬೆಂಗಳೂರು: ವಿಶ್ವ ಮೀನುಗಾರರ ದಿನಾಚರಣೆ ಅಂಗವಾಗಿ ನ.21ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಅಂದು ಅರ್ಹ ಮೀನು ಮಾರಾಟಗಾರರಿಗೆ 150 ಮತ್ಸ್ಯವಾಹಿನಿ ವಿತರಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದರು.
ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿ ಇಲಾಖಾ ವಿಷಯಗಳ ಕುರಿತು ಗುರುವಾರ ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಈ ವಿಷಯ ತಿಳಿಸಿದರು. ಮಂಗಳವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಆಸಕ್ತ ಹಾಗೂ ಅರ್ಹ ಫಲಾನುಭವಿಗಳಿಗೆ ಮತ್ಸéವಾಹಿನಿ ನೀಡಲು ನಿರ್ಧರಿಸಿದ್ದು, ಒಟ್ಟಾರೆ 300 ವಾಹನಗಳನ್ನು ವಿತರಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ ಬೆಂಗಳೂರಿನ 150 ಮಂದಿಗೆ ಮತ್ಸ್ಯವಾಹಿನಿಯನ್ನು ನೀಡಲಾಗುತ್ತದೆ. ಎರಡನೇ ಹಂತದಲ್ಲಿ ರಾಜ್ಯದ ಇತರ ಜಿಲ್ಲೆಗಳ 150 ಆಸಕ್ತರಿಗೆ ನೀಡಲಾಗುವುದು. ಹಂತಹಂತವಾಗಿ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಲಕ್ಷ್ಮೀ ಹೆಬ್ಟಾಳ್ಕರ್, ದಿನೇಶ್ ಗುಂಡೂರಾವ್, ಶಾಸಕರಾದ ಶಿವರಾಂ ಹೆಬ್ಟಾರ್, ದಿನಕರ ಶೆಟ್ಟಿ, ಉಮಾನಾಥ ಕೋಟ್ಯಾನ್, ಗುರುರಾಜ ಗಂಟಿಹೊಳೆ,ಯಶಪಾಲ್ ಸುವರ್ಣ, ವೇದವ್ಯಾಸ ಕಾಮತ್, ಸತೀಶ್ ಸೈಲ್, ಹರೀಶ್ ಪೂಂಜ, ಮೇಲ್ಮನೆ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಸಿಂಹ ನಾಯಕ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಸಹಿತ ಹಿರಿಯ ಅಧಿಕಾರಿಗಳು ಇದ್ದರು.
ಮತ್ಸéವಾಹಿನಿ ಪಡೆಯುವುದು ಹೇಗೆ?
ಪ್ರತಿ ವಾಹನಕ್ಕೆ 8 ಲಕ್ಷ ರೂ.ವರೆಗೆ ಖರ್ಚು ಬರಲಿದ್ದು, ಇದನ್ನು ಪಡೆಯಲು ಮೀನುಗಾರಿಕೆ ಅಭಿವೃದ್ಧಿ ನಿಗಮದಲ್ಲಿ 200 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಜತೆಗೆ ಆಧಾರ್, ಪಾನ್ ಹಾಗೂ ಪಡಿತರ ಚೀಟಿಯ ಪ್ರತಿಯನ್ನು ಸಲ್ಲಿಸಬೇಕು. ಸ್ವಸಹಾಯ ಸಂಘ, ಮೀನು ಉತ್ಪಾದಕರ ಸಂಸ್ಥೆ, ನಿಗಮದ ಅಸ್ತಿತ್ವದಲ್ಲಿರುವ ಏಜೆನ್ಸಿ ಪಡೆದವರು, ನಿರುದ್ಯೋಗಿಗಳು, ಮೀನುಗಾರಿಕೆ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಬಳಿಕ ಸಾಮಾನ್ಯ ವರ್ಗದವರು 2 ಲಕ್ಷ ರೂ. ಹಾಗೂ ಎಸ್‌ಸಿ-ಎಸ್‌ಟಿ ಫಲಾನುಭವಿಗಳು 1.50 ಲಕ್ಷ ರೂ. ಭದ್ರತಾ ಠೇವಣಿ ಇಡಬೇಕು, ಮಾಸಿಕ 3 ಸಾವಿರ ರೂ. ಪರವಾನಿಗೆ ಶುಲ್ಕ ಪಾವತಿಸಬೇಕು. ವಾಹನ ಪರವಾನಿಗೆ ಇರುವವರಿಗೆ ಮಾತ್ರ ತ್ರಿಚಕ್ರದ ವಿದ್ಯುತ್ ಚಾಲಿತ ವಾಹನ ಕೊಡಲಾಗುತ್ತದೆ.
ಭದ್ರತಾ ಠೇವಣಿ ಮರುಪಾವತಿ
ಹಸಿ ಮೀನುಗಳನ್ನು ತಾಜಾ ಆಗಿಡಲು ಅಗತ್ಯ ವ್ಯವಸ್ಥೆ ಈ ವಾಹನದಲ್ಲಿ ಇರಲಿದೆ. ಶೀತಲೀಕರಿಸಲು ಅಗತ್ಯವಾದ ಮಂಜಿನಗಡ್ಡೆಯ ಬಾಕ್ಸ್, ಮೀನಿನ ಉಪ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಲು ಬೇಕಾದ ಪ್ರತ್ಯೇಕ ವ್ಯವಸ್ಥೆಯೂ ಇರಲಿವೆ. ಎರಡು ವರ್ಷಗಳ ಕಾಲ ನಿಗಮದಿಂದಲೇ ಈ ವಾಹನಗಳ ನಿರ್ವಹಣೆಯನ್ನೂ ಮಾಡಲಾಗುತ್ತದೆ. ಫಲಾನುಭವಿಗಳು ಮಧ್ಯದಲ್ಲೇ ಇದನ್ನು ಹಿಂದಿರುಗಿಸಿದರೆ, ಆರಂಭದಲ್ಲಿ ಅವರು ಇಟ್ಟಿದ್ದ ಭದ್ರತಾ ಠೇವಣಿಯನ್ನು ವಾಪಸ್ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.