Recipe ಮನೆಯಲ್ಲೇ ಮಾಡಿ ಎಲ್ಲರ ಫೇವರಿಟ್ ಪಾವ್ ಭಾಜಿ.. ಮಾಡೋದೂ ಸುಲಭ.. ತಿನ್ನಲೂ ಟೇಸ್ಟಿ
ಈಗ ಪಾವ್ ಭಾಜಿ ಎಲ್ಲರ ಮೆಚ್ಚಿನ ಆಹಾರವಾಗಿದೆ
ಶ್ರೀರಾಮ್ ನಾಯಕ್, Nov 10, 2023, 5:51 PM IST
ಪಾವ್ ಭಾಜಿ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯತೆಯನ್ನು ಪಡೆದ ಖಾದ್ಯಗಳಲ್ಲಿ ಒಂದಾಗಿದೆ ಇದರ ಹೆಸರು ಕೇಳಿದಾಗ ನೆನಪಿಗೆ ಬರುವುದು ಮಹಾರಾಷ್ಟ್ರ. ಯಾಕೆಂದರೆ ಈ ಖಾದ್ಯ ಹುಟ್ಟಿದ್ದು ಅಲ್ಲಿಯೇ. ಸುಮಾರು 1850ರ ದಶಕದಲ್ಲಿ ಈ ಖಾದ್ಯವು ಮುಂಬೈಯ ಗಿರಣಿ ಕಾರ್ಮಿಕರ ಭಕ್ಷ್ಯಕ್ಕಾಗಿ ಹುಟ್ಟಿಕೊಂಡಿತು. ಆದಾಗ್ಯೂ ಕಾಲಾನಂತರದಲ್ಲಿ ಈ ಖಾದ್ಯವು ರೆಸ್ಟೋರೆಂಟ್ ಗಳಲ್ಲಿ ತನ್ನ ದಾರಿಯನ್ನು ಕಂಡುಕೊಂಡಿತು ಹೀಗೆ ಅಂತಿಮವಾಗಿ ಇಡೀ ಭಾರತ ಹಾಗೂ ವಿದೇಶಕ್ಕೂ ಈ ಖಾದ್ಯ ಹರಡಿತು. ಈಗ ಪಾವ್ ಭಾಜಿ ಎಲ್ಲರ ಮೆಚ್ಚಿನ ಆಹಾರವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರನ್ನೂ ಸೆಳೆಯುತ್ತದೆ. ನೀವು ಸಹ ಪಾವ್ ಭಾಜಿ ರುಚಿಗೆ ಮನಸೋತಿದ್ದರೆ ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ನೋಡಿ…
ಬೇಕಾಗುವ ಸಾಮಗ್ರಿಗಳು
ಪಾವ್ ಬನ್- 6 ರಿಂದ 8, ಆಲೂಗಡ್ಡೆ-3, ಬಟಾಣಿ-100ಗ್ರಾಂ, ಕ್ಯಾಪ್ಸಿಕಮ್-2,ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು-ಸ್ವಲ್ಪ, ಬೆಣ್ಣೆ-ಅರ್ಧ ಕಪ್,ಪಾವ್ ಭಾಜಿ ಮಸಾಲ-4ಚಮಚ, ಮೆಣಸಿನ ಪುಡಿ-2ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ನಿಂಬೆ ರಸ-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
-ಮೊದಲಿಗೆ ಆಲೂಗಡ್ಡೆ ಮತ್ತು ಬಟಾಣಿಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
-ನಂತರ ಈರುಳ್ಳಿ, ಟೊಮೆಟೋ , ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಿ.
-ಒಂದು ಬಾಣಲೆಗೆ 2ಚಮಚ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ್ದ ಈರುಳ್ಳಿ, ಟೊಮೆಟೋ,ಕ್ಯಾಪ್ಸಿಕಮ್ ಅನ್ನು ಹಾಕಿ ಫ್ರೈ ಮಾಡಿಕೊಳ್ಳಿ.
-ತದನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪಾವ್ ಭಾಜಿ ಮಸಾಲ,ಮೆಣಸಿನ ಪುಡಿ,ಬೇಯಿಸಿದ ಆಲೂಗಡ್ಡೆ/ಬಟಾಣಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ(ಸ್ಮಾಶ್)ಸ್ವಲ್ಪ ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ 3 ರಿಂದ 5ನಿಮಿಷ ಬೇಯಲು ಬಿಡಿ.
-ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿಕರವಾದ ಭಾಜಿ ಸಿದ್ಧ.
-ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಮಧ್ಯ ಸೀಳಿದ ಪಾವ್ ಬನ್ ನ ಎರಡೂ ಬದಿ ಸ್ವಲ್ಪ ರೋಸ್ಟ್ ಮಾಡಿಕೊಳ್ಳಿ ನಂತರ ಭಾಜಿ ಜೊತೆ ಸರ್ವ್ ಮಾಡಿದರೆ ಸ್ವಾಧಿಷ್ಟಕರವಾದ ಪಾವ್ ಭಾಜಿ ಸವಿಯಲು ಸಿದ್ಧ.
-ಶ್ರೀರಾಮ್ ಜಿ. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.