Taiwan: ಭಾರತೀಯ ಉದ್ಯೋಗಿಗಳ ನೇಮಕಕ್ಕೆ ತೈವಾನ್ ಉತ್ಸುಕ
Team Udayavani, Nov 10, 2023, 9:35 PM IST
ತೈಪೆ: ಭಾರತೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಇಸ್ರೇಲ್ ಇತ್ತೀಚಿಗೆ ಘೋಷಿಸಿತು. ಇದರ ಬೆನ್ನಲ್ಲೇ ಇದೀಗ 1 ಲಕ್ಷ ಭಾರತೀಯ ಉದ್ಯೋಗಿಗಳನ್ನು ನೇಮಿಸುಕೊಳ್ಳುವುದಾಗಿ ತೈವಾನ್ ಘೋಷಿಸಿದೆ.
ಕೈಗಾರಿಕೆಗಳಲ್ಲಿ, ಕೃಷಿ ಜಮೀನುಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಭಾರತೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ತೈವನ್ ತಿಳಿಸಿದೆ. ಒಂದು ಕಡೆ ನೆರೆಯ ತೈವಾನ್ ತನಗೆ ಸೇರಿದ ಪ್ರದೇಶ ಎಂದು ಚೀನಾ ಸದಾ ಕ್ಯಾತೆ ತೆಗೆಯುತ್ತಿದೆ. ಚೀನಾದೊಂದಿಗೆ ತೈವಾನ್ ಉತ್ತಮ ಸಂಬಂಧ ಹೊಂದಿಲ್ಲ. ಹೀಗಾಗಿ, ಅದು ಭಾರತದ ಕಡೆಗೆ ನೋಡಲಾರಂಭಿಸಿದೆ.
ತಯಾರಿಕೆ, ಕೈಗಾರಿಕೆ, ನಿರ್ಮಾಣ ಯೋಜನೆಗಳು, ಕೃಷಿ ಕೆಲಸ, ಮನೆಗೆಲಸ ಹಾಗೂ ಮೀನುಗಾರಿಕೆ ವಲಯಗಳಲ್ಲಿ ಮಾನವ ಸಂಪನ್ಮೂಲ ಕೊರತೆಯನ್ನು ತೈವಾನ್ ಎದುರಿಸುತ್ತಿದೆ. ಆರೋಗ್ಯ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ಥಳೀಯ ನೌಕರರಿಗೆ ಸಮಾನವಾದ ವೇತನವನ್ನು ತೈವಾನ್ನಲ್ಲಿ ವಿದೇಶಿ ನೌಕರರಿಗೂ ನೀಡಲಾಗುತ್ತದೆ. ಪ್ರಸ್ತುತ ತೈವಾನ್ನಲ್ಲಿ ಕನಿಷ್ಠ ವೇತನ ಮಾಸಿಕ 26,400 ತೈವಾನ್ ಡಾಲರ್ ಇದೆ. ಇದು 68,300 ರೂ.ಗಳಿಗೆ ಸಮಾನ.
ಇನ್ನೊಂದೆಡೆ, ತೈವಾನ್ನಲ್ಲಿ ಹಿರಿಯ ವಯಸ್ಕರ ಸಂಖ್ಯೆ ಹೆಚ್ಚಿದ್ದು, 2025ರ ವೇಳೆಗೆ ಹಿರಿಯ ನಾಗರಿಕರೇ ಅಧಿಕವಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.