World Cup: ಇಂದು ಲೆಕ್ಕಾಚಾರದ ಪಂದ್ಯ- ಪಾಕಿಸ್ಥಾನಕ್ಕೆ ಬೇಕಿದೆ 287 ರನ್‌ ಗೆಲುವು!

 ಚೇಸಿಂಗ್‌ ಸವಾಲು ಎದುರಾದರೆ ಕೇವಲ 16 ಎಸೆತಗಳಲ್ಲೇ ಗೆಲ್ಲಬೇಕು!

Team Udayavani, Nov 10, 2023, 11:29 PM IST

pak cric

ಕೋಲ್ಕತಾ: ಪವಾಡದ ಹೊರತಾಗಿ ಬೇರೇನೇ ಸಂಭವಿಸಿದರೂ ಪಾಕಿಸ್ಥಾನಕ್ಕೆ ವಿಶ್ವಕಪ್‌ ಸೆಮಿ ಫೈನಲ್‌ ಪ್ರವೇಶ ಅಸಾಧ್ಯ ಎಂಬ ಸನ್ನಿವೇಶವೊಂದು ನಿರ್ಮಾ ಣವಾಗಿರುವುದು ಈ ವಿಶ್ವಕಪ್‌ ಪಂದ್ಯಾವಳಿಯ ಕೊನೆಯ ಹಂತದ ಕುತೂಹಲ. ಶನಿವಾರ “ಈಡನ್‌ ಗಾರ್ಡನ್ಸ್‌”ನಲ್ಲಿ ಬಾಬರ್‌ ಆಜಂ ಪಡೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದ್ದು, ಇಲ್ಲಿ ಗೆಲುವಿನ ಜತೆಗೆ ನ್ಯೂಜಿ ಲ್ಯಾಂಡ್‌ನ‌ ರನ್‌ರೇಟ್‌ ಮೀರಿಸುವ ಬಹು ದೊಡ್ಡ ಸವಾಲನ್ನು ಅದು ಎದುರಿಸಬೇಕಿದೆ.

ಸದ್ಯ ನ್ಯೂಜಿಲ್ಯಾಂಡ್‌ 0.743 ಹಾಗೂ ಪಾಕಿಸ್ಥಾನ 0.036 ರನ್‌ರೇಟ್‌ ಹೊಂದಿವೆ. 4ನೇ ಹಾಗೂ ಕೊನೆಯ ಸ್ಥಾನವನ್ನು ಈಗಾಗಲೇ ಕಳೆದೆರಡು ಬಾರಿಯ ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ ಗಟ್ಟಿಗೊಳಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪಾಕಿಸ್ಥಾನಕ್ಕೂ ಇಂಥದೊಂದು ಅವಕಾಶ ಒದಗಿ ಬರಬೇಕಾದರೆ ಎರಡು ಅಸಾಧ್ಯ ಹಾಗೂ ಕಠಿನ ಲೆಕ್ಕಾಚಾರಗಳಿವೆ. ರನ್‌ರೇಟ್‌ನಲ್ಲಿ ನ್ಯೂಜಿಲ್ಯಾಂಡನ್ನು ಮೀರಬೇಕಾದರೆ ಇಂಗ್ಲೆಂಡ್‌ ವಿರುದ್ಧ ಪಾಕಿಸ್ಥಾನ 287 ರನ್‌ ಅಂತರದ ಜಯಭೇರಿ ಮೊಳಗಿ ಸಬೇಕು. ಅಂದರೆ ಪಾಕ್‌ 300 ರನ್‌ ಗಳಿಸಿದರೆ ಇಂಗ್ಲೆಂಡನ್ನು 13 ರನ್ನಿಗೆ ನಿರ್ಬಂಧಿಸಬೇಕು! ಅಥವಾ ಇಂಗ್ಲೆಂಡ್‌ ನೀಡಿದ ಗುರಿಯನ್ನು 284 ಎಸೆತ ಬಾಕಿ ಇರುವಾಗಲೇ, ಅಂದರೆ ಕೇವಲ 16 ಎಸೆತಗಳಲ್ಲಿ (2.4 ಓವರ್‌) ಮುಟ್ಟಬೇಕು! ಇವೆಲ್ಲವನ್ನೂ ಅಸಾಧ್ಯ ಎಂದೇ ಭಾವಿಸಬೇಕಾಗುತ್ತದೆ.

ಇನ್ನೊಂದೆಡೆ ಇಂಗ್ಲೆಂಡ್‌ಗೂ ಇದು ನಿರ್ಣಾಯಕ ಪಂದ್ಯ. ಅದು ಈಗಾಗಲೇ ಕೂಟದಿಂದ ನಿರ್ಗಮಿ ಸಿರಬಹುದು, ಆದರೆ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಯಲ್ಲಿ ಆಡುವ ಅವಕಾಶ ಗಳಿಸಬೇಕಾದರೆ ವಿಶ್ವಕಪ್‌ನಲ್ಲಿ ಅಗ್ರ ಏಳರಲ್ಲಿ ಕಾಣಿಸಿಕೊಳ್ಳಬೇಕಾದುದು ಅನಿವಾರ್ಯ. ಸದ್ಯ ಅದು 7ನೇ ಸ್ಥಾನದಲ್ಲಿದ್ದರೂ ಈ ಸ್ಥಾನಕ್ಕೆ ಸಿಮೆಂಟ್‌ ಹಾಕುವ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್‌ಗೂ ಇಲ್ಲಿ ಗೆಲುವಿನ ಅಗತ್ಯವಿದೆ.

ವೀರೋಚಿತ ಗೆಲುವು…
ಪಾಕಿಸ್ಥಾನ ಈ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಕಳೆದೆ ರಡು ಪಂದ್ಯಗಳಲ್ಲಿ ಒಂದಿಷ್ಟು ಚೇತೋ ಹಾರಿ ಪ್ರದರ್ಶನ ನೀಡಿದ ಕಾರಣ ಕಿಂಚಿತ್‌ ಭರವಸೆ ಉಳಿಸಿಕೊಂಡಿದೆ, ಅಷ್ಟೇ.

ಬಾಂಗ್ಲಾದೇಶ ವಿರುದ್ಧ ಕೋಲ್ಕ ತಾದಲ್ಲೇ ಆಡಿದ ಪಂದ್ಯವನ್ನು ಪಾಕ್‌ 7 ವಿಕೆಟ್‌ಗಳಿಂದ ಗೆದ್ದರೆ, ಬೆಂಗಳೂ ರಿನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಡಿ-ಎಲ್‌ ನಿಯದಂತೆ ಗೆದ್ದು ಬಂದಿತು. ಆದರೆ ಉಳಿದ ತಂಡಗಳ ಯಶಸ್ಸು ಬಾಬರ್‌ ಪಡೆಯನ್ನು ನಿರ್ಗಮನದ ಬಾಗಿಲಿಗೆ ತಂದು ನಿಲ್ಲಿಸಿತು.

ಇಂಗ್ಲೆಂಡ್‌ಗೆ ಹೋಲಿಸಿದರೆ ಕೋಲ್ಕ ತಾದ ಸ್ಲೋ ಆ್ಯಂಡ್‌ ಸ್ಪಿನ್‌ ಫ್ರೆಂಡ್ಲಿ ಟ್ರ್ಯಾಕ್‌ನಲ್ಲಿ ಪಾಕಿಸ್ಥಾನ ಹೆಚ್ಚಿನ ಅನು ಭವ ಹೊಂದಿದೆ. ಆದರೆ ಇಂಗ್ಲೆಂಡ್‌ ವಿರುದ್ಧ ಪವಾಡಸದೃಶ ಪ್ರದರ್ಶನ ಸಾಧ್ಯವಿಲ್ಲ. ಒಂದು ವೀರೋ ಚಿತ ಗೆಲುವು ಪಾಕಿಸ್ಥಾನದ ನಿರ್ಗಮನ ವನ್ನು ಸಂತೃಪ್ತಗೊಳಿಸೀತು, ಅಷ್ಟೇ.

ಇಂಗ್ಲೆಂಡ್‌ಗೆ ಎರಡೇ ಜಯ
ಇಂಗ್ಲೆಂಡ್‌ ಈ ಕೂಟದಲ್ಲಿ ಸಾಧಿ ಸಿದ್ದು ಎರಡೇ ಗೆಲುವು. ಎರಡೂ ಸಾಮಾನ್ಯ ತಂಡಗಳ ವಿರುದ್ಧ ದಾಖಲಾದದ್ದು. ಮೊದಲ ಜಯ ಸಾಧಿಸಿದ್ದು ಬಾಂಗ್ಲಾದೇಶದ ವಿರುದ್ಧ. ಅನಂತರ ಸರಿಸುಮಾರು ಒಂದು ತಿಂಗಳ ಅವಧಿಯಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಗೆದ್ದು ಬಂದಿತು. ಪಾಕಿ ಸ್ಥಾನವನ್ನು ಮಣಿಸಿದರೆ ಗೆಲುವಿನ ಸಂಖ್ಯೆ ಮೂರಕ್ಕೇರಲಿದೆ, ಅಷ್ಟೇ. ಆಗ ಒಂದು “ದೊಡ್ಡ ತಂಡ’ವನ್ನಾದರೂ ಮಣಿಸಿದ ಹೆಗ್ಗಳಿಕೆ ಜಾಸ್‌ ಬಟ್ಲರ್‌ ಪಡೆಯದ್ದಾಗಲಿದೆ.

 

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.