Ayodhya: ಡಿ.15ರಂದು ತಲುಪಲಿದೆ ಅಮೃತಶಿಲೆಯ ಸಿಂಹಾಸನ- ಗರ್ಭಗುಡಿ ದ್ವಾರಕ್ಕೆ ಚಿನ್ನಲೇಪನ
Team Udayavani, Nov 11, 2023, 12:44 AM IST
ಲಕ್ನೋ: ಶ್ರೀರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜುಗೊಂಡಿರುವ ನಡುವೆಯೇ ಮಂದಿರದ ನಿರ್ಮಾಣ ಕಾರ್ಯಗಳೂ ಬಿರುಸಾಗಿ ನಡೆಯುತ್ತಿದ್ದು, ಇದೀಗ ದೇಗುಲದ ಗರ್ಭಗುಡಿಯ ಬಾಗಿಲುಗಳಿಗೆ ಚಿನ್ನಲೇಪಿಸುವ ಕಾರ್ಯ ಆರಂಭಗೊಂಡಿದೆ.
ಈ ಕುರಿತಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದ್ದು, ಗರ್ಭಗುಡಿಯ ಬಾಗಿಲುಗಳಿಗೆ ಚಿನ್ನ ಲೇಪಿಸಲಾಗುತ್ತಿದೆ. ಜೈ ಶ್ರೀರಾಮ್ ಘೋಷಣೆ ಮೂಲಕ ಬಾಗಿಲುಗಳನ್ನು ಎತ್ತಿ ನಿಲ್ಲಿಸಿ ಕಾರ್ಯಾರಂಭ ಮಾಡಲಾಗಿದೆ. ಈ ತಿಂಗಳಲ್ಲೇ ಲೇಪನ ಪೂರ್ಣಗೊಳ್ಳಲಿದೆ. ಪ್ರತೀ ಅಂತಸ್ತಿನಲ್ಲಿ 18 ಬಾಗಿಲುಗಳು ಇರಲಿದ್ದು, ಗರ್ಭಗುಡಿಯ ಬಾಗಿಲುಗಳು ಅತೀ ದೊಡ್ಡದಾಗಿವೆ. ರಾಮಲಲ್ಲಾನ ವಿಗ್ರಹವನ್ನು ಕೂರಿಸುವು ದಕ್ಕಾಗಿ ರಾಜಸ್ಥಾನದಲ್ಲಿ 8 ಅಡಿ ಎತ್ತರದ ಅಮೃತಶಿಲೆಯ ಸಿಂಹಾಸನವನ್ನು ಕೆತ್ತಲಾಗಿದೆ. ಅದಕ್ಕೂ ಚಿನ್ನ ಲೇಪಿಸಲಾಗುವುದು ಮತ್ತು ಸಿಂಹಾಸನ ಡಿ.15ರಂದು ಅಯೋಧ್ಯೆ ತಲುಪಲಿದೆ ಎಂದು ಟ್ರಸ್ಟ್ ಹೇಳಿದೆ.
ಯೋಗಿಗೆ ಆಮಂತ್ರಣ: ಜ.22ರಂದು ನಡೆಯಲಿರುವ ಮಂದಿರ ಉದ್ಘಾಟನೆಗೆ ಶುಕ್ರವಾರ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಆಮಂತ್ರಣ ನೀಡಲಾಗಿದೆ. ಈ ಬಗ್ಗೆ ಯೋಗಿ ಟ್ವೀಟ್ ಮಾಡಿದ್ದು, ಇದನ್ನು ಸ್ವೀಕರಿಸಿ ರುವುದು ನನ್ನ ಪುಣ್ಯ ಎಂದು ಹೇಳಿಕೊಂಡಿದ್ದಾರೆ.
ನೀವೂ ಹಣತೆ ಬೆಳಗಿಸಿ!
ಅಯೋಧ್ಯೆಯಲ್ಲಿ ಗುರುವಾರದಿಂದಲೇ ದೀಪೋ ತ್ಸವ ಆರಂಭವಾಗಿದ್ದು, ಈ ಬಾರಿ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲು ಉದ್ದೇಶಿಸ ಲಾಗಿದೆ. ಇದರೊಂದಿಗೆ ವರ್ಚುವಲ್ ದೀಪೋತ್ಸವ ಕ್ಕೂ ಅನುವು ಮಾಡಿಕೊಡಲಾಗಿದ್ದು, ಬೇರೆಡೆ ಇರುವ ರಾಮಭಕ್ತರು ವರ್ಚುವಲ್ ಆಗಿಯೇ ಅಯೋಧ್ಯೆಯ ಘಾಟ್‌ಗಳಲ್ಲಿ ದೀಪ ಬೆಳಗಿಸ ಬಹುದು. https://holyayodhya.com/ ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ನಮಗೆ ಬೇಕಾದ ಘಾಟ್ ಆಯ್ಕೆ ಮಾಡಿ ಬೇಕಾದ ಸ್ಥಳದಲ್ಲಿ ದೀಪ ಬೆಳಗಿಸಬಹುದು. ಅದಕ್ಕಾಗಿ ಒಂದು ದೀಪಕ್ಕೆ 51 ರೂ., 11 ದೀಪಗಳಿಗೆ 101 ರೂ, 51 ದೀಪಗಳಿಗೆ 1,100ರೂ. ನಿಗದಿಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.