Bangalore: ಗೂಬೆ ಮುಖದ ಮಾಸ್ಕ್ ಧರಿಸಿ ವಾಹನಗಳಿಗೆ ಹಾನಿ; ಕೇಸು ದಾಖಲು
Team Udayavani, Nov 11, 2023, 10:55 AM IST
ಬೆಂಗಳೂರು: ಮುಖಕ್ಕೆ ಗೂಬೆ ಮುಖದ ಮಾಸ್ಕ್ ಧರಿಸಿದ್ದ ಪುಂಡರ ಗುಂಪೊಂದು ರಸ್ತೆ ಬದಿ ನಿಲುಗಡೆ ಮಾಡಿದ್ದ 17 ವಾಹನಗಳಿಗೆ ಹಾನಿಗೊಳಿಸಿ ಪುಂಡಾಟ ಮೆರೆದಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲಗ್ಗೆರೆಯ ರಾಜೀವ್ ಗಾಂಧಿನಗರದಲ್ಲಿ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದೆ. ಪುಂಡರ ಅಟ್ಟಹಾಸಕ್ಕೆ 14 ಕಾರು, 3 ಆಟೋರಿಕ್ಷಾ ಸೇರಿ 17 ವಾಹನಗಳು ಜಖಂಗೊಂಡಿವೆ.
ಪುಂಡರ ಗುಂಪೊಂದು ಮಾರಕಾಸ್ತ್ರ ಹಿಡಿದು ರಾಜೀವ್ ಗಾಂಧಿ ನಗರಕ್ಕೆ ಬಂದಿದ್ದು, ಈ ವೇಳೆ ರಸ್ತೆಗೆ ಹೊಂದಿಕೊಂಡಂತೆ ಮನೆಗಳ ಬಳಿ ನಿಲುಗಡೆ ಮಾಡಿದ್ದ ಕಾರುಗಳು ಹಾಗೂ ಆಟೋ ರಿಕ್ಷಾಗಳ ಮೇಲೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಅದರಿಂದ ವಾಹನಗಳ ಗಾಜುಗಳು ಪುಡಿಯಾಗಿ ವಾಹನಗಳಿಗೆ ಹಾನಿಯಾಗಿದೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗಿದೆ.
ದುಷ್ಕರ್ಮಿಗಳು ಮುಖಕ್ಕೆ ಗೂಬೆ ಮುಖದ ಮಾಸ್ಕ್ ಧರಿಸಿಕೊಂಡು ಈ ಕೃತ್ಯ ಎಸೆಗಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಈ ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
Kinnigoli: ಶೌಚಾಲಯದ ಕಮೋಡ್‌ನಲ್ಲಿ ಮೊಬೈಲ್ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?
Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!
Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.