Vijayapura; ಶಾಸಕ ಯಶವಂತ್ರಾಯಗೌಡರ ಬೇಡಿಕೆ ಈಡೇರಿಕೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

Team Udayavani, Nov 11, 2023, 1:29 PM IST

Vijayapura; ಶಾಸಕ ಯಶವಂತ್ರಾಯಗೌಡರ ಬೇಡಿಕೆ ಈಡೇರಿಕೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

ವಿಜಯಪುರ: ಕ್ಷೇತ್ರದ ಕೊನೆ ಭಾಗಕ್ಕೆ ನೀರು ತಲುಪದಿರುವುದು, ಬರ ನಿರ್ವಹಣೆಯಲ್ಲಿ ವೈಫಲ್ಯ ಸೇರಿದಂತೆ ಸಚಿವರ ಆಡಳಿತದ ಬಗ್ಗೆ ಗುಡುಗಿದ್ದ ಕಾಂಗ್ರೆಸ್ ಇಂಡಿ ಶಾಸಕ ಯಶವಂತ್ರಾಯಗೌಡ ಅವರನ್ನು ಸಿಎಂ ಸಿದ್ದರಾಮಯ್ಯ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಸಕ ಯಶವಂತ್ರಾಯಗೌಡ, ಇಂಡಿ ಪ್ರತ್ಯೇಕ ಜಿಲ್ಲೆ ರಚನೆ, ಇಂಡಿ, ಸಿಂದಗಿ ತಾಲೂಕಗಳನ್ನು ಸಂವಿಧಾನದ 371 (ಜೆ) ಕಲಂ ವ್ಯಾಪ್ತಿಗೆ ಸೇರ್ಪಡಿಸಿ, ವಿಶೇಷ ಸೌಲಭ್ಯ ಕಲ್ಪಿಸುವುದು, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಕೊನೆ ಭಾಗಕ್ಕೆ ನೀರು ತಲುಪಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಸಿಎಂ ಸಕಾರಾತ್ಮಕ ಸ್ಪಂದಿಸಿದ್ಧಾಗಿ ಹೇಳಿದ್ದಾರೆ.

ಇಂಡಿ ವಿಧಾನಸಭೆ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿರುವ ನಾನು ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಕೊನೆ ಭಾಗಕ್ಕೆ ನೀರು ಹರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹಾಗೂ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಇದನ್ನು ಗಮನಿಸಿರುವ ಸಿಎಂ ಸಿದ್ಧರಾಮಯ್ಯ ಹಾಗು ಪಕ್ಷದ ಪ್ರಮುಖರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹರಿಸುವ ಭರವಸೆ ನೀಡಿದ್ದಾಗಿ ಹೇಳಿದ್ದಾರೆ.

ಇದಲ್ಲದೇ ನ.10 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆಂಗಳೂರಿನಲ್ಲಿ ನಿವಾಸದಲ್ಲಿ ಭೇಟಿಯಾಗಿ, ಇಂಡಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ವಿವರಿಸಿದಾಗ, ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಅಲ್ಲದೆ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಭರವಸೆ ನೀಡಿದ್ದಾಗಿ ವಿವರಿಸಿದ್ದಾಗಿ ಶಾಸಕ ಯಶವಂತ್ರಾಯಗೌಡ ವಿವರಿಸಿದ್ದಾರೆ.

ಇಂಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಇಂಡಿ ಶಾಖಾ ಕಾಲುವೆ, ಗುತಿ ಬಸವಣ್ಣ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿಸುವುದು, ಮುಳವಾಡ ಏತ ನೀರಾವರಿ ಯೊಜನೆ ಮೂಲಕ ತಡವಲಗಾ, ಅಥರ್ಗಾ, ಹಂಜಗಿ, ನಿಂಬಾಳ ಕೆರೆಗಳಿಗೆ ನೀರು ತುಂಬಿಸುವುದು. ಅಣಚಿ ಕೆರೆ ತುಂಬುವ ಯೊಜನೆಯಲ್ಲಿ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುವುದು, ಭುಯ್ಯಾರ ಕೆರೆ ನೀರು ತುಂಬುವ ಯೋಜನೆ ಸ್ಥಗಿತಗೊಂಡಿದ್ದು, ಆರಂಭಿಸುವ ಭರವಸೆ ನೀಡಿದ್ದಾರೆ.

ಇದಲ್ಲದೆ ಇಂಡಿ-ಚಡಚಣ ಭಾಗದ ರೈತರ ಮಹತ್ವಾಕಾಂಕ್ಷೆಯ ಹೋರ್ತಿ ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಕರೆದಿರುವ ಟೆಂಡರ್ ನಿಧಾನಗತಿಯಲ್ಲಿ ನಡೆದಿದೆ. 2-3ನೇ ಹಂತದ ಕಾಮಗಾರಿಗೆ ಸಮಗ್ರ ಯೋಜನಾ ವರದಿ ರೂಪಿಸಿ, ಕೆಬಿಜೆಎನ್‍ಎಲ್ ಮಂಡಳಿಯಲ್ಲಿ ತುರ್ತಾಗಿ ಒಪ್ಪಿಗೆ ಪಡೆಯಬೇಕು ಎಂಬ ಬೇಡಿಕೆಗೆ ಸಿಎಂ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

ಕ್ಷೇತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆಗೆ ಸೇರಿದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ತ್ವರಿಗೊಳಿಸಬೇಕು. ಹಂಜಗಿ, ಅರ್ಜನಾಳ, ಗೂಗಿಹಾಳ, ಲೋಣಿ ಕೆ.ಡಿ. ಕೆರೆಗಳಿಗೆ ನೀರು ತುಂಬಿಸಬೇಕು. ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಇಂಡಿ, ಸಿಂದಗಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ಭಿಮಾ ನದಿಗೆ ಉಜಿನಿ ಜಲಾಶಯದಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ವರ್ಷ ಭೀಕರ ಬರದ ಹಿನ್ನೆಲೆಯಲ್ಲಿ ಕೃಷಿ-ತೋಟಗಾರಿಕೆ ಬೆಳೆ ಹಾನಿಗೆ ಇನ್‍ಪುಟ್ ಸಬ್ಸಿಡಿ ಹಾಗೂ ಹಾನಿಯ ಪರಿಹಾರ ನೀಡಬೇಕು, ಜಲಧಾರೆ ಯೋಜನೆ ಕಾಮಗಾರಿ ತ್ವರಿತಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗೆ ಮುಖ್ಯಮಂತ್ರಿಗಳು ಸೈ ಎಂದಿದ್ದಾರೆ ಎಂದರು.

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ

Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ

Eshwar1

Caste Census: ಜಾತಿಗಣತಿ ವರದಿ ವಿಚಾರದಲ್ಲಿ ಸಿದ್ದರಾಮಯ್ಯ ಉತ್ತರಕುಮಾರ ರೀತಿ..: ಈಶ್ವರಪ್ಪ

2-vijayapura

Vijayapura: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕೇಸ್ ದಾಖಲು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.