Anantapura ಸರೋವರದಲ್ಲಿ ಮೊಸಳೆ ಪ್ರತ್ಯಕ್ಷ!: “ಬಬಿಯಾ’ ಅಗಲಿ ಒಂದೇ ವರ್ಷಕ್ಕೆ ಪವಾಡ!
ಮೊಸಳೆ ಕಂಡುಬಂದಿರುವುದನ್ನು ದೃಢಪಡಿಸಿದ ದೇಗುಲದ ಆಡಳಿತ ಮಂಡಳಿ
Team Udayavani, Nov 11, 2023, 9:15 PM IST
ಕುಂಬಳೆ: ಪುರಾತನ ಸರೋವರ ಕ್ಷೇತ್ರ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನದಲ್ಲಿ ಶತಮಾನಗಳಿಂದ ನೆಲೆಸಿದ್ದ ದೇವರ ಮೊಸಳೆ “ಬಬಿಯಾ’ ಮೃತಪಟ್ಟು ವರ್ಷ ಕಳೆಯುವಷ್ಟರಲ್ಲಿ ಇನ್ನೊಂದು ಮೊಸಳೆ ಅದೇ ಕೆರೆಯಲ್ಲಿ ಕಾಣಿಸಿಕೊಂಡಿದೆ.
ಇದರೊಂದಿಗೆ ಇಂದಲ್ಲ ನಾಳೆ ಇನ್ನೊಂದು ಮೊಸಳೆ ಬಂದೇ ಬರುತ್ತದೆ ಎಂಬ ಆಸ್ತಿಕರ ನಂಬಿಕೆಗೆ ಇಂಬು ನೀಡಿದೆ. ಮೊಸಳೆ ಕಂಡುಬಂದಿರುವುದನ್ನು ದೇಗುಲದ ಆಡಳಿತ ಮಂಡಳಿ ದೃಢಪಡಿಸಿದೆ.
ಶತಮಾನಗಳಿಂದ ದೇವಾಲಯದ ಕೊಳದಲ್ಲಿ ಮೊಸಳೆಯೊಂದು ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿತ್ತು. “ಬಬಿಯಾ’ ಎಂಬ ಹೆಸರಿನಿಂದ ಅದನ್ನು ಕರೆಯುತ್ತಿದ್ದರು. ಬ್ರಿಟಿಷರ ಆಡಳಿತವಿದ್ದಾಗ ಅಧಿಕಾರಿಯೊಬ್ಬ ಅದನ್ನು ಗುಂಡಿಟ್ಟು ಕೊಂದಿದ್ದ. ಬಳಿಕ ಎರಡನೇ “ಬಬಿಯಾ’ ಕಾಣಿಸಿಕೊಂಡಿತ್ತು. ಕ್ಷೇತ್ರದಲ್ಲಿ ಮಧ್ಯಾಹ್ನ ಪೂಜೆಯ ಬಳಿಕ ಪುರೋಹಿತರು ಅನ್ನ ನೈವೇದ್ಯದೊಂದಿಗೆ ಕೆರೆ ಬಳಿ ತೆರಳಿ ಕರೆದಾಗ ಗುಹೆಯಿಂದ ಹೊರಬಂದು ನೈವೇದ್ಯವನ್ನು ಸ್ವಿಕರಿಸಿ ಗುಹೆಗೆ ಮರಳುತ್ತಿತ್ತು. 75 ವರ್ಷಗಳ ಕಾಲ ಪೂಜಿಸಲ್ಪಟ್ಟ 2ನೇ ಬಬಿಯಾ 2022ರ ಅಕ್ಟೋಬರ್ 9ರಂದು ವೃದ್ಧಾಪ್ಯದ ಕಾರಣ ಅಸುನೀಗಿತ್ತು. ಒಂದು ವರ್ಷದ ಬಳಿಕ ಅಗಲಿದ ಮೊಸಳೆಯ ಸಂಸ್ಮರಣೆ ಕಾರ್ಯಕ್ರಮವನ್ನೂ ಮಾಡಲಾಗಿತ್ತು.
ಕಳೆದ ಮಂಗಳವಾರ ಕೇರಳ ಭಾಗದಿಂದ ಆಗಮಿಸಿದ ನಾಲ್ವರು ಭಕ್ತರ ತಂಡಕ್ಕೆ ಕೆರೆ ಬಳಿಯ ಪಾದೆಯ ಮೇಲೆ ವಿಹರಿಸುತ್ತಿದ್ದ ಮೊಸಳೆ ಕಾಣಿಸಿದ್ದು, ಛಾಯಾಚಿತ್ರ ಕ್ಲಿಕ್ಕಿಸಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಮಲೆಯಾಳ ಸಂಜೆ ಪತ್ರಿಕೆಯೊಂದು ವರದಿಯನ್ನು ಪ್ರಕಟಿಸಿದರೂ ಕ್ಷೇತ್ರದ ಆಡಳಿತದವರು ದೃಢಪಡಿಸಿರಲಿಲ್ಲ. ಈ ಬಾರಿಯ ದೀಪಾವಳಿಗೆ ಈ ಪವಾಡಸದೃಶ ಘಟನೆ ಆಸ್ತಿಕ ಭಕ್ತರ ಸಂಭ್ರಮವನ್ನು ಹೆಚ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.