Na Kolikke Ranga Movie Review; ಕೋಳಿ ಹಿಂದೊಂದು ರಂಗಿನ ಕಥೆ


Team Udayavani, Nov 12, 2023, 10:02 AM IST

Na Kolikke Ranga Movie Review

ಆತ ಹಳ್ಳಿಯಲ್ಲಿರುವ ಅವಿದ್ಯಾವಂತ ಹುಡುಗ ರಂಗ. ಯಾವುದೇ ಕೆಲಸವಿಲ್ಲದೆ ಊರಿನಲ್ಲಿ ತನ್ನ ವಯಸ್ಸಿನ ಹುಡುಗರ ಜೊತೆ ಅಡ್ಡಾಡಿಕೊಂಡಿರುವ ರಂಗನಿಗೆ ತನ್ನ ತಾಯಿ ಮತ್ತು ಕೋಳಿ ಎರಡೇ ಪ್ರಪಂಚ. ಇಂಥ ರಂಗನ ಜೀವನದಲ್ಲಿ ಬರುವ ಅನಿರೀಕ್ಷಿತ ಸನ್ನಿವೇಶವೊಂದು, ತಾಯಿ ಅಥವಾ ಕೋಳಿ ಇವೆರಡಲ್ಲಿ ಯಾವುದು

ಮುಖ್ಯ ಎಂಬ ಪರೀಕ್ಷೆಗೆ ರಂಗನನ್ನು ಸಿಲುಕಿಸುತ್ತದೆ. ಇಂಥ ಸನ್ನಿವೇಶವನ್ನು ಹಳ್ಳಿಯ ಹುಡುಗ ರಂಗ ಹೇಗೆ ಎದುರಿಸುತ್ತಾನೆ? ತಾಯಿ ಮತ್ತು ಕೋಳಿ ಎರಡರಲ್ಲಿ ರಂಗನಿಗೆ ಯಾವುದು ಮುಖ್ಯವಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ನಾ ಕೋಳಿಕ್ಕೆ ರಂಗ’ ಸಿನಿಮಾದ ಕಥಾಹಂದರ.

ಸಿನಿಮಾದ ಹೆಸರೇ ಹೇಳುವಂತೆ, “ನಾ ಕೋಳಿಕ್ಕೆ ರಂಗ’ ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಹಳ್ಳಿಯ ಜನ-ಜೀವನ, ಪ್ರೀತಿ, ಸ್ನೇಹ, ಆಚರಣೆ ಎಲ್ಲದರ ಜೊತೆಗೆ ಸಿನಿಮಾದ ಕಥಾಹಂದರ ಸಾಗುತ್ತದೆ. ಕಾಮಿಡಿ, ಲವ್‌, ಸೆಂಟಿಮೆಂಟ್‌, ಹಾಡು, ಡ್ಯಾನ್ಸ್‌ ಹೀಗೆ ಎಲ್ಲ ಥರದ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕೆಲ ಅನಗತ್ಯ ಸನ್ನಿವೇಶಗಳಿಗೆ ಕತ್ತರಿ ಹಾಕಿ, ಚಿತ್ರಕಥೆಗೆ ಇನ್ನಷ್ಟು ವೇಗ ನೀಡಿದ್ದರೆ, ರಂಗನ ಓಟ ಇನ್ನಷ್ಟು ರಂಗಾಗಿರುವ ಸಾಧ್ಯತೆಗಳಿದ್ದವು.

ಇನ್ನು ಇಡೀ ಸಿನಿಮಾದಲ್ಲಿ ಹೈಲೈಟ್ಸ್‌ ನಾಯಕ ಮಾಸ್ಟರ್‌ ಆನಂದ್‌ ಮತ್ತು ಕೋಳಿ ನಡುವಿನ ಭಾವನಾತ್ಮಕ ಸನ್ನಿವೇಶಗಳು. ಆನಂದ್‌, ಭವ್ಯಾ ಮತ್ತು ನವ ನಾಯಕಿ ರಾಜೇಶ್ವರಿ ಅಭಿನಯ ನೋಡುಗರ ಗಮನ ಸೆಳೆಯುತ್ತದೆ. ಉಳಿದಂತೆ ಚಿರಪರಿಚಿತ ಕಲಾವಿದರ ದೊಡ್ಡ ದಂಡೇ ಸಿನಿಮಾದಲ್ಲಿದೆ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಹಳ್ಳಿ ಸೊಬಗನ್ನು ರಂಗುರಂಗಾಗಿ ಕಾಣುವಂತೆ ಮಾಡಿದೆ.

ಕೈಲಾಶ್‌ ಖೇರ್‌ ಗಾಯನದ “ಮರೆಯೋದುಂಟೆ ಮೈಸೂರು ದೊರೆಯ…’ ಸೇರಿದಂತೆ “ನಾ ಕೋಳಿಕ್ಕೆ ರಂಗ’ ಸಿನಿಮಾದ ಒಂದೆರಡು ಹಾಡುಗಳು ಗುನುಗುವಂತಿದೆ. ಒಟ್ಟಾರೆ ಮಾಸ್‌ ಆಡಿಯನ್ಸ್‌ ಬಯಸುವ ಎಲ್ಲ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳೂ “ರಂಗ’ನಲ್ಲಿದ್ದು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.

ಜಿ.ಎಸ್‌.ಕೆ.ಸುಧನ್

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.