Salaar: ದೀಪಾವಳಿ ಹಬ್ಬಕ್ಕೆ ʼಸಲಾರ್ʼ ಗಿಫ್ಟ್; ಟ್ರೇಲರ್ ರಿಲೀಸ್ ಡೇಟ್ ರಿವೀಲ್
Team Udayavani, Nov 12, 2023, 12:18 PM IST
ಹೈದರಾಬಾದ್: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಸಲಾರ್ʼ ಟ್ರೇಲರ್ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಆ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ.
ಡಾರ್ಲಿಂಗ್ ಪ್ರಭಾಸ್ ವೃತ್ತಿ ಬದುಕಿನ ಮತ್ತೊಂದು ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼಸಲಾರ್ʼ ರಿಲೀಸ್ , ಟೀಸರ್, ಪಾತ್ರವರ್ಗ ಹೀಗೆ ನಾನಾ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಕೆಲ ಪ್ರೊಡಕ್ಷನ್ ಸಂಬಂಧಿತ ಕೆಲಸದಿಂದ ಮುಂದೂಡಿಕೆ ಆಗಿತ್ತು. ಆದರೆ ʼಸಲಾರ್ʼ ಟೀಸರ್ ತುಣುಕು ಬಿಟ್ಟು, ಮತ್ತೆ ಕುತೂಹಲ ಹೆಚ್ಚಿಸಿತ್ತು.
ಇದೀಗ ಟ್ರೇಲರ್ ರಿಲೀಸ್ ಡೇಟ್ & ಟೈಮ್ ನ್ನು ದೀಪಾವಳಿ ಹಬ್ಬಕ್ಕೆ ಚಿತ್ರತಂಡ ಮಾಸ್ ಪೋಸ್ಟರ್ ವೊಂದನ್ನು ಬಿಟ್ಟು ರಿವೀಲ್ ಮಾಡಿದೆ. ಜೀಪ್ ಮೇಲೆ ಹತ್ತಿ ಗನ್ ವೊಂದನ್ನು ಶೂಟ್ ಮಾಡುವ ಪೋಸ್ಟರ್ ನ್ನು ರಿಲೀಸ್ ಮಾಡಿ ಟ್ರೇಲರ್ ರಿಲೀಸ್ ಡೇಟ್ & ಟೈಮ್ ರಿವೀಲ್ ಮಾಡಿದೆ.
ಇದನ್ನೂ ಓದಿ: ISIS Link; ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ 3 ವಿದ್ಯಾರ್ಥಿಗಳ ಬಂಧನ
ಈ ಹಿಂದೆ ಡಿಸೆಂಬರ್ ಮೊದಲ ವಾರದಲ್ಲಿ ಟ್ರೇಲರ್ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಇದೀಗ ಡಿ.1 ರಂದು ಸಂಜೆ 7:19 ಕ್ಕೆ ಟ್ರೇಲರ್ ಮಾಡುವುದು ಪಕ್ಕಾ ಎಂದು ಚಿತ್ರತಂಡ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿ ಫ್ಯಾನ್ಸ್ ಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಡಿಸೆಂಬರ್ 22 ರಂದು ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ. ಪ್ರಭಾಸ್,ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್, ತಿನ್ನು ಆನಂದ್, ಬ್ರಹ್ಮಾಜಿ, ಈಶ್ವರಿ ರಾವ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
𝐆𝐞𝐚𝐫 𝐮𝐩 𝐟𝐨𝐫 𝐚𝐧 𝐞𝐱𝐩𝐥𝐨𝐬𝐢𝐯𝐞 𝐜𝐞𝐥𝐞𝐛𝐫𝐚𝐭𝐢𝐨𝐧𝐬 💥#SalaarCeaseFire Trailer is set to detonate on Dec 1st at 7:19 PM 🔥
Happy Deepavali Everyone 🪔 #Salaar #Prabhas #PrashanthNeel @PrithviOfficial @shrutihaasan @hombalefilms @VKiragandur @IamJagguBhai… pic.twitter.com/rf0wwNvWX5
— Hombale Films (@hombalefilms) November 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.