Kannada Cinema; ಬಿಡುಗಡೆಗೆ ಸಿದ್ದವಾದ ‘ರಾಜಯೋಗ’

Team Udayavani, Nov 12, 2023, 4:50 PM IST

ಬಿಡುಗಡೆಗೆ ಸಿದ್ದವಾದ ‘ರಾಜಯೋಗ’

ಧರ್ಮಣ್ಣ ನಾಯಕನಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚೊಚ್ಚಲ ಸಿನಿಮಾ “ರಾಜಯೋಗ’ ಈಗ ಬಿಡುಗಡೆಗೆಯ ಹಂತಕ್ಕೆ ಬಂದಿದೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ರಾಜಯೋಗ’ ಸಿನಿಮಾ ಇದೇ ನವೆಂಬರ್‌ 17ರಂದು ಬಿಡುಗಡೆಯಾಗುತ್ತಿದೆ.  ಇತ್ತೀಚೆಗೆ ಮಧ್ಯಮಗಳ ಮುಂದೆ ಬಂದಿದ್ದ “ರಾಜಯೋಗ’ ಚಿತ್ರತಂಡ ಸಿನಿಮಾದ ಪ್ಯಾಥೋ ಹಾಡೊಂದನ್ನು ಬಿಡುಗಡೆ ಮಾಡಿತು.

ಅಕ್ಷಯ್‌ ಎಸ್‌. ರಿಶಭ್‌ ಸಂಗೀತ ಸಂಯೋಜನೆಯ ಈ ಗೀತೆಗೆ, ಪ್ರಮೋದ್‌ ಜೋಯಿಸ್‌ ಸಾಹಿತ್ಯವಿರುವ ಬಂಧು-ಬಳಗದ ಕುರಿತಾಗಿ ಈ ಹಾಡು ಮೂಡಿಬಂದಿದೆ. ಲಿಂಗರಾಜ ಉಚ್ಚಂಗಿ ದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ “ರಾಜಯೋಗ’ ಸಿನಿಮಾವನ್ನು “ಶ್ರೀರಾಮರತ್ನ ಪೊ›ಡಕ್ಷನ್ಸ್‌’ ಮೂಲಕ ಕುಮಾರ ಕಂಠೀರವ, ದೀಕ್ಷಿತ್‌ ಕೃಷ್ಣ, ಪ್ರಭು ಚಿಕ್ಕ  ನಾಯ್ಕನ ಹಳ್ಳಿ, ಲಿಂಗರಾಜು ಕೆ. ಎನ್‌, ನೀರಜ್‌ ಗೌಡ ಮತು ಧರ್ಮಣ್ಣ ಕಡೂರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ನಿರ್ಮಾಪಕರಲ್ಲಿ ಒಬ್ಬರಾದ ಕುಮಾರ ಕಂಠೀರವ, “ಈ ಹಾಡು ಸಂಬಂಧಗಳ ಬಗ್ಗೆ ತಿಳಿಸಿಕೊಡುತ್ತದೆ. ನಟ ಧರ್ಮಣ್ಣ ಈ ಸಿನಿಮಾದ ಕಂಟೆಂಟ್‌ ಬಗ್ಗೆ ಈ ತಂಡದಲ್ಲಿ ನಾನೂ ಒಬ್ಬನಾಗಿ ಸೇರಿದೆ. ಸಿನಿಮಾದಲ್ಲಿ ಗ್ರಾಮೀಣ ಸೊಗಡನ್ನು ತುಂಬಾ ಚೆನ್ನಾಗಿ ತರಲಾಗಿದೆ. ನಮ್ಮ ಸಿನಿಮಾವನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

“ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಪ್ರಾಮಾಣಿಕವಾಗಿ ಕೆಲಸ ಮಾಡಿ ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ. ಶ್ರದ್ದೆಯಿಂದ ಕೆಲಸ ಮಾಡಿದರೆ “ರಾಜಯೋಗ’ ಬಂದೇ ಬರುತ್ತೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಈ ಕಥೆ ನಡೆಯುತ್ತದೆ. ಕೆಎಎಸ್‌ ಎಕ್ಸಾಂ ಬರೆಯಲು ಹೊರಟ ನಾಯಕ, ಕೊನೆಗಾದರೂ ಕೆಎಎಸ್‌ ಬರೀತಾನಾ ಇಲ್ವಾ ಅನ್ನೋದೇ ಕಥೆಯ ಒಂದು ಎಳೆ. ಜೊತೆಗೆ ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನೂ ಇಲ್ಲಿ ಹೇಳಿದ್ದೇವೆ. ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಹೆಳಲಾಗಿದೆ’ ಎಂದು “ರಾಜಯೋಗ’ ಸಿನಿಮಾದ ಕಥಾಹಂದರ ತೆರೆದಿಟ್ಟರು ನಿರ್ದೇಶಕ ಲಿಂಗರಾಜ್‌.

ನಾಯಕ ನಟ ಧರ್ಮಣ್ಣ ಮಾತನಾಡುತ್ತ, “ತುಂಬಾ ಓದಿಕೊಂಡಿರುವವನ ಜೀವನ ಹೇಗಿರುತ್ತೆ ಅಂತ ಹೇಳುವ ಪಾತ್ರ ಈ ಸಿನಿಮಾದಲ್ಲಿದೆ. ಇದರಲ್ಲಿ ಕಾಮಿಡಿ, ಎಮೋಷನ್‌ ಎಲ್ಲಾ ಸೇರಿದೆ, ಪ್ರತಿಯೊಂದು ಪಾತ್ರಕ್ಕೂ ಸಮಾನ ಅವಕಾಶವಿದೆ. ಈಗಾಗಲೇ ಟ್ರೇಲರ್‌, ಸಾಂಗ್ಸ್‌ ಹಿಟ್‌ ಆಗಿದೆ, ಅದೇ ರೀತಿ ಜನ ಸಿನಿಮಾವನ್ನೂ ಗೆಲ್ಲಿಸುತ್ತಾರೆಂಬ ಭರವಸೆಯಿದೆ’ ಎಂದರು.

ಟಾಪ್ ನ್ಯೂಸ್

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

Bellary; B Nagendra dance at Valmiki Jayanti event

Bellary; ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಾಗೇಂದ್ರ ಭರ್ಜರಿ ಡ್ಯಾನ್ಸ್

ಮೊದಲು ಮಳೆ ಕಾಟ ಬಳಿಕ ಬ್ಯಾಟರ್‌ ಗಳ ಶೂನ್ಯದಾಟ

INDvsNZ; ಮೊದಲು ಮಳೆ ಕಾಟ ಬಳಿಕ ಬ್ಯಾಟರ್‌ ಗಳ ಶೂನ್ಯದಾಟ: ಭಾರತ ಕೇವಲ 46ಕ್ಕೆ ಆಲೌಟ್

5-yellapur

Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ

9

BBK11: ಜಗದೀಶ್‌ ಬಿಗ್‌ ಬಾಸ್‌ನಿಂದ ಆಚೆ ಬಂದಿರುವುದು ನಿಜವೇ? ಪತ್ನಿ ಹೇಳಿದ್ದೇನು?

ಪಾಕ್ ಪರ ಘೋಷಣೆ: ಆರೋಪಿಗೆ ಭಾರತ್ ಮಾತಾ ಕೀ ಜೈ ಎಂದು ರಾಷ್ಟ್ರಧ್ವಜಕ್ಕೆ ಸುತ್ತು ಬರುವ ಶಿಕ್ಷೆ

ಪಾಕ್ ಪರ ಘೋಷಣೆ: ಆರೋಪಿಗೆ ಭಾರತ್ ಮಾತಾ ಕೀ ಜೈ ಎಂದು ರಾಷ್ಟ್ರಧ್ವಜಕ್ಕೆ ನಮಸ್ಕರಿಸುವ ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

2

Actor Darshan: ಅ.22ಕ್ಕೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

ja

BBK11: ನೀವು ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು, ಜನರ ಮನಸ್ಸು ಗೆಲ್ಲೋದು ನಾನೇ.. ಜಗದೀಶ್

15

Ellige Payana Yaavudo Daari Movie: ಟ್ರೇಲರ್‌ನಲ್ಲಿ ಅಭಿಮನ್ಯು ಪಯಣ

Tenant Kannada Movie ನ.22ಕ್ಕೆ ಟೆನೆಂಟ್‌ ರಿಲೀಸ್‌

Tenant Kannada Movie ನ.22ಕ್ಕೆ ಟೆನೆಂಟ್‌ ರಿಲೀಸ್‌

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

5

Bantwala: ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

4

Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

Bellary; B Nagendra dance at Valmiki Jayanti event

Bellary; ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಾಗೇಂದ್ರ ಭರ್ಜರಿ ಡ್ಯಾನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.