Tiger 3: ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು… ದಿಕ್ಕಾಪಾಲಾಗಿ ಓಡಿದ ಪ್ರೇಕ್ಷಕರು
Team Udayavani, Nov 13, 2023, 3:08 PM IST
ಮುಂಬೈ: ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಭೂಮಿಕೆಯ ‘ಟೈಗರ್ 3’ ಚಿತ್ರ ನವೆಂಬರ್ 12 ರಂದು ಬಹು ಭಾಷೆಗಳಲ್ಲಿ ತೆರೆ ಕಂಡಿದೆ. ಅಲ್ಲದೆ ಬಿಡುಗಡೆಗೊಂಡ ಮೊದಲ ದಿನವೇ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 44 ಕೋಟಿ ರೂ. ಗಳಿಸಿದೆ.
ಈ ನಡುವೆ ನಾಸಿಕ್‌ನ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಸಲ್ಲು ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡುವ ಸಂಭ್ರಮದ ನಡುವೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ್ದಾರೆ ಪಟಾಕಿ ಸಿಡಿಯುತ್ತಿದ್ದಂತೆ ಪಟಾಕಿಯ ಕಿಡಿಗಳು ಥಿಯೇಟರ್ ಒಳಗೆ ಹಾರಿದ್ದು ಇತರ ಪ್ರೇಕ್ಷಕರು ಜೀವಭಯದಿಂದ ಥಿಯೇಟರ್ ಒಳಗಿಂದ ಹೊರ ಓಡಿ ಬಂದಿದ್ದಾರೆ.
ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಟಾಕಿ ಸಿಡಿಯುತ್ತಿರುವ ವೇಳೆ ಜನರು ಜೀವಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿ ಬರುತ್ತಿರುವುದನ್ನು ಕಾಣಬಹುದಾಗಿದೆ.
ಸಲ್ಲು ಅಭಿಮಾನಿಗಳು ಮೋಹನ್ ಥಿಯೇಟರ್ ನಲ್ಲಿ ನಡೆಸಿದ ದಾಂಧಲೆಗೆ ಸಂಬಂಧಿಸಿ ಚವಾನಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 112 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇವಲ ಮಾಲೆಗಾಂವ್‌ನಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳು ಚಿತ್ರಮಂದಿರದ ಒಳಗಡೆ ಪಟಾಕಿ ರಾಕೆಟ್ ಸಿಡಿಸಿ ಸಂಭ್ರಮಿಸಿ ಇತರ ಪ್ರೇಕ್ಷಕರ ಸಿಟ್ಟಿಗೆ ಕಾರಣರಾಗಿದ್ದಾರೆ.
ಇದನ್ನೂ ಓದಿ:
Aatishbazi inside theater💥 this kind of celebration happens only for #SalmanKhan ‘s film🔥 #Tiger3 #Tiger3Review pic.twitter.com/LiMnFMSedW
— Devil V!SHAL (@VishalRC007) November 12, 2023
As Usual 💥 Salman Khan Fanclub Malegaon continues the TREND of Bursting Crackers in Theatres on Salman Khan’s Entry, Though It is not advised but Fans ka emotion kon Samjhe 💀💥 #Tiger3review #Tiger3 pic.twitter.com/HIoVWKEWBp
— YOGESH (@i_yogesh22) November 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.