Udupi ಹಣಕಾಸು ವ್ಯವಹಾರ ಶಂಕೆ; ಸುಪಾರಿ ಹಂತಕನ ಕೃತ್ಯ?

ಚೂರಿಯಿಂದ ಇರಿದು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ

Team Udayavani, Nov 13, 2023, 11:36 PM IST

u

ದಫ‌ನ ಪ್ರಕ್ರಿಯೆ ನಡೆದಾಗ ತಂದೆ-ಮಗ ಮೂಕ ಪ್ರೇಕ್ಷಕರಾಗಿ ದುಃಖತಪ್ತರಾಗಿ ನಿಂತಿದ್ದ ಕ್ಷಣ.

ಉಡುಪಿ/ಮಲ್ಪೆ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ನಾಲ್ವರ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ಈಗಾಗಲೇ 5 ತಂಡಗಳನ್ನು ರಚಿಸಿದ್ದು, ಅವರು ಜಿಲ್ಲೆ ಸಹಿತ ಹೊರ ಜಿಲ್ಲೆಗಳಲ್ಲಿಯೂ ವಿವಿಧ ಆಯಾಮಗಳಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ತಂಡದ ಸಹಕಾರದಲ್ಲಿ ವಿವಿಧೆಡೆಯ ಸಿಸಿ ಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

ಮೇಲ್ನೋಟಕ್ಕೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಹಂತಕನ ಮೂಲಕ ಮನೆಯಲ್ಲಿದ್ದವರೆಲ್ಲರನ್ನೂ ಹತ್ಯೆ ಮಾಡಲು ಸುಪಾರಿ ಕೊಟ್ಟಂತೆ ಕಂಡುಬರುತ್ತಿದೆ.

ಆರೋಪಿ ಘಟನೆ ನಡೆದ ಸ್ಥಳದಿಂದ ಅನ್ಯರ ಬೈಕ್‌ವೊಂದರಲ್ಲಿ ಸಂತೆಕಟ್ಟೆಗೆ ಆಗಮಿಸಿ, ಅಲ್ಲಿಂದ ಕರಾವಳಿ ಬೈಪಾಸ್‌ಗೆ ಆಟೋರಿಕ್ಷಾದಲ್ಲಿ ತೆರಳಿದ್ದ. ಅನಂತರ ಅಲ್ಲಿಂದ ಉದ್ಯಾವರದ ಟೊಯೋಟಾ ಶೋರೂಂವರೆಗೆ ಅನ್ಯರ ಬೈಕ್‌ವೊಂದರಲ್ಲಿ ಬಂದಿರುವ ದೃಶ್ಯಾವಳಿಗಳು ಸ್ಥಳೀಯ ಸಿಸಿ ಟಿವಿಗಳಲ್ಲಿ ಸೆರೆಯಾಗಿವೆ.

ಪೊಲೀಸರ ಕಣ್ತಪ್ಪಿಸುವ ಉದ್ದೇಶದಿಂದಲೇ ಆತ ಬೇರೆ-ಬೇರೆಯವರ ಸಹಕಾರದ ಮೂಲಕ ತೆರಳಿರುವ ಸಾಧ್ಯತೆಗಳೂ ಇವೆ. ಉದ್ಯಾವರದಿಂದ ಮಂಗಳೂರಿನತ್ತ ತೆರಳಿದ್ದಾನೆಯೇ ಅಥವಾ ಮತ್ತೆ ಹಿಂದಿರುಗಿ ಉಡುಪಿ ಮೂಲಕ ಬೇರೆ ಕಡೆ ತೆರಳಿದ್ದಾನೆಯೇ ಎಂಬ ಬಗ್ಗೆ ಯಾವುದೇ ಸಿಸಿ ಟಿವಿ ದೃಶ್ಯಾವಳಿಗಳು ಲಭಿಸಿಲ್ಲ. ಆದರೂ ಪೊಲೀಸರು ನಿರಂತರವಾಗಿ ಈ ಕೊಲೆ ಪ್ರಕರಣವನ್ನು ಆದಷ್ಟು ಶೀಘ್ರವಾಗಿ ಭೇದಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ಕಾರ್ಯಪ್ರವೃತ್ತರಾಗಿದ್ದಾರೆ.

ಹಣಕಾಸು ವ್ಯವಹಾರ ಶಂಕೆ?
ಮೃತ ಹಸೀನಾ ಅವರ ಪತಿ 3 ದಶಕಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸುಶಿಕ್ಷಿತ ಮತ್ತು ಆರ್ಥಿಕವಾಗಿ ಸದೃಢವಾದ ಕುಟುಂಬವಾಗಿತ್ತು. ಹಿರಿಯ ಪುತ್ರ ಇಂಡಿಗೋದಲ್ಲಿ ಉದ್ಯೋಗದಲ್ಲಿದ್ದರೆ ಹಿರಿಯ ಪುತ್ರಿ ಅಘ್ನಾನ್‌ ಲಾಜಿಸ್ಟಿಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಕಿರಿಯ ಪುತ್ರಿ ಅಯ್ನಾಜ್‌ ಅವರು ಏರ್‌ ಇಂಡಿಯಾದಲ್ಲಿ ಗಗನಸಖಿಯಾಗಿದ್ದರು. ಈ ನಡುವೆ ಹಸೀನಾ ಅವರು ಆರ್ಥಿಕವಾಗಿ ಕೆಲವೆಡೆ ಹಣಕಾಸು ಹೂಡಿಕೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದ್ದು, ಈ ವಿಚಾರವೇ ಅಥವಾ ಇಬ್ಬರು ಹೆಣ್ಮಕ್ಕಳ ಮೇಲಿನ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆಯೇ ಎಂಬ ಅನುಮಾನ ಮೂಡತೊಡಗಿದೆ.

ಚಾಲಾಕಿ ಹಂತಕ!
ಹಂತಕ ಕೊಲೆ ಮಾಡುವ ಮುನ್ನ ಮತ್ತ ಅನಂತರ ಪರಾರಿಯಾದ ಘಟನಾವಳಿಗಳನ್ನು ಅವಲೋಕಿಸಿದರೆ ಮನೆಯ ಪರಿಸರವನ್ನು ಮೊದಲೇ ಅರಿತಿದ್ದನೆಂದು ತಿಳಿದುಬರುತ್ತದೆ. ಮೇಲ್ನೋಟಕ್ಕೆ ಆರೋಪಿ ಸುಪಾರಿ ಕಿಲ್ಲರ್‌ನಂತೆ ಗೋಚರಿಸುತ್ತಾನೆ. ಆತ ವಿವಿಧ ವಾಹನಗಳಲ್ಲಿ ಸಂಚರಿಸಿರುವುದು, ರಕ್ತದ ಕಲೆಗಳಿದ್ದ ಬಟ್ಟೆ ಬದಲಾಯಿಸಿರುವುದು, ಕೃತ್ಯ ನಡೆಸಿದ ಆಯುಧ ಹಾಗೂ ಯಾವುದೇ ಸಾಕ್ಷ್ಯ ಇಲ್ಲದಂತೆ ಎಚ್ಚರವಹಿಸಿರುವುದು ನೋಡಿದಾಗ ಇದೊಂದು ಪೂರ್ವನಿಯೋಜಿತ ಕೃತ್ಯದಂತೆ ಕಂಡುಬರುತ್ತಿದೆ. ಕೊಲೆಯಾದ ಅನಂತರ 2 ಬೈಕ್‌, ಒಂದು ಆಟೋದಲ್ಲಿ ಸಂಚರಿಸಿರುವಾಗ ರಕ್ತದ ಕಲೆಗಳ ವಾಸನೆ ಸಾಮಾನ್ಯವಾಗಿ ಸವಾರ, ಚಾಲಕನಿಗೆ ಬರಬೇಕಿತ್ತು. ಆದರೆ ಅವರ್ಯಾರಿಗೂ ಅಂತಹ ವಾಸನೆ ಗೊತ್ತಾಗಿಲ್ಲ. ಅದಕ್ಕಾಗಿ ಆತ ಕಿಲ್ಲರ್‌ ಸುಗಂಧ ದ್ರವ್ಯ ಬಳಸಿರುವ ಸಾಧ್ಯತೆ ಇದೆ.

ವಿಕೃತ ಮನಸ್ಸಿನ ಆರೋಪಿ!
ನಾಲ್ವರನ್ನು ಕೊಲೆ ನಡೆಸಿದರೂ, ಯಾವುದೇ ಚಿಂತೆಯಿಲ್ಲದೆ ಸಾಮಾನ್ಯ ಜನರಂತೆಯೇ ತೆರಳಿರುವುದು ಆ ವ್ಯಕ್ತಿಯ ಮನಃಸ್ಥಿತಿಯನ್ನು ಹೇಳುತ್ತದೆ. ಕೊಲೆ ನಡೆಸಿ ನೊಂದುಕೊಂಡು ಪೊಲೀಸರಿಗೆ ಶರಣಾಗುವ ಹಲವಾರು ಉದಾಹರಣೆಗಳು ಕಾಣಸಿಗುತ್ತವೆ. ಆದರೆ ಮನುಷ್ಯತ್ವದ ಪರಿವೆಯೇ ಇಲ್ಲದೆ ಕೃತ್ಯ ನಡೆಸಿದ ಆರೋಪಿ ಎಂತಹ ಸ್ವಭಾವದವನಾಗಿರಬಹುದು ಎಂದು ಊಹಿಸಲೂ ಅಸಾಧ್ಯ.

ತಂದೆ-ಮಗ ಮೌನ
ನಾಲ್ವರ ಅಂತ್ಯಸಂಸ್ಕಾರ ನಡೆಸುವ ವೇಳೆ ತಂದೆ ಹಾಗೂ ಹಿರಿಯ ಮಗ ಮೌನ ವಹಿಸಿದ್ದರು. ಮಾಧ್ಯಮದವರು ಮಾತನಾಡಲು ಯತ್ನಿಸಿದರೂ, ಸಾಧ್ಯವಾಗಲಿಲ್ಲ. ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.

ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾಬಿ ಅವರು ಚೇತರಿಸಿಕೊಂಡಿದ್ದು, ಸೋಮವಾರ ರಾತ್ರಿ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಘಟನೆಯನ್ನು ಜಿಲ್ಲಾ ಮುಸ್ಲಿಂ ಒಕ್ಕೂಟ, ಜುಮ್ಮಾ ಮಸೀದಿ, ಇನ್ನಿತರ ಮುಸ್ಲಿಂ ಸಂಘಟನೆಗಳು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಕೂಡಲೇ ಕ್ರೂರ ಹಂತಕನನ್ನು ಬಂಧಿಸುವಂತೆ ಸರಕಾರವನ್ನು ಒತ್ತಾಯಿಸಿದೆ.

ಮನೆ ಸಂಪೂರ್ಣ ಪೊಲೀಸರ ವಶ
ಹೆಚ್ಚಿನ ತನಿಖೆಗಾಗಿ ಕೊಲೆ ನಡೆದ ಮನೆಯನ್ನು ಸಂಪೂರ್ಣವಾಗಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.ಮನೆಮಂದಿ ಸೇರಿದಂತೆ ಯಾರೂ ಆ ಮನೆ ಪ್ರದೇಶಕ್ಕೆ ಬಾರದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಮೃತರ ಎಲ್ಲ ಮೊಬೈಲ್‌ ಇನ್ನಿತರ ಸೊತ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮನೆ ಯಜಮಾನ ನೂರ್‌ ಮೊಹಮ್ಮದ್‌, ಅವರ ತಾಯಿ ಹಾಜಿರಾಬಿ ಮತ್ತು ನೂರ್‌ ಅವರ ಹಿರಿಯ ಪುತ್ರ ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಬೋಳುತಲೆಯ ಹಿಂದೆ
ಬಿದ್ದ ಖಾಕಿ ಪಡೆ
ಕೃತ್ಯ ನಡೆಸಲು ಪ್ಯಾಂಟು-ಶರ್ಟು ಧರಿಸಿ, ಬ್ಯಾಗ್‌ ಹಿಡಿದುಕೊಂಡು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಬೋಳುತಲೆಯ ಹಂತಕನ ಹಿಂದೆ ಖಾಕಿ ಪಡೆ ಬಿದ್ದಿದೆ. ಹಂತಕ ತನ್ನ ಚಹರೆಯೇ ಸಿಗದಂತೆ ಕೃತ್ಯವೆಸಗಿದ್ದಾನೆ. ಆತನ ಬೋಳುತಲೆ ಮಾತ್ರ ಸಿಕ್ಕ ಎಲ್ಲ ಸಿಸಿ ಟಿವಿ ಕೆಮರಾಗಳಲ್ಲಿ ಎದ್ದು ಕಾಣುತ್ತಿದೆ ಅಷ್ಟೆ. ಸುಪಾರಿ ಹಂತಕನೆಂದುಕೊಂಡರೆ ಆ ವ್ಯಕ್ತಿ ತನಿಖೆಯ ಜಾಡು ತಪ್ಪಿಸಲು ತಲೆಯನ್ನು ಬೋಳು ಮಾಡಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ವಿಗ್‌ ಹಾಕಿರಲೂಬಹುದು ಅಥವಾ ನೈಜವಾಗಿ ಬೋಳು ತಲೆಯೂ ಆಗಿರಬಹುದು. ಒಟ್ಟಾರೆಯಾಗಿ ಬೋಳುತಲೆ ಹಂತಕನ ಪತ್ತೆಗೆ ಖಾಕಿ ಪಡೆ ಹಗಲಿರುಳೆನ್ನದೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.

ಜಾಮೀಯಾ ಮಸೀದಿಯಲ್ಲಿ ಅಂತ್ಯಸಂಸ್ಕಾರ
ಉಡುಪಿ/ಮಲ್ಪೆ: ಉಡುಪಿ ತಾಲೂಕಿನ ಕೆಮ್ಮಣ್ಣು ನೇಜಾರು ಸಮೀಪದ ಹಂಪನಕಟ್ಟೆಯ ತೃಪ್ತಿ ಲೇಔಟ್‌ನ ಮನೆಯೊಂದರಲ್ಲಿ ಹತ್ಯೆಗೊಳಗಾಗಿದ್ದ ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆ ಸೋಮವಾರ ಕೋಡಿಬೆಂಗ್ರೆಯ ಜಾಮೀಯಾ ಮಸೀದಿಯಲ್ಲಿ ನೆರವೇರಿತು.

ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ನಾಲ್ವರ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮೃತ ಹಸೀನಾ ಅವರ ಪತಿ ನೂರ್‌ ಮೊಹಮ್ಮದ್‌ ಅವರು ಸೌದಿ ಅರೇಬಿಯಾದಿಂದ ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಿದರು.

ಅಂತಿಮ ಸಂಸ್ಕಾರದ ಮುನ್ನ ಉಡುಪಿಯ ಜಾಮೀಯಾ ಮಸೀದಿಯಲ್ಲಿ ತಾಯಿ ಮತ್ತು ಹಿರಿಯ ಪುತ್ರಿ ಹಾಗೂ ಇಂದ್ರಾಳಿ ಮಸೀದಿಯಲ್ಲಿ ಕಿರಿಯ ಪುತ್ರಿ, ಉಡುಪಿ ಖಬರಸ್ತಾನದಲ್ಲಿ ಮಗನ ಪಾರ್ಥಿವ ಶರೀರಗಳ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅಲ್ಲಿಂದ ನೇಜಾರಿನ ಮನೆಯ ಆವರಣದಲ್ಲಿ ನಾಲ್ವರ ಶವಗಳನ್ನೂ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಅಂತಿಮ ದರ್ಶನ ಪಡೆದ ಅನಂತರ ಕೋಡಿಬೆಂಗ್ರೆಯಲ್ಲಿರುವ ಜಾಮೀಯಾ ಮಸೀದಿಗೆ ಸಾಗಿಸಿ ಜನಾಝ್ ನಮಾಝ್ ನಿರ್ವಹಿಸಲಾಯಿತು. ನಮಾಝಿನಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ನಾಲ್ವರನ್ನು ದಫ‌ನ ಮಾಡಲಾಯಿತು.

ಇಡೀ ಕುಟುಂಬವನ್ನೆ ಕಳೆದುಕೊಂಡ ನೂರ್‌ ಮೊಹಮ್ಮದ್‌ ಮತ್ತು ಅವರ ಮಗ ಅಸದ್‌ ಮೃತದೇಹಗಳನ್ನು ಕಂಡು ಕಣ್ಣೀರಿಡುತ್ತಿದ್ದುದು ಮನಕಲಕುವಂತಿತ್ತು. ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಉಡುಪಿ ಡಿವೈಎಸ್ಪಿ ದಿನಕರ್‌ ಮತ್ತು ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಉಪಸ್ಥಿತರಿದ್ದರು. ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ವಿನಯ ಕುಮಾರ್‌ ಸೊರಕೆ, ಜಿ.ಪಂ. ಮಾಜಿ ಸದಸ್ಯ ಜನಾರ್ದನ ತೋನ್ಸೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ನಿರ್ದೇಶಿಸಿದ್ದೇನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರವೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಮಾತನಾಡಿ, ಸೂಕ್ತ ತನಿಖೆಗೆ ನಿರ್ದೇಶಿಸಲಾಗಿದೆ. ಅವರಿಂದ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ. ಶೀಘ್ರ ಆರೋಪಿಯನ್ನು ಪತ್ತೆ ಮಾಡುವ ವಿಶ್ವಾಸವನ್ನು ಪೊಲೀಸ್‌ ವರಿಷ್ಠಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
– ಲಕ್ಷ್ಮೀ ಹೆಬ್ಬಾಳ್ಕರ್‌,
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ

ವಿವಿಧ ಆಯಾಮದ ತನಿಖೆ
ತನಿಖೆಗಾಗಿ 5 ತಂಡ ರಚಿಸಲಾಗಿದ್ದು, ಎಲ್ಲ ಆಯಾಮಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತರ ಸಂಬಂಧಿಕರು, ಗೆಳೆಯರು, ಪರಿಚಿತರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪೊಲೀಸರ ತಾಂತ್ರಿಕ ತಂಡವು ವಿವಿಧ ಭಾಗಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
– ಡಾ| ಅರುಣ್‌ ಕೆ.,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.