Lost Control: 16 ವರ್ಷದ ಬಳಿಕ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡ ಹಮಾಸ್: ಇಸ್ರೇಲ್ ಸಚಿವ
Team Udayavani, Nov 14, 2023, 9:20 AM IST
ಗಾಜಾ ಪಟ್ಟಿ: 16 ವರ್ಷಗಳ ಕಾಲ ಗಾಜಾ ಪಟ್ಟಿಯಲ್ಲಿ ಆಳ್ವಿಕೆ ನಡೆಸಿದ್ದ ಹಮಾಸ್ ಇದೀಗ ಅದರ ನಿಯಂತ್ರಣವನ್ನೇ ಕಳೆದುಕೊಂಡಿದೆ” ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಹೇಳಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ಈ ಕುರಿತು ಹೇಳಿಕೆ ನೀಡಿದ ರಕ್ಷಣಾ ಸಚಿವ “ಹಮಾಸ್ ಗಾಜಾದ ಮೇಲಿನ ನಿಯಂತ್ರಣವನ್ನು ಸಂಪೂರ್ಣ ಕಳೆದುಕೊಂಡಿದೆ. ಇಲ್ಲಿದ್ದ ಭಯೋತ್ಪಾದಕರು ದಕ್ಷಿಣದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸ್ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ” ಅಲ್ಲದೆ ಅಲ್ಲಿನ ನಾಗರಿಕರಿಗೆ ಅಲ್ಲಿನ ಸರಕಾರದ ಮೇಲೆ ಯಾವುದೇ ನಂಬಿಕೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಬಂದೂಕುಧಾರಿಗಳು ಇಸ್ರೇಲಿ ಪಟ್ಟಣಗಳ ಮೂಲಕ ದಾಳಿ ಮಾಡುವ ಮೂಲಕ ಯುದ್ಧ ಪ್ರಾರಂಭವಾಯಿತು.
ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಸತ್ತರು ಅಷ್ಟುಮಾತ್ರವಲ್ಲದೆ ಸುಮಾರು 240 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಯಿತು, ಇದು ಇಸ್ರೇಲ್ ನ 75 ವರ್ಷಗಳ ಇತಿಹಾಸದಲ್ಲಿ ಮಾರಣಾಂತಿಕ ದಿನವಾಗಿದೆ ಎಂದು ಹೇಳಿದರು.
ಹಮಾಸ್ ಮಾಡಿಸಿದ ದಾಳಿಗೆ ಪ್ರತೀಕಾರವಾಗಿ, ಇಸ್ರೇಲ್ ಕಳೆದ ತಿಂಗಳು ಹಮಾಸ್ ಅನ್ನು ನಿರ್ಮೂಲನೆ ಮಾಡಲು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಅದರಂತೆ ಯುದ್ಧದ ಘೋಷಣೆಯನ್ನು ಮಾಡಿತು ಆ ಬಳಿಕ ಇಸ್ರೇಲ್ ಹಮಾಸ್ ಉಗ್ರರ ನಿರ್ಮೂಲನೆ ಮಾಡಲು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಬಂಡುಕೋರರ ಅಡಗುತಾಣಗಳನ್ನು ವೈಮಾನಿಕ ದಾಳಿ ನಡೆಸಿ ಹೊಡೆದುರುಳಿಸಲಾಯಿತು.
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಿರಂತರ ದಾಳಿಯನ್ನು ನಡೆಸಿ ಉಗ್ರರ ನೆಗೆಲಗನ್ನು ನೆಲಸಮಗೊಳಿಸಿದರು ಅಲ್ಲದೆ ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಇಸ್ರೇಲ್ ಪಡೆದುಕೊಳ್ಳುವ ಮೂಲಕ ಹದಿನಾರು ವರ್ಷಗಳಿಂದ ಗಾಜಾ ಪಟ್ಟಿ ಮೇಲೆ ಆಡಳಿತ ನಡೆಸುತ್ತಿದ್ದ ಹಮಾಸ್ ಗಾಜಾ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಂತಾಗಿದೆ.
ಇದನ್ನೂ ಓದಿ: Mahadev Betting App ಪ್ರಕರಣದಲ್ಲಿ ಡಾಬರ್ ಗ್ರೂಪ್ ಅಧ್ಯಕ್ಷ, ನಿರ್ದೇಶಕರ ಹೆಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.