![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 14, 2023, 11:35 AM IST
ನೆಲಮಂಗಲ: ಮನೆ ಮಂದಿ ಊರಿಗೆ ಹೋಗಿರುವುದನ್ನು ಗಮನಿಸಿದ ಖದೀಮರು, ಮಧ್ಯರಾತ್ರಿ ಅರೆ ಬೆತ್ತಲೆಯಲ್ಲಿ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಪ್ರಕರಣ ನೆಲಮಂಗಲ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆರಳಚ್ಚು ತಜ್ಞರಿಂದ ಪರಿಶೀಲನೆ: ನಗರದ ವಾಜರಹಳ್ಳಿಯ ಮಾರುತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹನುಮಂತರೆಡ್ಡಿಅವರ ಕುಟುಂಬ ಶನಿವಾರ ಊರಿಗೆ ತೆರಳಿದ್ದು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಮನಗಂಡ ಖದೀಮರು, ಭಾನುವಾರ ಮಧ್ಯರಾತ್ರಿ ಮನೆ ಬೀಗ ಹೊಡೆದು ಮನೆಯಲ್ಲಿದ್ದ 1.50ಲಕ್ಷ ನಗದು, 95 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಪಕ್ಕದ ಮನೆಯವರು ಹನುಮಂತರೆಡ್ಡಿ ಅವರ ಮನೆ ಬಾಗಿಲು ತೆಗೆದಿರುವುದನ್ನು ಕಂಡು ಅನುಮಾನ ಬಂದು ಮಾಹಿತಿ ನೀಡಿದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಟೌನ್ ಪೊಲೀಸರು ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ಮಾಡಿಸಿದ್ದು ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಳ್ಳರ ಬುದ್ಧಿ: ಮನೆಗಳ್ಳತನ ಮಾಡಿರುವ ಖದೀಮರ ಚಲನವಲನ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಚ್ಚು ಮನೆಗಳಿರುವ ಬಡಾವಣೆಯಾದ ಕಾರಣ ಜನರಿಗೆ ಸಿಕ್ಕಿ ಬಿದ್ದರೂ ತಪ್ಪಿಸಿಕೊಳ್ಳಲು ಸಹಾಯವಾಗಲಿ ಎಂದು ಕಳ್ಳತನ ಮಾಡಲು ಬಂದಾಗ ಚಡ್ಡಿಮಾತ್ರ ಧರಿಸಿ ಅಂಗಿ, ಪ್ಯಾಂಟ್ ಹಾಕದೇ ಬರಿ ಮೈನಲ್ಲಿ ಬಂದಿದ್ದು ಮೈಗೆ ಎಣ್ಣೆ ಸವರಿಕೊಂಡಿರುವುದು ಕಂಡು ಬಂದಿದೆ.
You seem to have an Ad Blocker on.
To continue reading, please turn it off or whitelist Udayavani.