Indian Army “ಯುವತಿ ದೇಶ ಸೇವೆಗೆ ಪಣತೊಟ್ಟಿರುವುದು ಹೆಮ್ಮೆಯ ವಿಷಯ’
Team Udayavani, Nov 14, 2023, 9:15 PM IST
ಕುಂದಾಪುರ: ಬಿ.ಎಸ್.ಎಫ್ ಕ್ಯಾಂಪ್‌ನಲ್ಲಿ 11 ತಿಂಗಳ ತರಬೇತಿ ಪಡೆದು ಭಾರತ ಸೇನೆಯಿಂದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಕುಂದಾಪುರ ತಾಲೂಕಿನ ಹೆಮ್ಮಾಡಿ ಮೂಲದ ಸಂಜೀವ-ಗಂಗಾ ದಂಪತಿಯ ಪುತ್ರಿ ಸುನೀತಾ ಪೂಜಾರಿ ಅವರನ್ನು ಕುಂದಾಪುರದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಸುನೀತಾ ಪೂಜಾರಿ ಅವರಿಗೆ ಅಭಿನಂದಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೈನ್ಯಕ್ಕೆ ಸೇರುವರ ಸಂಖ್ಯೆ ವಿರಳ. ಅದರಲ್ಲಿಯೂ ಓರ್ವ ಯುವತಿ ಉತ್ಸಾಹಿಯಾಗಿ ಮುಂದೆ ಬಂದಿರುವುದಕ್ಕೆ ಮನೆಯವರ ಪ್ರೋತ್ಸಾಹ ಕೂಡ ಕಾರಣ. ಇವರಿಂದ ಸ್ಫೂರ್ತಿಯಾಗಿ ಯುವಜನಾಂಗ ಸೈನಕ್ಕೆ ಸೇರಬೇಕು. ಬಿಲ್ಲವ ಸಮಾಜದ ಯುವತಿ ದೇಶ ಸೇವೆಗೆ ಪಣತೊಟ್ಟಿರುವುದು ನಮಗೂ ಹೆಮ್ಮೆಯ ಸಂಗತಿ ಎಂದರು.
ಸೇನೆಗೆ ನಿಯೋಜನೆಗೊಂಡ ಪಂಜಾಬ್ ಮೂಲದ ಆಯಂತಿಕಾ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ, ಉಪಾಧ್ಯಕ್ಷ ಶಿವರಾಮ ಪೂಜಾರಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ ಕೋಡಿ, ರಮೇಶ್ ಪೂಜಾರಿ, ನಾಗರಿಕ ಹಿತರಕ್ಷಣಾ ವೇದಿಕೆಯ ಕೃಷ್ಣ ಪೂಜಾರಿ, ಹೆಮ್ಮಾಡಿ ರಿಕ್ಷಾ ಚಾಲಕ-ಮಾಲಕರ ಯೂನಿಯನ್‌ನ ಪ್ರವೀಣ್, ಮುಸ್ಲಿಂ ಸಮುದಾಯದ ಮುಖಂಡ ಯಾಸಿನ್ ಹೆಮ್ಮಾಡಿ ಮೊದಲಾದವರಿದ್ದರು. ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ವಂದಿಸಿದರು. ಸೇನೆಗೆ ನಿಯೋಜಿತರಾದ ಇಬ್ಬರು ಯುವತಿಯರು ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ವಂದಿಸಿದರು. ಬಳಿಕ ಕುಂದಾಪುರದಿಂದ ತೆರದ ವಾಹನದಲ್ಲಿ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ ಕರೆದೊಯ್ಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.