![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Nov 15, 2023, 4:10 PM IST
ಚೆನ್ನೈ: ಕಾಲಿವುಡ್ ಸ್ಟಾರ್ ನಿರ್ದೇಶಕ ಅಟ್ಲಿ ಕುಮಾರ್ ತಮ್ಮ ಸಿನಿಮಾಗಳಿಂದಲೇ ಹೆಸರುಗಳಿಸಿದವರು, ಇತ್ತೀಚೆಗೆ ಅವರ ʼಜವಾನ್ʼ ಸಿನಿಮಾ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರೂ ಅಟ್ಲಿ ಅವರ ಮೇಲೆ ಮೊದಲಿನಿಂದಲೂ ಅವರು ಸಿನಿಮಾಗಳನ್ನು ನಕಲು ಮಾಡುತ್ತಾರೆ ಎನ್ನುವ ಆರೋಪವೊಂದಿದೆ. ಈ ಕುರಿತು ಮುಕ್ತವಾಗಿ ಅಟ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಅಟ್ಲಿ ಅವರ ಮೊದಲ ಸಿನಿಮಾ ʼರಾಜಾ – ರಾಣಿʼ ಸೂಪರ್ ಹಿಟ್ ಆಗಿತ್ತು. ಆದರೆ ಈ ಸಿನಿಮಾದ ಕೆಲ ಅಂಶವನ್ನು ಮಣಿರತ್ನಂ ಅವರ ಕ್ಲಾಸಿಕ್ ಹಿಟ್ ʼಮೌನ ರಾಗಂʼ ದಲ್ಲಿತ್ತು ಎಂದು ಕೆಲವರು ಈ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡಿದ್ದರು.
ಇದಾದ ಬಳಿಕ ಬಂದ ಅವರ ಎರಡನೇ ಚಿತ್ರ ʼಥೇರಿʼಯನ್ನು ಇತರ ತಮಿಳು ಚಲನಚಿತ್ರಗಳ ಮಿಶ್ರಣ ಎಂದು ಕೆಲವರು ಕರೆದಿದ್ದರು.ʼಮೆರ್ಸಲ್ʼ ,ʼಬಿಗಿಲ್ʼ ಹಾಗೂ ಇತ್ತೀಚೆಗೆ ಬಂದʼಜವಾನ್ʼ ನಕಲು ಎನ್ನುವ ಆರೋಪವನ್ನು ಎದುರಿಸಿದೆ.
“ನಾನು ʼರಾಜಾ – ರಾಣಿʼ ಸಿನಿಮಾವನ್ನು ನಿರ್ದೇಶನ ಮಾಡುವಾಗ ಅದರಲ್ಲಿದ್ದ ಸಂಬಂಧಗಳ ಬಗ್ಗೆ ಏನಾದರೂ ಮಾಡಬೇಕೆಂದು ಬಯಸಿದ್ದೆ. ಆದರೆ ಅದಾಗಲೇ ಆ ಅಂಶ ಬೇರೊಂದು ಸಿನಿಮಾದಲ್ಲಿತ್ತು. ಯಾರೂ ಮಾಡದ ಒಂದೇ ಒಂದು ಕಥೆಯಿಲ್ಲ. ನಾನು ಸ್ಕ್ರಿಪ್ಟ್ ಮಾಡಲು ತುಂಬಾ ಶ್ರಮ ಹಾಕುತ್ತೇನೆ. ನನ್ನ ಸಿನಿಮಾವನ್ನು ಬೇರೆ ಸಿನಿಮಾಗಳಿಗೆ ಹೋಲಿಸಿ ಯಾರಾದರೂ ಎರಡು ಸೆಕೆಂಡ್‌ಗಳಲ್ಲಿ ಕಾಮೆಂಟ್ ಕಳುಹಿಸಿದರೆ, ನನ್ನ ಶ್ರಮ ಮತ್ತು ಶ್ರಮ ಎಲ್ಲವೂ ನಕಲು ಎಂದು ನಾನು ಭಾವಿಸುವುದಿಲ್ಲ” ಎಂದಿದ್ದಾರೆ.
”ಒಂದು ಗುಂಪು ಯಾವಾಗಲೂ ನನ್ನ ಮೇಲೆ ದಾಳಿ ಮಾಡಲು, ನನ್ನನ್ನು ಗುರಿಯಾಗಿಸಲು ನೋಡುತ್ತದೆ. ನನ್ನ ಕೊನೆಯ ಸಿನಿಮಾ(ಜವಾನ್) ಹಿಟ್ ಆಯಿತು, ಹಣ ಗಳಿಸಿತು, ಅದಕ್ಕಾಗಿ ಅವರು ಏನೂ ಹೇಳಿಲ್ಲ” ಎಂದರು.
ನನ್ನನ್ನು ಕೆಳಗಿಸಲು ನಿಮ್ಮ ಬಳಿ ಇರುವುದು ಇದೊಂದೇ ಮಾರ್ಗವೇ? ಅವನು ಗೆಲ್ಲಬಾರದು ಎಂಬ ಯೋಚನೆ ಇರುವವರಿಂದಲೇ ಇಂಥ ಟೀಕೆಗಳು ಬರುತ್ತವೆ. ರಜಿನಿ ಸರ್, ವಿಜಯ್ ಸರ್ ಮತ್ತು ಅಜಿತ್ ಸರ್ ಅವರಿಗೆ ಈ ಸಮಸ್ಯೆ ಇಲ್ಲ ಅನ್ನಿಸುತ್ತಿದೆಯೇ? ಹೋರಾಡಿ ಮುನ್ನಡೆಯಬೇಕು. ಇದೆಲ್ಲ ಗೊತ್ತಿಲ್ಲದೆ ಶಾರುಖ್ ಸರ್ ನನಗೆ ಫೋನ್ ಮಾಡ್ತಾರಾ? ಎಂದು ಹೇಳಿದ್ದಾರೆ.
ಸದ್ಯ ಅಟ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಶಾರುಖ್ – ವಿಜಯ್ ಅವರನ್ನು ಜೊತೆಯಾಗಿಸಿಕೊಂಡು ಸಿನಿಮಾ ಮಾಡಲಿದ್ದೇನೆ. ಇದು ನನ್ನ ಮುಂದಿನ ಆಗಿರಬಹುದೆಂದು ಹೇಳಿದ್ದರು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.