Semi-Final; ಭಾರತದ ಉತ್ತಮ ಆರಂಭ: 79 ರನ್ ಗಳಿಸಿದ್ದ ಗಿಲ್ ಗಾಯಾಳಾಗಿ ನಿವೃತ್ತಿ
ಅಬ್ಬರಿಸಿ ಔಟಾದ ರೋಹಿತ್ ಶರ್ಮ
Team Udayavani, Nov 15, 2023, 4:01 PM IST
ಮುಂಬಯಿ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ದದ ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 47 ರನ್ ಗಳಿಸಿ ನಿರ್ಗಮಿಸಿದರು. ಅವರು ತಲಾ 4 ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದರು.
ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶುಭ್ ಮನ್ ಗಿಲ್ 79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದು ಅಭಿಮಾನಿಗಳು ತೀವ್ರವಾಗಿ ನೊಂದುಕೊಳ್ಳಲು ಕಾರಣವಾಯಿತು. ಶುಭ್ಮನ್ ಗಿಲ್ ಕುಸಿದಿದ್ದು,ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಮುಂಬೈ ಶಾಖ ಅವರ ಬಳಲಿಕೆಗೆ ಕಾರಣ ಎನ್ನಲಾಗಿದೆ. ಗಾಳಿ ಬೀಸುತ್ತಿಲ್ಲ ಮತ್ತು ಮುಂಬೈನಲ್ಲಿ ಬಿರು ಬಿಸಿಲಿದ್ದು 34°C ಗರಿಷ್ಠ ತಾಪಮಾನ ದಾಖಲಾಗಿದೆ.
ಗಿಲ್ ಅತ್ಯಮೋಘ ಆಟವಾಡುತ್ತಿದ್ದರು. 65 ಎಸೆತಗಳಲ್ಲಿ 79 ರನ್ ಗಳಿಸಿದ್ದರು. 8 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸಿಡಿಸಿದ್ದರು.
ತಾಳ್ಮೆಯ ಆಟವಾಡುತ್ತಿರುವ ವಿರಾಟ್ ಕೊಹ್ಲಿ59 ಎಸೆತಗಳಲ್ಲಿ 50 ರನ್ ಮತ್ತು ಶ್ರೇಯಸ್ ಅಯ್ಯರ್ 15 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 27 ಓವರ್ ಗಳಲ್ಲಿ1 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.