Crocodile ಪ್ರತ್ಯಕ್ಷ: ಅನಂತಪುರಕ್ಕೆ ಭಕ್ತರ ದಂಡು
Team Udayavani, Nov 15, 2023, 11:45 PM IST
ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಕೊಳದಲ್ಲಿ ಮೊಸಳೆ ಕಾಣಿಸಿಕೊಂಡ ಬಳಿಕ ಬರುವ ಭಕ್ತರ ಸಂಖ್ಯೆ ಅಧಿಕವಾಗಿದೆ.
ಅನ್ಯರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಮೊಸಳೆಯದರ್ಶನಕ್ಕಾಗಿ ಸರೋವರದ ತಟದಲ್ಲಿ ಸಂಜೆ ತನಕ ಕಾಯುವುದು ಕಂಡುಬರುತ್ತಿದೆ. ನಿತ್ಯ ಭಕ್ತರಿಗೆ ಮೊಸಳೆಯ ದರ್ಶನವಾಗುತ್ತಿದೆ. ಆಗಾಗ ಕೊಳದ ಮೆಟ್ಟಿಲಿನಲ್ಲಿ ಅಲ್ಪ ಹೊತ್ತು ಕಾಣಿಸಿಕೊಳ್ಳುವ ಮೊಸಳೆ ಬಳಿಕ ಗುಹೆಗೆ ಮರಳುತ್ತಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ರಾಮನಾಥ್ ಶೆಟ್ಟಿ ತಿಳಿಸಿದ್ದಾರೆ.
ಮುಂದೆ ಅದಕ್ಕೆ ನಾಮಕರಣ, ನೈವೇದ್ಯ ಮುಂತಾದವುಗಳನ್ನು ತಂತ್ರಿಗಳು ಮತ್ತು ಆಡಳಿತ ಮಂಡಳಿಯವರು ಸೇರಿ ನಿರ್ಧರಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್ ತಿಳಿಸಿದರು.
ನಾಳೆ ಮಕರ ಸಂಭ್ರಮ
ಮೊಸಳೆ ಪ್ರತ್ಯಕ್ಷವಾಗಿ ಕ್ಷೇತ್ರದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಆ ಪ್ರಯುಕ್ತ ನ. 17ರಂದು ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ಸಭಾಂಗಣದಲ್ಲಿ “ಮಕರ ಸಂಭ್ರಮ’ ಕಾರ್ಯಕ್ರಮ ಜರಗಲಿದೆ. ಅಪರಾಹ್ನ 2.30ಕ್ಕೆ ಭಕ್ತರ ಸಮಾಲೋಚನೆ ಸಭೆ ಜರಗಲಿದೆ ಎಂದು ಕ್ಷೇತ್ರದ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.