ಎಲ್ಲರ ಕೈಗೆ ಸಿಕ್ಕರೆ ಖಂಡಿತ… ರಶ್ಮಿಕಾ Deepfake ವಿಡಿಯೋ ಬಗ್ಗೆ ರಕ್ಷಿತ್ ಮಾತು
Team Udayavani, Nov 16, 2023, 2:51 PM IST
ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಬಳಿಕ ಸುದ್ದಿಯಲ್ಲಿದ್ದಾರೆ. ಡೀಪ್ ಫೇಕ್ ವಿರುದ್ಧ ಅನೇಕ ಕಲಾವಿದರು ಧ್ವನಿ ಎತ್ತಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಕೇಸ್ ಕೂಡ ದಾಖಲಿಸಿದ್ದಾರೆ.
ಇಂಡೋ – ಬ್ರಿಟಿಷ್ ಸೋಶಿಯಲ್ ಮೀಡಿಯಾ ತಾರೆ ಝಾರಾ ಪಟೇಲ್ ಅವರ ಅಸಲಿ ವಿಡಿಯೋವನ್ನು ಬಳಸಿಕೊಂಡು ರಶ್ಮಿಕಾ ಅವರ ಮುಖವನ್ನು ಎಐ ಮೂಲಕ ಜೋಡಿಸಿ ಡೀಪ್ ಫೇಕ್ ಮಾಡಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಕುರಿತು ಬಿಟೌನ್ ಹಿರಿಯ ನಟ ಅಮಿತಾಭ್ ,ಟಾಲಿವುಡ್ ನಟ ನಾಗಚೈತನ್ಯ, ಗಾಯಕಿ ಚಿನ್ಮಯಿ, ನಟ ವಿಜಯ್ ದೇವರಕೊಂಡ ಸೇರಿದಂತೆ ಹಲವರು ರಶ್ಮಿಕಾ ಬೆನ್ನಿಗೆ ನಿಂತಿದ್ದರು.
ಇದೀಗ ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಸಿಂಪಲ್ ಸ್ಟಾರ್ ಅವರ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್- B’ ಸಿನಿಮಾ ರಿಲೀಸ್ ರೆಡಿಯಾಗಿದೆ. ಸಿನಿಮಾದ ಪ್ರಚಾರದ ಅಂಗವಾಗಿ ನಾನಾ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ.
ತೆಲುಗಿನ ಪ್ರೇಮ ಜರ್ನಲಿಸ್ಟ್ ಎನ್ನುವ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಅವರು ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಬಗ್ಗೆ ಮಾತನಾಡಿದ್ದಾರೆ.
“ಇಂತಹ ಸಾಫ್ಟ್ ವೇರ್ ಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಡಿಯೋ ವೈರಲ್ ಆಗುವ ಅದನ್ನು ನಿಯಂತ್ರಣಕ್ಕೆ ತರಬೇಕು. ಈ ರೀತಿಯ ಸಾಫ್ಟ್ ವೇರ್ ಗಳು ಎಲ್ಲರ ಕೈಗೆ ಸಿಕ್ಕರೆ ಖಂಡಿತ ಅಪಾಯ ಎದುರಾಗುತ್ತದೆ. ಇಂತಹ ಸಾಫ್ಟ್ ವೇರ್ ಗಳು ಸೂಕ್ತ ನಿಯಮಗಳೊಂದಿಗೆ ಬರಬೇಕು” ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಸದ್ಯ ಈ ಸಂದರ್ಶನದ ಪ್ರೋಮೊ ಮಾತ್ರ ರಿಲೀಸ್ ಆಗಿದೆ.
ʼಕಿರಿಕ್ ಪಾರ್ಟಿʼಯಲ್ಲಿ ಜೊತೆಯಾಗಿ ನಟಿಸಿದ್ದ ರಕ್ಷಿತ್ – ರಶ್ಮಿಕಾ ಪರಸ್ಪರ ಪ್ರೀತಿಸಿ ಮದುವೆಯಾಗುವ ನಿಟ್ಟಿನಲ್ಲಿ ಎಂಗೇಜ್ ಮೆಂಟ್ ಆಗಿದ್ದರು.
ಶುಕ್ರವಾರ(ನ.17 ರಂದು) ನಾಲ್ಕು ಭಾಷೆಗಳಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್- Bʼ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.