Farmers: ನೋಂದಣಿಯಾಗದ 89 ಸಾವಿರ ರೈತರು!


Team Udayavani, Nov 16, 2023, 4:23 PM IST

Farmers: ನೋಂದಣಿಯಾಗದ 89 ಸಾವಿರ ರೈತರು!

ಚಿಕ್ಕಬಳ್ಳಾಪುರ: ರೈತರ ಸಮಗ್ರ ಮಾಹಿತಿ ದಾಖಲಿಸುವ ಪ್ರೋಟ್ಸ್‌ ಆ್ಯಪ್‌ನಲ್ಲಿ ಜಿಲ್ಲೆಯ ಬರೋಬ್ಬರಿ 89,344 ರೈತರ ಜಮೀನು ವಿವರಗಳು ಇನ್ನೂ ನೋಂದಣಿ ಆಗದೇ ಹೊರ ಉಳಿದಿದ್ದು, ಇದರ ಪರಿಣಾಮ ಸರ್ಕಾರ ಬರದ ಹಿನ್ನೆಲೆಯಲ್ಲಿ ನೀಡುವ ಬೆಳೆ ನಷ್ಟ ಪರಿಹಾರ ಸಿಗುವುದು ಅನುಮಾನವಾಗಿದೆ.

ಬೆಳೆ ನಷ್ಟ ಪರಿಹಾರ ಪಡೆಯಬೇಕಾದರೆ ರೈತರ ಮಾಹಿತಿ ಸಮಗ್ರವಾಗಿ ಪ್ರೋಟ್ಸ್‌ ಆ್ಯಪ್‌ನಲ್ಲಿ ದಾಖಲಾಗಿರಬೇಕು. ಆದರೆಜಿಲ್ಲೆಯಲ್ಲಿ ಸಾಕಷ್ಟು ಅರಿವು ಮೂಡಿಸಿದರೂ ಪ್ರೋಟ್ಸ್‌ ಆ್ಯಪ್‌ನಲ್ಲಿ ಒಟ್ಟು 2,28,158 ರೈತರ ಪೈಕಿ ಇಲ್ಲಿವರೆಗೂ ಕೇವಲ 1,38,814 ರೈತರು ಆ್ಯಪ್‌ನಲ್ಲಿ ದಾಖಲಾಗಿದ್ದು, ಇನ್ನೂ 89,344 ರೈತರು ಹೊರಗೆ ಉಳಿದಿದ್ದಾರೆ.

ಕೃಷಿ ಇಲಾಖೆ ಎಲ್ಲಾ ರೈತರ ಸಮಗ್ರ ವಿವರಗಳನ್ನು ಪಹಣಿ ನಂ, ಸರ್ವೆ ನಂ, ವಿಸ್ತೀರ್ಣ, ಬೆಳೆ ವಿವರ ಮತ್ತಿತರ ಅಂಶಗಳನ್ನು ಡಿಜಿಟಲೀಕರಣ ಮಾಡುವ ದೃಷ್ಠಿಯಿಂದ ಹೊಸದಾಗಿ ಪರಿಚಯಸಿರುವ ಪ್ರೋಟ್ಸ್‌ ಆ್ಯಪ್‌ನಲ್ಲಿ ರೈತರ ವಿವರ ಹಾಗೂ ಪ್ಲಾಟ್‌ಗಳನ್ನು ಅಪ್ಲೋಡ್‌ ಮಾಡಬೇಕು. ಆದರೆ ಜಿಲ್ಲೆಯಲ್ಲಿ ಮಾತ್ರ ಇನ್ನೂ 89,344 ಮಂದಿ ರೈತರು ಪ್ರೋಟ್ಸ್‌ ಆ್ಯಪ್‌ನಲ್ಲಿ ನೋಂದಣಿ ಆಗದೇ ಇರುವುದು ಕೃಷಿ ಇಲಾಖೆ ನೀಡಿರುವ ಅಂಕಿ, ಅಂಶಗಳಿಂದ ದೃಢಪಟ್ಟಿದೆ.

ಫ‌ಲಾನುಭವಿಗಳ ನೈಜತೆಯನ್ನು ಖಾತ್ರಿ ಪಡಿಸಿಕೊಳ್ಳುವುದರ ಜೊತೆಗೆ ಸೌಲಭ್ಯಗಳು ದುರ್ಬಳಕೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಪ್ರೋಟ್ಸ್‌ ಆ್ಯಪ್‌ ಅಭಿವೃದ್ದಿಪಡಿಸಿದ್ದು, ರೈತರಿಗೆ ಬೆಳೆ ನಷ್ಟ ಪರಿಹಾರದಿಂದ ಹಿಡಿದು ಬೆಳೆ ವಿಮೆ ಪಾವತಿ, ಸರ್ಕಾರದಿಂದ ಏನೇ ಸೌಲಭ್ಯ ಪಡೆಯಲು ಪ್ರೋಟ್ಸ್‌ ಐಡಿನಲ್ಲಿ ರೈತರು ತಮ್ಮ ಜಮೀನು ವಿವರಗಳನ್ನು ದಾಖಲಿಸಿರಬೇಕು. ಆದರೆ ಜಿಲ್ಲೆಯಲ್ಲಿ ಪ್ರೋಟ್ಸ್‌ ಆ್ಯಪ್‌ ದಾಖಲಾತಿ ವಿಚಾರದಲ್ಲಿ ಅರ್ಧಕ್ಕರ್ಧ ರೈತರು ಹೆಸರು ನೋಂದಣಿ ಆಗದೇ ಇರುವುದು ಎದ್ದು ಕಾಣುತ್ತಿದ್ದು, ಅದೇ ರೀತಿ ಪ್ಲಾಟ್‌ಗಳು ಕೂಡ ನೋಂದಣಿಗೆ ಬಾಕಿ ಇವೆ.

ಗ್ರಾಮ ಒನ್‌, ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ: ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ರೈತರು ಪ್ರೋಟ್ಸ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆಧಾರ್‌ , ಪಹಣಿ, ಬ್ಯಾಂಕ್‌ ಪಾಸ್‌ಬುಕ್‌, ಮೊಬೈಲ್‌ ಸಂಖ್ಯೆ ಕಡ್ಡಾಯವಾಗಿ ನಮೂದಗಿಸಬೇಕು. ಪ್ರೋಟ್ಸ್‌ ಆ್ಯಪ್‌ನಲ್ಲಿ ನೋಂದಣಿ ಆಗದ ರೈತರಿಗೆ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಕೂಡ ಬರಲ್ಲ.

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

ಸಂಸದ ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

MP ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.