Police: ವಿದೇಶಿಗರಿಗೆ ಮನೆ ಬಾಡಿಗೆ ನೀಡುವಾಗ ಎಚ್ಚರ ಇರಲಿ
Team Udayavani, Nov 17, 2023, 12:46 AM IST
ಉಡುಪಿ: ಯಾವುದೇ ಪೂರ್ವಾಪರ ಮಾಹಿತಿ ಪಡೆಯದೇ ವಿದೇಶಿ ಪ್ರಜೆಗಳಿಗೆ ವಸತಿ ಸಮುಚ್ಚಯ ಅಥವಾ ಮನೆ ಬಾಡಿಗೆ ನೀಡುವಾಗ ಎಚ್ಚರ ವಹಿಸುವುದು ಅಗತ್ಯ.
ವಿದೇಶಿ ಪ್ರಜೆಗಳಿಗೆ ಮನೆ ನೀಡಿದ ಅನಂತರದಲ್ಲಿ ಪೊಲೀಸರ ವಿಚಾರಣೆಗೆ ಒಳಗಾಗುವ ಬದಲು ಮೊದಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಅಥವಾ ವಿದೇಶಿ ಪ್ರಜೆಗಳ ವೀಸಾ ಮಾಹಿತಿಯನ್ನು ಪೂರ್ಣವಾಗಿ ಪಡೆದು ಮುಂದುವರಿಯುವುದು ಉತ್ತಮ.
ವಿದೇಶದಿಂದ ಬರುವ ಪ್ರತೀ ಪ್ರಜೆಯ ಮಾಹಿತಿಯನ್ನು ಜಿಲ್ಲಾ ಪೊಲೀಸರು ಸಂಗ್ರಹಿಸುತ್ತಾರೆ. ಅವರ ವೀಸಾ ಅವಧಿ ಮುಗಿಯುತ್ತಿದ್ದಂತೆ ಸ್ವದೇಶಕ್ಕೆ ಹೋಗಬೇಕಾಗುತ್ತದೆ. ಅವಧಿ ಮುಗಿದರೂ ಇಲ್ಲಿಯೇ ಇರುವವರು ಅಥವಾ ಇಲ್ಲಿದ್ದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯೂ ಇರುತ್ತದೆ. ಆಗ ಅಂಥವರಿಗೆ ಮನೆ ಬಾಡಿಗೆಗೆ ನೀಡಿರುವ ಮಾಲಕರು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಯೂ ಇರುತ್ತದೆ.
ಪ್ರವಾಸಿ ವೀಸಾದಡಿ ಬರುವ ವಿದೇಶಿ ಪ್ರಜೆಗಳಿಗೆ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಬಾಡಿಗೆ ನೀಡುವಂತಿಲ್ಲ. ಪ್ರವಾಸಿ ಹೊಟೇಲ್‌ಗಳಲ್ಲಿ ಅವರು ವಾಸವಿದ್ದು, ಆ ಮಾಹಿತಿಯನ್ನು ಹೊಟೇಲ್‌ನಿಂದಲೇ ಪೊಲೀಸರಿಗೆ ನೀಡಲಾಗುತ್ತದೆ.
ವಿದ್ಯಾಭ್ಯಾಸ ಅಥವಾ ದೀರ್ಘಾ ವಧಿಗೆ ಉಳಿಯಲು ಬರುವ ವಿದೇಶಿ ಪ್ರಜೆಗಳಿಗೆ ಮನೆ, ಅರ್ಪಾಟ್‌ಮೆಂಟ್‌ಗಳಲ್ಲಿ ಬಾಡಿಗೆಗೆ ಇರಲು ವೀಸಾದ ಅವಧಿಯ ಆಧಾರದಲ್ಲಿ ಅವಕಾಶ ಕಲ್ಪಿಸಬಹುದು. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.
ವಿದೇಶಿಗರಿಗೆ ಮನೆ ನೀಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಇದ್ದಾಗ ಪೊಲೀಸರು ಬಂದು ಪ್ರಾಥಮಿಕ ತನಿಖೆ ನಡೆಸುವುದು ಸಹಜ. ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕಾಗುತ್ತದೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವಾಗ ಎಲ್ಲವನ್ನು ಗಮನಿಸಬೇಕಾಗುತ್ತದೆ. ಕೆಲವು ದೇಶದ ಪ್ರಜೆಗಳಿಗೆ ವಿಶೇಷ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡುವುದು ಅತಿ ಮುಖ್ಯ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಹಿತಿ ನೀಡಿ
ವಿದೇಶಿಗರಿಗೆ ಮನೆ ಅಥವಾ ವಸತಿ ಸಮುಚ್ಚಯದಲ್ಲಿ ಬಾಡಿಗೆ ನೀಡುವಾಗ ಎಚ್ಚರ ವಹಿಸಬೇಕಾಗುತ್ತದೆ. ವಿದೇಶಿ ಪ್ರವಾಸಿಗರಿಗೆ ಮನೆ ಬಾಡಿಗೆಗೆ ನೀಡಲು ಬರುವುದಿಲ್ಲ. ಪೊಲೀಸರಿಗೆ ಮಾಹಿತಿ ನೀಡಿಯೇ ಬಾಡಿಗೆಗೆ ಉಳಿಸಿಕೊಳ್ಳಬೇಕಾಗುತ್ತದೆ.
– ಡಾ| ಅರುಣ್ ಕೆ., ಎಸ್.ಪಿ. ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.